ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ – ಬೆಂಗ್ಳೂರು, ಶಿವಮೊಗ್ಗ, ಹುಬ್ಬಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ

Public TV
2 Min Read

ಬೆಂಗಳೂರು/ಶಿವಮೊಗ್ಗ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದ ವ್ಯಕ್ತಿಗಳ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಬೆಂಗಳೂರು, ಶಿವಮೊಗ್ಗ (Shivamogga), ಹುಬ್ಬಳಿ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದಲ್ಲಿ ಕಡೆ ದಾಳಿ ನಡೆದಿದೆ. ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ದಾಳಿ ನಡೆಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ಮೋದಿ ಎನ್ನುವವರ ಕಪಾಳಕ್ಕೆ ಹೊಡೆಯಿರಿ ಎಂದಿದ್ದ ತಂಗಡಗಿ ವಿರುದ್ಧ ಎಫ್‌ಐಆರ್‌ 

ಇನ್ನೂ ಶಿವಮೊಗ್ಗದ ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿಯಲ್ಲಿಯಲ್ಲಿ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳ ತಂಡವು ಹಳೆ ಆರೋಪಿ ಅಬ್ದುಲ್ ಮತೀನ್, ಬಾಂಬರ್ ಮುಸಾವೀರ್ ಹುಸೇನ್, ಬಾಂಬರ್‌ಗೆ ಸಹಾಯ ಮಾಡಿದ ಸಾರ್ಧಾರ್ ನವೀದ್, ಈ ಮೂವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬಾಂಬರ್ ಮುಸಾವೀರ್ ಹುಸೇನ್ ಚೆನ್ನೈನಿಂದ ಬಂದಾಗ, ಮತೀನ್‌, ನವೀದ್‌ ಸಹಾಯ ಮಾಡಿದ್ದರು ಎಂದು ಹೇಳಲಾಗಿದೆ. ಸದ್ಯ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ ಮಾಹಿತಿ ಕಲೆಹಾಕುತ್ತಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಶಂಕಿತ ಉಗ್ರ ಯಾರು ಅನ್ನೋದನ್ನು ಇತ್ತೀಚೆಗಷ್ಟೇ ಎನ್‌ಐಎ ಪತ್ತೆ ಮಾಡಿತು. ಈ ಮೂಲಕ 2019ರಿಂದ ಎನ್‍ಐಎ ಅಧಿಕಾರಿಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಅನ್ನೋ ಮಾಹಿತಿಯನ್ನೂ ಬಹಿರಂಗಪಡಿಸಿತ್ತು. ಇದನ್ನೂ ಓದಿ: ವಾಷಿಂಗ್‌ ಮಷಿನ್‌ನಲ್ಲಿತ್ತು 2.54 ಕೋಟಿ ಹಣ – ಪರಿಶೀಲನೆ ವೇಳೆ ಇ.ಡಿ ಶಾಕ್‌!

ಟೋಪಿ ಮೂಲ ಪತ್ತೆ:
ಶಂಕಿತ ಧರಿಸಿದ್ದ ಟೊಪಿಯ ಮೂಲವನ್ನು ಕೂಡ ಎನ್‍ಐಎ ಪತ್ತೆ ಹಚ್ಚಿದೆ. ಶಂಕಿತ ಧರಿಸಿದ್ದ ಟೋಪಿಯನ್ನು ತಮಿಳುನಾಡಿನ ಮಾಲ್ ಒಂದರಲ್ಲಿ ಖರೀದಿಸಿದ್ದಾನೆ. ಖರೀದಿ ವೇಳೆ ಮುಖ ಚಹರೆ ಸಮೇತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಈಗಾಗಲೇ ಪತ್ತೆಯಾದ ಕ್ಯಾಪ್‍ನಲ್ಲಿ ಶಂಕಿತನ ಕೂದಲು ಕೂಡ ಸಿಕ್ಕಿದೆ. ಕೂದಲು ಆಧರಿಸಿ ಡಿಎನ್‍ಎ ಟೆಸ್ಟ್ ಸಹ ಒಳಪಡಿಸಿದೆ. ಒಟ್ಟಿನಲ್ಲಿ ಎನ್‍ಐಎ ತನಿಖೆ ವೇಳೆ ಇಬ್ಬರು ಶಿವಮೊಗ್ಗದವರೆಂಬ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೂ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಾಂಬರ್ `ಉಗ್ರ’ ಹೆಜ್ಜೆ:
ಈ ಉಗ್ರ 2019ರಿಂದ ಬೇಕಾಗಿದ್ದಾನೆ. 2023ರ ಮಾರ್ಚ್-ಜುಲೈ ಮಹಾರಾಷ್ಟ್ರದಲ್ಲಿದ್ದ, ಜುಲೈ-ಡಿಸೆಂಬರ್ ವರೆಗೆ ಕರ್ನಾಟಕದಲ್ಲಿದ್ದ, 2024ರ ಜನವರಿಯಲ್ಲಿ ಕೇರಳದಲ್ಲಿದ್ದ, ಫೆಬ್ರವರಿಯಲ್ಲಿ ತಮಿಳುನಾಡಿನಲ್ಲಿದ್ದ, ಮಾರ್ಚ್ ನಲ್ಲಿ ಕರ್ನಾಟಕಕ್ಕೆ ಮತ್ತೊಮ್ಮೆ ಬಂದಿದ್ದ ಎಂಬ ಮಾಹಿತಿ ಸಿಕ್ಕಿದೆ.

Share This Article