-ಹೆಂಡತಿಯನ್ನು ತವರು ಮನೆಯಲ್ಲಿ ಬಿಟ್ಟು ಪ್ರೇಯಸಿ ಜೊತೆ ಗಂಡನ ಪ್ರವಾಸ?
-ಮೋನಿಕಾನೇ ಬೇರೊಬ್ಬನ್ನ ಪ್ರೀತಿಸ್ತಿದ್ಳು ಅಂತ ಗಂಡನ ಕಡೆಯವರ ಆರೋಪ
ಚಿಕ್ಕಬಳ್ಳಾಪುರ: ತವರು ಮನೆಯಲ್ಲೇ ತನ್ನ ಸಾವಿಗೆ ಗಂಡನೇ ಕಾರಣ ಅಂತ ಡೆತ್ ನೋಟ್ ಬರೆದು ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕು ಹೆಣ್ಣೂರು ಕದಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೇವಮ್ಮ-ಮುನಿರಾಜು ದಂಪತಿ ಹಿರಿಯ ಪುತ್ರಿ ಮೋನಿಕಾ (22) ಮೃತ ದುರ್ದೈವಿ. ಅಂದಹಾಗೆ ಮೃತ ಮೋನಿಕಾಳನ್ನು ಚಿಕ್ಕಬಳ್ಳಾಪುರ ನಗರದ ನಿವಾಸಿ ಭಾರ್ಗವ್ ಕಳೆದ ತಿಂಗಳ ಹಿಂದೆಯಷ್ಟೇ ಶಾಸ್ತ್ರೋಕ್ತವಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ. ಮದುವೆಯಾಗಿ 6 ತಿಂಗಳ ಕಾಲ ಹೆಂಡತಿ ಜೊತೆ ಸಂಸಾರ ಮಾಡಿದ್ದ ಭಾರ್ಗವ್ ಇತ್ತೀಚೆಗಷ್ಟೇ ಗೌರಿ ಹಬ್ಬಕ್ಕೆ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಹೋಗಿದ್ದ. ಹಬ್ಬ ಮುಗಿದ ಮೇಲೆ ಗಂಡ ಬಂದು ಮನೆಗೆ ವಾಪಸ್ ಕರೆದುಕೊಂಡು ಹೋಗುತ್ತಾನೆ ಎಂದು ಮೋನಿಕಾ ಕಾಯುತ್ತಿದ್ದಳು. ಆದರೆ ಗಂಡ ಬರಲೇ ಇಲ್ಲ ಮತ್ತು ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಇದೇ ವೇಳೆ ಗಂಡ ಪ್ರೇಯಸಿ ಜೊತೆ ಸುತ್ತಾಡುತ್ತಿರುವ ಫೋಟೋಗಳು ಮೋನಿಕಾಳ ಕಣ್ಣಿಗೆ ಬಿದ್ದಿವೆ. ಇದರಿಂದ ಕಟ್ಟಿಕೊಂಡ ಗಂಡ ತನ್ನನ್ನು ಬಿಟ್ಟು ಪ್ರೇಯಸಿ ಜೊತೆಗೆ ರೋಮ್ಯಾನ್ಸ್ ಮಾಡುತ್ತಿದ್ದಾನೆಂದು ಮನನೊಂದ ಮೋನಿಕಾ ತವರು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸಾಯುವ ಮುನ್ನ ತನ್ನ ಸಾವಿಗೆ ಗಂಡನೇ ಕಾರಣ ಅಂತ ಡೆತ್‍ನೋಟ್‍ನಲ್ಲಿ ಮೋನಿಕಾ ಬರೆದಿದ್ದಾಳೆ. ಇದೀಗ ಈ ಸಂಬಂಧ ಮೋನಿಕಾ ತಂದೆ ತಾಯಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಂಡ ಭಾರ್ಗವ್ ವಿರುದ್ಧ ದೂರು ದಾಖಲಿಸಿದ್ದು ಭಾರ್ಗವ್ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ನಿಷೇಧ ಮುಂದುವರಿಕೆ – ಸಚಿವ ಬಿ.ಸಿ.ನಾಗೇಶ್
ದೇವಮ್ಮ-ಮುನಿರಾಜು ದಂಪತಿಗೆ ಮೂರು ಜನ ಮಕ್ಕಳಿದ್ದು, ಎರಡು ಲಕ್ಷ ಹಣ ತೆಗೆದುಕೊಂಡು ಬಂದರೆ ಮಾತ್ರ ಮನೆಗೆ ಬಾ ಅಂತ ಗಂಡ ಹಣಕ್ಕಾಗಿ ಒತ್ತಡ ಹಾಕಿದ್ದಾನೆ. ಜೊತೆಗೆ ಕಟ್ಟಿಕೊಂಡ ಹೆಂಡತಿ ಮುಂದೆಯೇ ಪ್ರೇಯಸಿ ಜೊತೆ ಮಾತನಾಡುವುದು ಮಾಡುತ್ತಿದ್ದ. ಇದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದಕ್ಕೆಲ್ಲಾ ಗಂಡ ಭಾರ್ಗವ್ ಕಾರಣ ಅಂತ ಮೋನಿಕಾ ಪೋಷಕರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಬಿಜೆಪಿ ಶಾಸಕ, ನಿವೃತ್ತ ಐಪಿಎಸ್ ಅಧಿಕಾರಿ, ರೌಡಿ ಶೀಟರ್
ಮತ್ತೊಂದೆಡೆ, ನವಿವಿವಾಹಿತೆ ಮೋನಿಕಾ ಮದುವೆಗೂ ಮುನ್ನ ಬೇರೊಬ್ಬನನ್ನು ಪ್ರೀತಿಸುತ್ತಿದ್ದು, ಮದುವೆ ನಂತರವೂ ಅವನ ಜೊತೆ ಸಂಪರ್ಕ ಇಟ್ಟುಕೊಂಡಿದ್ದಲು. ನಿರಂತರವಾಗಿ ಆತನ ಜೊತೆ ಫೋನ್‍ನಲ್ಲಿ ಮಾತನಾಡುತ್ತಿದ್ದಳು. ಈ ವಿಚಾರ ತಿಳಿದು ಗಂಡ ವಾರ್ನ್ ಮಾಡಿ ಬುದ್ಧಿವಾದ ಹೇಳಿದರೂ ಅವನ ಜೊತೆ ಮಾತನಾಡುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ತವರು ಮನೆಯಲ್ಲಿ ಬಿಟ್ಟು ಬಂದಿದ್ದೇವೆ ಎಂದು ಭಾರ್ಗವ್ ಕಡೆಯವರು ಆರೋಪಿಸುತ್ತಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.