ಏ.10 ರಿಂದ ಟೋಲ್‌ಗಳಲ್ಲಿ ನಗದು ಸ್ವೀಕಾರ ಸಂಪೂರ್ಣ ಬಂದ್‌!

1 Min Read

– ಸರ್ಕಾರಿ ಗುರುತಿನ ಚೀಟಿ ತೋರಿಸಿ ಟೋಲ್‌ ವಿನಾಯ್ತಿಯೂ ರದ್ದು

ನವದೆಹಲಿ: ದೇಶದ ಎಲ್ಲಾ ಟೋಲ್ ಗಳನ್ನ (Toll) ಡಿಜಿಟಲೀಕರಣಗೊಳಿಸುವತ್ತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಹೆಜ್ಜೆಯಿಟ್ಟಿದೆ. ಹಾಗಾಗಿ ಏಪ್ರಿಲ್‌ 10 ರಿಂದ ಜಾರಿಯಾಗುವಂತೆ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನ ನಿಲ್ಲಿಸಲಾಗುತ್ತಿದೆ.

ಟೋಲ್ ಪ್ಲಾಜಾ (Toll Plaza) ಹಾದು ಹೋಗಲು ಇಲ್ಲದ ವಾಹನಗಳಿಗೆ ಯುಪಿಐ ಮೂಲಕ ಪಾವತಿಸುವ ಪರ್ಯಾಯ ಆಯ್ಕೆ ನೀಡಲಾಗಿದೆ. ಆದರೆ, ಈ ಸೌಲಭ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಅಂದರೆ, ಯುಪಿಐ ವಹಿವಾಟು ನಡೆಸಿದಲ್ಲಿ ಸಾಮಾನ್ಯ ಟೋಲ್ ಶುಲ್ಕಕ್ಕಿಂತ ಶೇ.25 ರಷ್ಟು ಹೆಚ್ಚುವರಿ ಹಣವನ್ನ ಚಾಲಕರು ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: ನವಿ ಮುಂಬೈನಲ್ಲಿ ತನ್ನ ಮೊದಲ ಇನ್-ಮಾಲ್ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಿದ ಟೆಸ್ಲಾ

ಒಂದು ವೇಳೆ ಫಾಸ್ಟ್‌ಟ್ಯಾಗ್‌ ಮತ್ತು ಯುಪಿಐ (UPI) ಎರಡೂ ಪಾವತಿ ವಿಧಾನಗಳನ್ನ ಚಾಲಕರು ನಿರಾಕರಿಸಿದ್ರೆ, ರಾಷ್ಟ್ರೀಯ ಹೆದ್ದಾರಿ ನಿಯಮಗಳಡಿ ವಾಹನ ಪ್ರವೇಶವನ್ನ ನಿರಾಕರಿಸಬಹುದು. ಅಥವಾ ಇ-ನೋಟಿಸ್‌ ನೀಡಬಹುದು. 3 ದಿನಗಳ ಒಳಗೆ ದಂಡದ ಮೊತ್ತ ಪಾವತಿಸದೇ ಇದ್ದರೆ ದಂಡದ ಮೊತ್ತ ದುಪ್ಪಟ್ಟಾಗಬಹುದು ಎಂದು ಸೂಚಿಸಲಾಗಿದೆ.

ಟೋಲ್‌ ಬೂತ್‌ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಈ ನಿರ್ಧಾರಕ್ಕೆ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕದನ ವಿರಾಮಕ್ಕೆ ಒಪ್ಪದ ಇರಾನ್‌ ಮೇಲೆ ಮಿಸೈಲ್‌ ಮಳೆಗರೆದ ಇಸ್ರೇಲ್‌ – ಹಲವೆಡೆ ಸ್ಫೋಟ

Share This Article