ಮುಂದಿನ ಸಿಎಂ `ಸತೀಶ್ ಜಾರಕಿಹೊಳಿ’ – ಸಚಿವರ ಸಮ್ಮುಖದಲ್ಲೇ ಬೆಂಬಲಿಗನ ಘೋಷಣೆ!

Public TV
1 Min Read

ತುಮಕೂರು: ನಗರದಲ್ಲಿ (Tumakuru) ನಡೆಯುತ್ತಿದ್ದ ಡಿಎಸ್‍ಎಸ್ ಸಭೆಯಲ್ಲಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ (Satish Jarkiholi) ಎಂಬ ಘೋಷಣೆ ಕೇಳಿಬಂದಿದೆ. ಸತೀಶ್ ಜಾರಕಿಹೊಳಿಯವರ ಸಮ್ಮುಖದಲ್ಲೇ ಈ ಘೋಷಣೆ ಹೊರಬಿದ್ದಿದೆ. ಇದನ್ನು ತಡೆಯುವ ಪ್ರಯತ್ನವನ್ನು ಜಾರಕಿಹೊಳಿ ಮಾಡಲಿಲ್ಲ.

ಈ ಮೂಲಕ ಕಾಂಗ್ರೆಸ್‍ನಲ್ಲಿ (Congress)  ಮತ್ತೆ ದಲಿತ ಸಿಎಂ ಕೂಗು ಕೇಳಿ ಬಂದಿದೆ ಎಂಬ ಚರ್ಚೆ ಶುರುವಾಗಿದೆ. ದಲಿತ ಸಿಎಂ ಗಾದಿಯ ಚರ್ಚೆ ಹೊತ್ತಲ್ಲೇ ಎಐಸಿಸಿ ಅಧ್ಯಕ್ಷರನ್ನು ಸಚಿವ ಸತೀಶ್ ಜಾರಕಿಹೊಳಿ ಶನಿವಾರ ಭೇಟಿ ಮಾಡಿದ್ದರು. ಈ ಬೆನ್ನಲ್ಲೇ ಇಂದು ತುಮಕೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಅವರನ್ನು ಸತೀಶ್ ಜಾರಕಿಹೊಳಿ ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇತ್ತೀಚಿಗೆ ಪರಮೇಶ್ವರ್-ಸತೀಶ್ ಜಾರಕಿಹೊಳಿ ನಡುವೆ 4-5 ಬಾರಿ ಭೇಟಿ ನಡೆದಿದೆ. ಇದನ್ನೂ ಓದಿ: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಬಿಎಸ್‍ವೈ ಭೇಟಿ

ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಜಾರಕಿಹೊಳಿಯವರು ಪ್ರತಿಕ್ರಿಯಿಸಿ, ಕೂಗು ಶುರು ಮಾಡಿದರೆ ನಾನೇನು ಮಾಡಲಿ? ಈ ಭೇಟಿಯಲ್ಲಿ ಏನು ವಿಶೇಷ ಇಲ್ಲ. ಪರಮೇಶ್ವರ್ ಊಟ ಮಾಡಿಸಿದ್ರು ಅಷ್ಟೇ. ನನ್ನದು ಬೇರೆ ಕಾರ್ಯಕ್ರಮ ಇತ್ತು. ಅಲ್ಲಿಗೆ ಬಂದಿದ್ದೆ, ಹಾಗೆ ಇಲ್ಲಿಗೂ ಬಂದಿದ್ದೆ ಅಷ್ಟೇ. ನಾವು ಸಿಎಂಗೆ ರಾಜೀನಾಮೆ ಕೊಡೋದು ಬೇಡ ಎಂದು ಹೇಳಿದ್ದೇವೆ. ದಲಿತ ಸಿಎಂ ಪ್ರಸ್ತಾವನೆ ಸಧ್ಯಕ್ಕಿಲ್ಲ. ಇದ್ದಾಗ ನಾವೇ ಕರೆದು ಹೇಳುತ್ತೇವೆ ಎಂದಿದ್ದಾರೆ.

ಈ ಬೆಳವಣಿಗೆಗೆ ಸಚಿವ ಜಮೀರ್ ಅಹಮದ್ ಟಕ್ಕರ್ ನೀಡಿದ್ದು, ಎಲ್ರಿಗೂ ಸಿಎಂ ಆಗುವ ಆಸೆ ಇರುತ್ತೆ. ಸಿಎಂ ಸ್ಥಾನ ಖಾಲಿ ಇಲ್ಲ. ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ – 8 ಲಕ್ಷ ದಾಖಲಾತಿ ನೀಡುವಂತೆ ಜಸ್ಟಿಸ್ ದೇಸಾಯಿ ಆಯೋಗ ಸೂಚನೆ

Share This Article