ನವದಂಪತಿಗೆ ಉಡುಗೊರೆ ತಂದ ಆಪತ್ತು

Public TV
1 Min Read

ಗಾಂಧಿನಗರ: ಭಗ್ನ ಪ್ರೇಮಿಯೊಬ್ಬ ತಾನು ಪ್ರೇಮಿಸಿದ್ದ ಹುಡುಗಿಯು ಮೋಸ ಮಾಡಿದ್ದರಿಂದ ಆ ಸೇಡನ್ನು ಅವಳ ತಂಗಿಯ ಮದುವೆಯಲ್ಲಿ ಸೋಟಕದ ವಸ್ತುವನ್ನು ನೀಡಿ ದ್ವೇಷ ತೀರಿಸಿಕೊಂಡಿದ್ದಾನೆ. ಇದರಿಂದಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಪ್ರಕರಣ ಗುಜರಾತ್‍ನಲ್ಲಿ ನಡೆದಿದೆ.

ದಕ್ಷಿಣ ಗುಜರಾತ್‍ನ ನವಸಾರಿ ಜಿಲ್ಲೆಯ ಮಿಂಧಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲತೇಶ್ ಮತ್ತು ಅವರ ಸೋದರಳಿಯ ಜಿಯಾನ್ ಗಂಭೀರವಾಗಿ ಗಾಯಗೊಂಡವರು. ಹಾಗೂ ಕೊಯಂಬಾ ನಿವಾಸಿ ರಾಜು ಪಟೇಲ್ ಆರೋಪಿ. ಈತ ವಧುವಿನ ಅಕ್ಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಆದರೆ ಈತ ಕೆಲ ದಿನಗಳ ಹಿಂದೆ ಸಂಬಂಧ ಮುರಿದುಕೊಂಡಿದ್ದ. ಈ ದ್ವೇಷದ ಹಿನ್ನೆಲೆಯಲ್ಲಿ ತಾನು ಪ್ರೀತಿಸಿದ್ದ ತಂಗಿಯ ಮದುವೆಗೆ ಬಂದಿದ್ದ. ನವವಿವಾಹಿತರಿಗೆ ಉಡುಗೋರೆ ನೀಡಿ ಹೋಗಿದ್ದಾನೆ.

MARRIAGE

ಲತೇಶ್ ಮತ್ತು ಅವರ ಸೋದರಳಿಯ ಜಿಯಾನ್ ಅವರು ತಮ್ಮ ನಿವಾಸದಲ್ಲಿ ಇತರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉಡುಗೊರೆಗಳನ್ನು ನೋಡುತ್ತಿದ್ದರು. ಆ ಉಡುಗೋರೆಗಳಲ್ಲಿ ಇದ್ದಿದ್ದ ರೀಚಾರ್ಜ್ ಮಾಡಬಹುದಾದ ಆಟಿಕೆ ಕಂಡುಬಂದಿದೆ. ಅದು ಸ್ಫೋಟಕ ವಸ್ತು ಎಂದು ತಿಳಿಯದೇ, ಆ ಉಡುಗೊರೆಯಲ್ಲಿ ಆಟಿಕೆ ಕಂಡು, ಲತೇಶ್ ಮತ್ತು ಜಿಯಾನ್ ಆಟಿಕೆಗೆ ರೀಚಾರ್ಜ್ ಮಾಡಲು ಪ್ರಯತ್ನಿಸಿದರು. ಆದರೆ ಆ ಆಟಿಕೆಯ ಸ್ಫೋಟ ಸಂಭವಿಸಿದೆ. ಇದರ ಪರಿಣಾಮವಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಲತೇಶ್ ಅವರ ಕೈಗಳು, ತಲೆ ಮತ್ತು ಕಣ್ಣುಗಳ ಮೇಲೆ ತೀವ್ರ ಗಾಯಗಳಾಗಿದ್ದು, ಜಿಯಾನ್ ಅವರ ತಲೆ ಮತ್ತು ಕಣ್ಣುಗಳಿಗೆ ಗಾಯಗಳಾಗಿವೆ. ಇಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ: ಮೋಹನ್ ದಾಸರಿ

ಈ ಸಂಬಂಧ ಸಂತ್ರಸ್ತರ ಕುಟುಂಬದ ಸದಸ್ಯರು ವನ್ಸ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಡುಗೋರೆ ನೀಡಿದ್ದ ಕೊಯಂಬಾ ನಿವಾಸಿ ರಾಜು ಪಟೇಲ್ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಗುರುವಾರ ಮಹತ್ವದ ಕೇಂದ್ರ ಬಿಜೆಪಿ ಚುನಾವಣಾ ಸಮಿತಿ ಸಭೆ – ಸಿಎಂ ದೆಹಲಿಗೆ

Share This Article
Leave a Comment

Leave a Reply

Your email address will not be published. Required fields are marked *