ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜೆಡಿಎಸ್ ಬಗ್ಗೆ ಮಾತಾಡೋ ಮೊದಲು ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಅಂತ ನೋಡಿಕೊಳ್ಳಲಿ. 2028 ಕ್ಕೆ ಬಿಜೆಪಿ-ಜೆಡಿಎಸ್ ಕನಿಷ್ಠ 150 ಸ್ಥಾನ ಗೆಲ್ಲಲಿದೆ ಅಂತ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿರುಗೇಟು ಕೊಟ್ಟಿದ್ದಾರೆ.
ಬಿಜೆಪಿ ಜೊತೆ ಜೆಡಿಎಸ್ ವಿಲೀನ ಮಾಡುತ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಪ್ರೆಸ್ ಕ್ಲಬ್ ಸಂವಾದದಲ್ಲಿ ಪ್ರತಿಕ್ರಿಯೆ ನೀಡಿದ ಅವರು, 2 ಪಾರ್ಟಿ ಸಿಸ್ಟಮ್ ಯಾರಿಗೆ ಅನುಕೂಲ ಆಗುತ್ತದೆ? ಡಿಕೆ ಶಿವಕುಮಾರ್ ಗಾ? ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ವಸತಿ ಸಚಿವರ ಪಿಎಸ್ ನಿಂದಲೇ ಅಕ್ರಮ ರೆಸಾರ್ಟ್ ನಿರ್ಮಾಣ; ಭಾರೀ ಆಕ್ರೋಶ
ಜೆಡಿಎಸ್ ನ 37% ವೋಟನ್ನ ಹಳೇ ಮೈಸೂರು (old Mysuru) ಭಾಗದಲ್ಲಿ ಉಳಿಸಿಕೊಂಡು ಬಂದಿದ್ದೇವೆ. ಜೆಡಿಎಸ್ ಅಲ್ಲಿಗೆ ಮಾತ್ರ ಸೀಮಿತ ಆಗಿಲ್ಲ. ಸವದತ್ತಿಯಲ್ಲಿ 30,000 ವೋಟ್ ತಗೊಂಡು. ಸೇಡಂ, ರಾಯಭಾಗ, ಶೃಂಗೇರಿ ಸೇರಿ ಅನೇಕ ಕ್ಷೇತ್ರದಲ್ಲಿ ವೋಟ್ ಪಡೆದಿದ್ದೇವೆ. ಕಾಂಗ್ರೆಸ್ ನಲ್ಲಿ (Congress) ಇರೋ ವ್ಯಕ್ತಿಗಳು ಜೆಡಿಎಸ್ ಶಕ್ತಿಯನ್ನ ಪ್ರಶ್ನೆ ಮಾಡಬಹುದು. ಜೆಡಿಎಸ್ ಶಕ್ತಿ ಏನು ಅಂತ 4 ವಿಧಾನಸಭೆ ಚುನಾವಣೆಯಲ್ಲಿ ಜನ ತೋರಿಸಿದ್ದಾರೆ. 55 ಲಕ್ಷ ಮತ ಜೆಡಿಎಸ್‌ಗೆ ಬಂದಿದೆ ಅಂತ ತಿಳಿಸಿದರು.
ಕಾಂಗ್ರೆಸ್ ಪರಿಸ್ಥಿತಿ ಬಿಹಾರದಲ್ಲಿ ಏನಾಗಿದೆ? ಬೇರೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ಹೇಗೆ ಆಗಿದೆ? ಕಾಂಗ್ರೆಸ್ ನ್ಯಾಷನಲ್ ಪಾರ್ಟಿಯಾಗಿ ಉಳಿದಿಲ್ಲ. ಕಾಂಗ್ರೆಸ್ ಅವರ ಶಕ್ತಿ ಕುಂದಿದೆ ಅಂತ ಡಿಕೆಶಿಗೆ ನಿಖಿಲ್ ತಿರುಗೇಟು ಕೊಟ್ಟರು. ಇದನ್ನೂ ಓದಿ: ಜಿ ರಾಮ್ ಜಿ ಯೋಜನೆಯಲ್ಲಿ ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರ: ಬೊಮ್ಮಾಯಿ
ನಾವು ಬಿಜೆಪಿ-ಜೆಡಿಎಸ್ ಒಟ್ಟಾಗಿ ಬದ್ಧತೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಜೆಡಿಎಸ್ ಶಕ್ತಿ ಏನು ಅಂತ ಲೋಕಸಭೆಯಲ್ಲಿ ಗೊತ್ತಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ನೈಸರ್ಗಿಕ ಮೈತ್ರಿ. ನಾಯಕರ ಜೊತೆ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದಾರೆ. 2028ರ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನ ಬಿಜೆಪಿ-ಜೆಡಿಎಸ್ ಗೆಲ್ಲಲಿದೆ. ಬರೆದಿಟ್ಟುಕೊಳ್ಳಿ ಅಂತ ಭವಿಷ್ಯ ನುಡಿದರು. ಇದನ್ನೂ ಓದಿ: ಕಾಫಿನಾಡ ಕಾಂಗ್ರೆಸ್‍ನಲ್ಲಿ ಭಿನ್ನಮತದ ಹೊಗೆ – ಪಕ್ಷಕ್ಕೆ ಗುಡ್ ಬೈ ಹೇಳಿದ ಡಿಕೆಶಿ ಆಪ್ತ


