ಖಾಲಿ ಇರುವ ಸಚಿವ ಸ್ಥಾನಕ್ಕೆ ಹೊಸಬರಿಗೆ ಅವಕಾಶ ಮಾಡಿಕೊಡಬೇಕು: ರೇಣುಕಾಚಾರ್ಯ

Public TV
1 Min Read

ಬೆಂಗಳೂರು: ಸಂಪುಟದಲ್ಲಿ ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ. ಅವುಗಳನ್ನು ಬೇರೆಯವರು ಹೆಚ್ಚುವರಿಯಾಗಿ ನಿರ್ವಹಣೆ ಮಾಡುತ್ತಾರೆ. ಅವರ ಬದಲು ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಅಗ್ರೆಸ್ಸಿವ್ ಆಗಿ ಕೆಲಸ ಮಾಡುತ್ತಾರೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸಂಪುಟ ವಿಳಂಬಕ್ಕೆ ಅಸಮಾದಾನ ವ್ಯಕ್ತಪಡಿಸಿದ ಶಾಸಕರು, ಸಂಘಟನೆ ಹಾಗೂ ಸರ್ಕಾರಕ್ಕೆ ಹೆಸರು ಬರುತ್ತದೆ. ಐದು ಸ್ಥಾನಗಳು ಖಾಲಿ ಇವೆ. ಸಂಪುಟ ವಿಸ್ತರಣೆ ಇಷ್ಟೊಂದು ವಿಳಂಬ ಮಾಡಬಾರದಿತ್ತು. ಚುನಾವಣೆಗೆ ಇನ್ನು 8-9 ತಿಂಗಳು ಮಾತ್ರ ಬಾಕಿ ಇದೆ. ಚುನಾವಣೆ ದೃಷ್ಟಿಯಿಂದ ಸಂಪುಟ ವಿಸ್ತರಣೆ ಆಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ: ಸಂಜಯ್ ರಾವತ್

ಇದೇ ವೇಳೆ ಹಾಲಿ ಸಚಿವರ ವಿರುದ್ಧ ಮತ್ತೆ ಸಿಡಿದೆದ್ದ ರೇಣುಕಾಚಾರ್ಯ, ಬರೀ ನಾಮಕಾವಸ್ತೆಗೆ ಮಾತ್ರ ಸಚಿವರಾಗಬಾರದು. ಜಿಲ್ಲಾ ಮಂತ್ರಿ ಆದಮೇಲೆ ಜಿಲ್ಲೆಯ ಸಮಸ್ಯೆ ಸರಿಪಡಿಸಬೇಕು. ತಾಲೂಕು ಜಿಲ್ಲೆಯಲ್ಲಿ ಓಡಾಡಿ ಪಕ್ಷ ಸಂಘಟನೆ ಸರ್ಕಾರದ ವರ್ಚಸ್ಸು ಹೆಚ್ಚು ಮಾಡಬೇಕು. ಕೇವಲ ಜಿಲ್ಲಾ ಮಟ್ಟ, ವಿಧಾನಸೌಧದ ಮೂರನೇ ಮಹಡಿಗೆ ಮಾತ್ರ ಸೀಮಿತವಾಗಬಾರದು. ನಾನು ಹಿಂದೆ ಅಬಕಾರಿ ಮಿನಿಸ್ಟರ್ ಆದಾಗ ಜಿಲ್ಲೆಯಾದ್ಯಂತ ಓಡಾಟ ಮಾಡಿದ್ದೆ. ಈಗಿರುವ ಸಚಿವರು ಅಗ್ರೆಸ್ಸಿವ್ ಆಗಬೇಕು. ಆದರೆ ಅವರ ಕಾರ್ಯವೈಖರಿ ಬಗ್ಗೆ ನನಗಂತೂ ಸಮಾಧಾನ ಇಲ್ಲ ಎಂದರು.

ಅಗ್ರೆಸ್ಸಿವ್ ಆಗಿ, ಸ್ಪೀಡಾಗಿ ಹೋದಾಗ ಮಾತ್ರ ಚುನಾವಣೆ ಗೆಲ್ಲಬಹುದು. ಪ್ರತಿಪಕ್ಷ ಗಳ ಆರೋಪಕ್ಕೆ ಸಚಿವರು ಸರಿಯಾದ ಉತ್ತರ ಕೊಡ್ತಿಲ್ಲ. ಬರೀ ಮುಖ್ಯಮಂತ್ರಿ ಗೆ ಮಾತ್ರ ಅಲ್ಲ, ಇದರಲ್ಲಿ ಎಲ್ಲರ ಕರ್ತವ್ಯ ಕೂಡ ಇದೆ. ಸಚಿವರಿಗೆ ಕೇವಲ ಕುರ್ಚಿ ಸ್ವಾರ್ಥ ಮಾತ್ರ ಮುಖ್ಯನಾ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು. ಇದನ್ನೂ ಓದಿ: ನಿರ್ಗತಿಕನಿಗೆ ಸ್ನಾನ ಮಾಡಿಸಿದ ಪೊಲೀಸ್ ಆಫೀಸರ್ – ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

Share This Article
Leave a Comment

Leave a Reply

Your email address will not be published. Required fields are marked *