ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ

Public TV
1 Min Read

ಮೆಗಾಸ್ಟಾರ್ ಚಿರಂಜೀವಿ ಮನೆಮಗಳು ನಿಹಾರಿಕಾ ಕೊನಿಡೆಲಾ (Niharika Konidela)  ಅವರು ತಮ್ಮ ಅಭಿಮಾನಿಗಳಿಗೆ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ ಮದುವೆ ಬಗ್ಗೆ ಕೇಳಲಾಗಿದ್ದು, ಈ ಬಗ್ಗೆ ಅವರು ರಿಯಾಕ್ಟ್ ಮಾಡಿದ್ದಾರೆ.

ನಿಹಾರಿಕಾ ಕೊನಿಡೆಲಾ ಅವರು ನಿರ್ಮಾಪಕಿ, ನಟಿಯಾಗಿ ಮತ್ತೆ ತೆಲುಗು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ‘ಡೆಡ್ ಪಿಕ್ಸೆಲ್’ ವೆಬ್ ಸೀರಿಸ್‌ಗೆ ಬಣ್ಣ ಹಚ್ಚುವ ಮೂಲಕ ನಿಹಾರಿಕಾ ಸುದ್ದಿಯಲ್ಲಿದ್ದಾರೆ. ವೆಬ್ ಸೀರಿಸ್ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಅತೀ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

ಇತ್ತೀಚಿನ ಸಂದರ್ಶನವೊಂದರಲ್ಲಿ ನಿಹಾರಿಕಾಗೆ, ಸಹೋದರ ವರುಣ್- ಲಾವಣ್ಯ (Lavanya) ಮದುವೆ ಸುದ್ದಿ ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ಈ ಪ್ರಶ್ನೆಯನ್ನ ನಟಿ ನಿರಾಕರಿಸಿ, ‘ಡೆಡ್ ಪಿಕ್ಸೆಲ್’ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಈ ಮೂಲಕ ನೋ ಕಾಮೆಂಟ್ಸ್ ಎಂದಿದ್ದಾರೆ.

ಮೂಲಗಳ ಪ್ರಕಾರ, ವರುಣ್- ಲಾವಣ್ಯ ಇದೇ ಜೂನ್‌ಗೆ ಎಂಗೇಜ್‌ಮೆಂಟ್ ಮಾಡಿಕೊಳ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಮದುವೆ ಎಂಬ ಸುದ್ದಿ ಇದೆ. ಮೆಗಾ ಫ್ಯಾಮಿಲಿಗೆ ಲಾವಣ್ಯ ಆತ್ಮೀಯರಾಗಿದ್ದಾರೆ.  2 ವರ್ಷಗಳ ಹಿಂದೆ ಲಾವಣ್ಯ ನಿಹಾರಿಕಾ- ಚೈತನ್ಯ ಮದುವೆಗೆ ಬಂದಿದ್ದರು. ವರುಣ್ ತೇಜ್ ಕುಟುಂಬದಲ್ಲಿ ತಾವು ಒಬ್ಬರಾಗಿ ಭಾಗಿಯಾಗಿದ್ದರು. ಹಾಗಾಗಿ ವರುಣ್‌ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದೀಗ ನಿಹಾರಿಕಾ ದಾಂಪತ್ಯಕ್ಕೆ ಡಿವೋರ್ಸ್ ಮೂಲಕ ಬ್ರೇಕ್ ಬಿದ್ದಿದೆ ಎಂದು ಹೇಳಲಾಗುತ್ತಿದೆ.

Share This Article