ಎನ್‌ಡಿಎ ಅಭ್ಯರ್ಥಿ ನಿಖಿಲ್‌ಗೆ ಮೋದಿ ಆಶೀರ್ವಾದ ಇದೆ: ಬಿಎಸ್‌ವೈ

By
1 Min Read

– ನಿಖಿಲ್‌ಗೆ ಜೆಡಿಎಸ್-ಬಿಜೆಪಿ ಶಾಲು ಹೊದಿಸಿದ ಯಡಿಯೂರಪ್ಪ
– ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ‘ಮೈತ್ರಿ’ ನಾಯಕರು

ಬೆಂಗಳೂರು: ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅಂತಾ ಘೋಷಣೆ ಮಾಡಿದ್ದೇವೆ. ಅವರ ಮೇಲೆ ಮೋದಿ ಆಶೀರ್ವಾದ ಇದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B.S.Yediyurappa) ತಿಳಿಸಿದರು.

ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿ ಎಂದು ಅಧಿಕೃತವಾಗಿ ಯಡಿಯೂರಪ್ಪ ಘೋಷಿಸಿದರು. ಬಳಿಕ ನಿಖಿಲ್‌ಗೆ ಹೂಗುಚ್ಛ ನೀಡಿ ನೀಡಿದರು. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳ ಶಾಲನ್ನು ನಿಖಿಲ್‌ಗೆ ಯಡಿಯೂರಪ್ಪ ಹಾಕಿದರು. ಹೂವಿನ ಹಾರ ಹಾಕಿ ಅಭಿನಂದಿಸಿದರು. ಜೊತೆಗೆ ಎಲ್ಲಾ ನಾಯಕರು ವಿಕ್ಟರಿ ಸಿಂಬಲ್ ತೋರಿಸಿ ಪರಸ್ಪರ ಕೈ ಕುಲುಕಿದರು. ಇದನ್ನೂ ಓದಿ: ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ: ಹೆಚ್‌ಡಿಡಿ

ಈ ವೇಳೆ ಮಾತನಾಡಿದ ಬಿಎಸ್‌ವೈ, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಅಂತಾ ಘೋಷಣೆ ಮಾಡಿದ್ದೇವೆ. ಮೋದಿ ಆಶೀರ್ವಾದ ಇದೆ. ನಿಖಿಲ್ ಕುಮಾರಸ್ವಾಮಿ ನೂರಕ್ಕೆ ನೂರು ಗೆಲ್ತಾರೆ. ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಆಯ್ಕೆ ಮಾಡಿದ್ದೇವೆ. ಮೋದಿಯವರ ಆಶೀರ್ವಾದ, ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

ನಾವೆಲ್ಲ ಒಟ್ಟಾಗಿ ಸೇರಿದ್ದೇವೆ. ನೂರಕ್ಕೆ ನೂರು ಗೆಲ್ತೇವೆ, ಬಂದು ಭೇಟಿ ಮಾಡ್ತೇವೆ. ಎನ್‌ಡಿಎ ನಾಯಕರು ಪ್ರವಾಸ ಮಾಡ್ತೀವಿ. ಪಕ್ಷಾಂತರ ಮಾಡಿದವರ ಬಗ್ಗೆ ಮಾತಾಡೊಲ್ಲ. ನಾವು ನಮ್ಮ ಅಭ್ಯರ್ಥಿ ಪರ ಕೆಲಸ ಮಾಡ್ತೀವಿ. ನಾವೆಲ್ಲ ಒಟ್ಟಾಗಿ ಕೆಲಸ ಮಾಡ್ತೀವಿ ಎಂದು ಹೇಳಿದರು. ಇದನ್ನೂ ಓದಿ: ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಕೆ

ದೊಡ್ಡ ಅಂತರದಲ್ಲಿ ನಿಖಿಲ್ ಗೆಲ್ತಾರೆ. ಯೋಗೇಶ್ವರ್ ಬಗ್ಗೆ ನಾನು ಮಾತಾಡೊಲ್ಲ. ನಿಖಿಲ್‌ಗೆ ನಾವು ಬೆಂಬಲ ಕೊಡ್ತೀವಿ ಎಂದು ತಿಳಿಸಿದರು.

Share This Article