ತರಕಾರಿ ತರ್ತೀನಿ ಅಂತಾ ಮಾರ್ಕೆಟ್‌ಗೆ ಹೋದ ಮಹಿಳೆ ಪ್ರಿಯಕರನೊಂದಿಗೆ ಪರಾರಿ – ಗಂಡನ ಪಾಡು ಕೇಳೋರಿಲ್ಲ

Public TV
2 Min Read

ಲಕ್ನೋ: ಮಾರ್ಕೆಟ್‌ಗೆ ಹೋಗಿ ತರಕಾರಿ ತಗೊಂಡು ಬರ್ತೀನಿ ಅಂತಾ ಹೋದ ನವವಿವಾಹಿತೆ (Newlu Married Women) ಮದುವೆಯಾದ ಒಂದೇ ವಾರಕ್ಕೆ ಗಂಡನನ್ನ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ (Uttar Pradeh) ಕಲಿಂಜರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೇ 31 ರಂದು ಮದುವೆಯಾಗಿದ್ದ (Marriage) ಮಹಿಳೆ ಒಂದೇ ವಾರಕ್ಕೆ ಗಂಡನನ್ನ ಬಿಟ್ಟು ಪರಾರಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕುಟುಂಬಸ್ಥರನ್ನು ಭೇಟಿ ಮಾಡಬೇಕೆಂಬ ನೆಪದಲ್ಲಿ ತವರು ಮನೆಗೆ ಬಂದಿದ್ದ ಆಕೆ, ಮನೆಗೆ ಸಾಮಾನು ತರ್ತೀನಿ ಅಂತಾ ಮಾರುಕಟ್ಟೆಗೆ ಹೋದವಳೇ ತನ್ನ ಪ್ರಿಯಕರನೊಂದಿಗೆ ಎಸ್ಕೇಪ್‌ ಆಗಿದ್ದಾಳೆ. ಜೊತೆಗೆ ತವರು ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲಾ ದೋಚಿಕೊಂಡು ಹೋಗಿದ್ದಾಳೆ ಎಂಬುದು ತಿಳಿದುಬಂದಿದೆ.

ಮಗಳು ಮನೆಗೆ ಬಾರದೇ ಇದ್ದಾಗ ಆತಂಕಕ್ಕೊಳಗಾದ ಪೋಷಕರು ಫೋನ್‌ ಮಾಡಿದ್ದಾರೆ. ಫೋನ್‌ ಸ್ವಿಚ್‌ ಆಫ್‌ ಆಗಿರುವುದು ಕಂಡು ಹುಡುಕಾಟ ನಡೆಸಿದ್ದಾರೆ. ನಂತರ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕೇಸ್‌ ದಾಖಲಿಸಿಕೊಂಡ ಪೊಲೀಸರು (Police) ಮಹಿಳೆ ಹಾಗೂ ಆಕೆಯ ಗೆಳೆಯನಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಇದನ್ನೂ ಓದಿ: Indonesia Open 2023: ಐತಿಹಾಸಿಕ ಜಯ ತಂದ ಮೊದಲ ಭಾರತೀಯ ಜೋಡಿ, ಸಾತ್ವಿಕ್‌ಸಾಯಿರಾಜ್, ಚಿರಾಗ್‌ಗೆ ಪ್ರಶಸ್ತಿ

ಆ ದಿನ ನಡೆದಿದ್ದೇನು?
ಪರಾರಿಯಾದ ಮಹಿಳೆಗೆ ಕಳೆದ ಮೇ 31 ರಂದು ಮದುವೆ ಮಾಡಿಸಲಾಗಿತ್ತು. ಜೂನ್‌ 6 ರಂದು ತನ್ನ ತವರಿಗೆ ಮರಳಿದ್ದಳು. ಜೂನ್‌ 11ರಂದು ಮನೆಗೆ ಸಾಮಾನು ಖರೀದಿಸುವ ನೆಪದಲ್ಲಿ ಮಾರುಕಟ್ಟೆಗೆ ಹೋದ ಅವಳು ವಾಪಸ್‌ ಮನೆಗೆ ಬಂದಿರಲಿಲ್ಲ. ಸಂಜೆಯಾದರೂ ಮಗಳು ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ತೀವ್ರ ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಭಾರತೀಯ ಸೇನೆಗಾಗಿ ಮಹಿಂದ್ರಾ ಗ್ರೂಪ್‍ನಿಂದ ನೂತನ ಶಸ್ತ್ರಸಜ್ಜಿತ ವಾಹನ ನಿರ್ಮಾಣ

ನಂತರ ಅವಳು ಪ್ರಿಯಕರನೊಂದಿಗೆ ಓಡಿ ಹೋಗಿರುವುದು ತಿಳಿದು ಬಂದಿತು. ಆಕೆ ಬರಿಗೈನಲ್ಲಿ ಓಡಿ ಹೋಗಿರಲಿಲ್ಲ. ಮನೆಯಲ್ಲಿದ್ದ ಚಿನ್ನಾಭರಣವನ್ನೂ ದೋಚಿಕೊಂಡು ಹೋಗಿದ್ದಳು. ಆ ಹುಡುಗ ಬೇರೆ ಯಾರೂ ಅಲ್ಲ ತನ್ನ ಸಹೋದರನ ಕಡೆಯ ಸಂಬಂಧಿಯಾಗಿದ್ದ. ಬಳಿಕ ಪೋಷಕರ ದೂರಿನ ಮೇರೆಗೆ ಕೇಸ್‌ ದಾಖಲಿಸಿಕೊಂಡ ಪೊಲೀಸರು ಓಡಿಹೋದ ಇಬ್ಬರಿಗಾಗಿ ಬಲೆ ಬೀಸಿದ್ದಾರೆ.

Share This Article