– ಬೇರೆ ಯುವತಿಯೊಂದಿಗೆ ಪತಿ ಸರಸ
ಚಿಕ್ಕಬಳ್ಳಾಪುರ: ಅವರಿಬ್ಬರಿಗೂ ಮದುವೆಯಾಗಿ (Marriage) ಇನ್ನೂ ಆರು ತಿಂಗಳಷ್ಟೇ ಆಗಿತ್ತು. ಆದ್ರೆ ಗಂಡ ತನ್ನ ಜೊತೆ ಮಾತನಾಡೋದು ಬಿಟ್ಟು ಯಾವಾಗಲೂ ಆದ್ಯಾರೋ ಯುವತಿಯ ಜೊತೆಯಲ್ಲಿ ಚಾಟಿಂಗ್-ಟಾಕಿಂಗ್ ಆಂತ ಕಾಲ ಕಳೆಯುತ್ತಿದ್ದನಂತೆ. ಇದೇ ವಿಚಾರದಲ್ಲಿ ಉಂಟಾದ ಮನಸ್ಥಾಪದಿಂದ ನವವಿವಾಹಿತೆ ಫೇಸ್‌ಬುಕ್‌ನಲ್ಲಿ ಡೆತ್‌ನೋಟ್ (Facebook Death Note) ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡವಾಲಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಜಯಶ್ರೀ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ತವರು ಮನೆಯಲ್ಲಿ ಮನೆಯ ಹೊರಭಾಗದ ಶೌಚಾಲಯದಲ್ಲಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಜಯಶ್ರೀ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡವಾಲಹಳ್ಳಿ ನಿವಾಸಿ ಜಯಶ್ರೀಯನ್ನ ಕಳೆದ 6 ತಿಂಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಹಳ್ಳಿಯ ನಿವಾಸಿ ಚಂದ್ರಶೇಖರ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಆದ್ರೆ ಇಬ್ಬರು ಸುಂದರ ಸಂಸಾರ ಸಾಗಿಸುವ ಬದಲು ಗಂಡ ಮತ್ತೊಬ್ಬಳು ಯುವತಿ ಜೊತೆಯಲ್ಲಿ ಯಾವಾಗ್ಲೂ ಚಾಟಿಂಗ್ ಮಾಡ್ತಾ, ಮಾತಾಡಿಕೊಂಡು ಕಾಲ ಕಳೀತಿದ್ದನಂತೆ.
ಇದೇ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಮನಸ್ತಾಪಗಳಾಗಿ ಮನನೊಂದ ಜಯಶ್ರೀ ತನ್ನ ನೋವನ್ನ ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಜಯಶ್ರೀ ತಂದೆ ಶ್ರೀಧರ್ ನೀಡಿದ ದೂರಿನ ಮೇರೆಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಜಯಶ್ರೀ ಗಂಡ ಚಂದ್ರಶೇಖರ್ ಹಾಗೂ ಯುವತಿ ಬಿಂದು ವಿರುದ್ಧ ದೂರು ದಾಖಲಾಗಿದೆ.
ಆತ್ಮಹತ್ಯೆಗೆ ಮುನ್ನ ಜಯಶ್ರೀ ತನ್ನ ಫೇಸ್ ಬುಕ್ ಖಾತೆಯಲ್ಲಿ ನನ್ನ ಸಾವಿಗೆ ಆ ಹುಡುಗಿ ಮತ್ತು ನನ್ನ ಗಂಡ ಕಾರಣ ಅಂತ ಬರೆದಿದ್ದಾಳೆ. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದ್ದು ಗಂಡ ಹಾಗೂ ಯುವತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.