ಐಪಿಎಲ್‍ನಲ್ಲಿ ಅಬ್ಬರ, ವಿಶ್ವಕಪ್‍ನಲ್ಲಿ ಠುಸ್ ಪಠಾಕಿ – ಭಾರತಕ್ಕೆ ಹೀನಾಯ ಸೋಲು

Public TV
3 Min Read

– ಪವಾಡ ನಡೆದರೆ ಮಾತ್ರ ಸೆಮಿ ಪ್ರವೇಶ
– ಬೇರೆ ತಂಡಗಳ ಫಲಿತಾಂಶದ ಮೇಲೆ ನಿಂತಿದೆ ಭವಿಷ್ಯ

ದುಬೈ: ಐಪಿಎಲ್‍ನಲ್ಲಿ ರನ್ ಮಳೆ ಹರಿಸಿದ್ದ ಬ್ಯಾಟ್ಸ್‌ಮ್ಯಾನ್‌ಗಳು ಪೆವಿಲಿಯನ್ ಪರೇಡ್ ಪ್ರದರ್ಶನದ ಜೊತೆ ವಿಕೆಟ್ ಪಡೆಯಲು ವಿಫಲರಾದ ಬೌಲರ್‌ಗಳು. ಈ ಎಲ್ಲದರ ಪರಿಣಾಮ ಭಾರತ ಈಗ ಸೆಮಿಫೈನಲ್ ಪ್ರವೇಶಿಸುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಹೌದು. ಭಾರತ ಹೀನಾಯವಾಗಿ ಸೋತಿದ್ದು, ನ್ಯೂಜಿಲೆಂಡ್ 8 ವಿಕೆಟ್‍ಗಳ ಜಯ ಸಾಧಿಸಿ ಸೆಮಿಫೈನಲ್ ಹಾದಿಯತ್ತ ಮುನ್ನಡೆಯುತ್ತಿದೆ. ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಂತೆ ಆರಂಭದಲ್ಲಿ ಬ್ಯಾಟ್ಸ್‌ಮ್ಯಾನ್‌ಗಳು ಕೈಕೊಟ್ಟರೆ ನಂತರ ಬೌಲರ್‌ಗಳು ಕೈಕೊಟ್ಟಿದ್ದಾರೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತದ ಸೆಮಿಫೈನಲ್ ಪ್ರವೇಶ ಬೇರೆ ತಂಡಗಳ ಫಲಿತಾಂಶದ ಮೇಲೆ ನಿಂತಿದೆ. ಇದನ್ನೂ ಓದಿ: ಆರ್​ಸಿಬಿ, ಬೆಂಗಳೂರು ಬುಲ್ಸ್ ಜೊತೆಗಿತ್ತು ಅಪ್ಪು ಒಡನಾಟ

ಮುಂದಿನ ಮೂರು ಪಂದ್ಯಗಳಲ್ಲಿ ಭಾರತ ಭರ್ಜರಿಯಾಗಿ ಜಯಗಳಿಸಿದರೂ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ರನ್ ರೇಟ್ ಜಾಸ್ತಿಯಿದೆ. ಹೀಗಾಗಿ ಭಾರತದ ಸೆಮಿಫೈನಲ್ ಸದ್ಯಕ್ಕೆ ಬಂದ್ ಆಗಿದೆ. ಏನಾದರೂ ಪವಾಡ ನಡೆದರೆ ಮಾತ್ರ ಭಾರತ ಸೆಮಿಫೈನಲ್ ಪ್ರವೇಶಿಸಬಹುದಷ್ಟೇ.

ಭಾರತ ನೀಡಿದ 111 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೇವಲ 2 ವಿಕೆಟ್ ನಷ್ಟಕ್ಕೆ 14.3 ಓವರ್‌ಗಳಲ್ಲಿ  111 ರನ್ ಮಾಡಿ ಗೆದ್ದು ಬೀಗಿದೆ. ನ್ಯೂಜಿಲೆಂಡ್ ಪರ ಡೇರಿಲ್ ಮಿಚೆಲ್ 49 ರನ್ (35 ಎಸೆತ, 1 ಬೌಂಡರಿ) ಬಾರಿಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿ ವಿಕೆಟ್ ಒಪ್ಪಿಸಿದರು. ನಂತರ ಕೇನ್ ವಿಲಿಯಮ್ಸನ್  33 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು. ಇದನ್ನೂ ಓದಿ: T20 ವಿಶ್ವಕಪ್ – ಟೀಂ ಇಂಡಿಯಾದ 6ನೇ ಬೌಲರ್ ಬೌಲಿಂಗ್‍ಗೆ ಎಂಟ್ರಿ

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಭಾರತ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಭಾರತೀಯ ಬ್ಯಾಟ್ಸ್‌ಮ್ಯಾನ್‌ಗಳು ಕಳೆದ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮತ್ತೆ ಮರುಕಳಿಸಿದರು. ಆರಂಭಿಕರಾಗಿ ಅವಕಾಶ ಪಡೆದ ಇಶಾನ್ ಕಿಶಾನ್ 4 ರನ್ (8 ಎಸೆತ, 1 ಬೌಂಡರಿ)ಗೆ ಸುಸ್ತಾದರು. ಬಳಿಕ ಬಂದ ರೋಹಿತ್ ಶರ್ಮಾ, ರಾಹುಲ್ ಜೊತೆಗೂಡಿ ಇನ್ನಿಂಗ್ಸ್ ಬೆಳೆಸುವ ಸೂಚನೆ ನೀಡಿದರೂ ಕೂಡ ಅದು ನ್ಯೂಜಿಲೆಂಡ್ ಬೌಲರ್‍ ಗಳ ಮುಂದೆ ನಡೆಯಲಿಲ್ಲ. ಕೆ.ಎಲ್ ರಾಹುಲ್ 18 ರನ್ (16 ಎಸೆತ, 3 ಬೌಂಡರಿ) ಮತ್ತು ರೋಹಿತ್ ಶರ್ಮಾ 14 ರನ್(14 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಇಬ್ಬರು ವಿಕೆಟ್ ಒಪ್ಪಿಸಿ ಹೊರ ನಡೆದರು. ಇದನ್ನೂ ಓದಿ: ಮಂಡಿಯೂರಲು ಒಪ್ಪಿದ ಡಿ ಕಾಕ್ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಹಾಜರ್

7.4 ಓವರ್‌ಗಳು ಆಗುತ್ತಿದ್ದಂತೆ ಭಾರತದ 3 ಮಂದಿ ಆಟಗಾರರು ಪೆವಿಲಿಯನ್ ಸೇರಿಕೊಂಡಿದ್ದರು. ಈ ವೇಳೆ ಬ್ಯಾಟಿಂಗ್‍ಗೆ ಬಂದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಧಾರವಾಗುತ್ತಾರೆ ಎಂದು ಅಂದುಕೊಂಡರೆ ಅವರೂ ಕೂಡ 9 ರನ್ (17 ಎಸೆತ) ಮಾಡಿ ಔಟ್ ಆದರು. ನಂತರ ಹಾರ್ದಿಕ್ ಪಾಂಡ್ಯ 23 ರನ್ (24 ಎಸೆತ, 1 ಬೌಂಡರಿ) ವಿಕೆಟ್ ಒಪ್ಪಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಕಡೆಯ ಎಸೆತದವರೆಗೆ ನಿಂತು ಆಡಿದ ರವೀಂದ್ರ ಜಡೇಜಾ 26 ರನ್ (19 ಎಸೆತ, 2 ಬೌಂಡರಿ, 1 ಸಿಕ್ಸ್) ನೆರವಿನಿಂದ ಭಾರತ ತಂಡ 20 ಓವರ್‍ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು.

ನ್ಯೂಜಿಲೆಂಡ್ ಪರ ಉತ್ತಮವಾಗಿ ಬೌಲಿಂಗ್ ಮಾಡಿದ ಟ್ರೆಂಟ್ ಬೌಲ್ಟ್ 3 ವಿಕೆಟ್ ಕಿತ್ತು ಮಿಂಚಿದರೆ, ಇಶ್ ಸೋಧಿ 2 ವಿಕೆಟ್ ಮತ್ತು ಆಡಮ್ ಮಿಲ್ನೆ ಮತ್ತು ಟಿಮ್ ಸೌಥಿ ತಲಾ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *