* ಬೆಂಗಳೂರು, ಕೋಲಾರದಲ್ಲಿ ಎನ್‌ಐಎ ಬೇಟೆ
* 2023ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೇಡ್ ಪತ್ತೆ ಪ್ರಕರಣದಲ್ಲಿ ನಡೆದಿತ್ತು ಶೋಧ
ಬೆಂಗಳೂರು: ಎಲ್‌ಇಟಿ ಭಯೋತ್ಪಾದಕ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಕೋಲಾರದಲ್ಲಿ ಕಾರ್ಯಾಚರಣೆ ನಡೆಸಿದ ಎನ್‌ಐಎ, ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರನ್ನು ಬಂಧಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಮನೋವೈದ್ಯ ಡಾ. ನಾಗರಾಜ್, ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಚಾನ್ ಪಾಷಾ ಮತ್ತು ತಲೆಮರೆಸಿಕೊಂಡಿರುವ ಆರೋಪಿಯ ತಾಯಿ ಅನೀಸ್ ಫಾತಿಮಾರನ್ನು ಬಂಧಿಸಲಾಗಿದೆ. ಶೋಧನಾ ಸಮಯದಲ್ಲಿ, ಬಂಧಿತ ಆರೋಪಿಗಳು ಮತ್ತು ಇತರ ಶಂಕಿತರ ಮನೆಗಳಿಂದ ವಿವಿಧ ಡಿಜಿಟಲ್ ಸಾಧನಗಳು, ನಗದು, ಚಿನ್ನ ಮತ್ತು ಅಪರಾಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
2023 ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೈಡ್‌ಗಳು ಪತ್ತೆಯಾಗಿದ್ದವು. ಜೀವಂತ ಗ್ರೆನೇಡನ್ನು ತರಲು ಟಿ.ನಾಸೀರ್ ಸೂಚಿಸಿದ್ದ. ಜುನೈದ್ ಮೂಲಕ ಇದನ್ನು ತರಿಸಿದ್ದ. ಬಳಿಕ ನಾಸೀರ್‌ನನ್ನು ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸಿತ್ತು. ಈಗಾಗಲೇ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನಾಸೀರ್ ಜೈಲಿನಲ್ಲಿದ್ದಾನೆ.
ಕೋರ್ಟ್‌ಗಳಲ್ಲಿ ಹಣ ಎಕ್ಸ್‌ಚೇಂಜ್ ಮಾಡಲು ಎಎಸ್‌ಐ ಚಾನ್ ಪಾಷಾ ಸಹಾಯ ಮಾಡಿದ್ದ. ನಾಸೀರ್ ವೈದ್ಯರಿಂದ ಮೊಬೈಲ್ ಪಡೆಯುತ್ತಿದ್ದ. ಜೀವಂತ ಗ್ರೆನೇಡ್ ಕೇಸ್‌ನಲ್ಲಿ ಜುನೈದ್ ಎಸ್ಕೇಪ್ ಆಗಿದ್ದಾನೆ.