ಕೋಲಾರ: ಎನ್‌ಐಎ (NIA) ನೊಟೀಸ್ ನೀಡಿರುವುದು ನಿಜ. ವಿಚಾರಣೆಗೆ ಹಾಜರಾಗುತ್ತೇವೆ ಎಂದು ಸತೀಶ್ ಗೌಡ ಅವರ ಪತ್ನಿ ಹೇಮಲತಾ ತಿಳಿಸಿದ್ದಾರೆ.
ಕೋಲಾರದಲ್ಲಿ (Kolar) ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು. ಎನ್‌ಐಎಯಿಂದ ನೊಟೀಸ್ ಬಂದಿರುವುದು ನಿಜ. ಮೂರು ವರ್ಷದ ಹಿಂದೆ ನನ್ನ ಪತಿ ಏರ್‌ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಸಿಮ್ ಕಾರ್ಡ್ ನೀಡಿರುವ ಕಾರಣ ವಿಚಾರಣೆಗೆ ಕರೆದಿದ್ದಾರೆ. ಈ ಹಿಂದೆ 2023ರಲ್ಲಿ ವಿಚಾರಣೆಗೆ ಕರೆದಿದ್ದರು. ಆಗ ಆಂಟಿಸಿಪೇಟರಿ ಬೇಲ್ ಪಡೆಯಲಾಗಿತ್ತು. ಈಗ ಮತ್ತೆ ವಿಚಾರಣೆಗೆ ಕರೆದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ – 20ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್
10.30ಕ್ಕೆ ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಕರೆದಿದ್ದಾರೆ. ನಾನು, ನನ್ನ ಪತಿ ವಿಚಾರಣೆಗೆ ತೆರಳುತ್ತೇವೆ. ಅವರು ಕಳೆದ ಮೂರು ವರ್ಷಗಳಿಂದ ಕೆಲಸ ಇಲ್ಲದೆ ಮನೆಯಲ್ಲೇ ಇದ್ದಾರೆ. ಮಂಗಳವಾರ ಎನ್‌ಐಎ ಅಧಿಕಾರಿಗಳು, ಪೊಲೀಸರು ಮನೆಗೆ ಬಂದು ನೊಟೀಸ್ ನೀಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹಳಸಿದ ದಾಲ್ ಬಡಿಸಿದ್ದಕ್ಕೆ ಕ್ಯಾಂಟೀನ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಶಾಸಕ
ಪೊಲೀಸರ ಭೇಟಿ ಹಿನ್ನೆಲೆ ಮಂಗಳವಾರದಿಂದ ನಾಪತ್ತೆಯಾಗಿರುವ ಸತೀಶ್ ಗೌಡ ಬದಲಿಗೆ ಪತ್ನಿಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಎನ್‌ಐಎ ಅಧಿಕಾರಿಗಳು ತೆರಳಿದ್ದಾರೆ. ಇದೀಗ ಸತೀಶ್ ಗೌಡ ಅವರ ಪತ್ನಿ ಹೇಮಾವತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಮೂವರು ಶಂಕಿತ ಉಗ್ರರ ಬಂಧನ ಕೇಸ್ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದ ಉಗ್ರ ನಾಸೀರ್
ಸತೀಶ್ ಗೌಡ ಅವರು ಮೂಲತಃ ಕೋಲಾರ ತಾಲೂಕಿನ ವಾನರಾಶಿ ಮೂಲದವರು. ಕಳೆದ ಹಲವು ವರ್ಷಗಳಿಂದ ಅಂದರೆ ಮದುವೆಗೂ ಮುನ್ನ ಬೆಂಗಳೂರಿನಲ್ಲೇ ವಾಸವಿದ್ದರು. ಮದುವೆ ಬಳಿಕ ಅತ್ತೆ ಮನೆ ಭಟ್ರಹಳ್ಳಿಯಲ್ಲಿ ವಾಸವಿದ್ದಾರೆ.