ಪದೇ ಪದೇ ಸ್ಯಾಮ್ಸನ್ ಕಡೆಗಣನೆ – ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ಗರಂ

Public TV
1 Min Read

ಮುಂಬೈ: ಟೀಂ ಇಂಡಿಯಾದಲ್ಲಿ (India) ಸ್ಥಾನ ಪಡೆದರೂ ಆಡುವ 11ರ ಬಳಗದಲ್ಲಿ ಚಾನ್ಸ್ ಸಿಗದೆ ಪದೇ ಪದೇ ನಿರಾಸೆ ಅನುಭವಿಸುತ್ತಿರುವ ಸಂಜು ಸ್ಯಾಮ್ಸನ್ (Sanju Samson) ಅಭಿಮಾನಿಗಳು ಟೀಂ ಇಂಡಿಯಾ ವಿರುದ್ಧ ತಿರುಗಿಬಿದ್ದಿದ್ದಾರೆ.

ಸಂಜು ಸ್ಯಾಮ್ಸನ್ ಉತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಆಗಿದ್ದರೂ ತಂಡದಲ್ಲಿ ರಿಷಭ್ ಪಂತ್ (Rishabh Pant) ಇರುವ ಕಾರಣ ಅವಕಾಶ ವಂಚಿತರಾಗುತ್ತಿದ್ದಾರೆ. ತಂಡದಲ್ಲಿದ್ದರೂ ಕೇವಲ ಬೆಂಚ್ ಬಿಸಿಮಾಡಲಷ್ಟೇ ಸೀಮಿತವಾಗಿದ್ದಾರೆ. ಇದನ್ನೂ ಓದಿ: ಟೈನಲ್ಲಿ ಅಂತ್ಯಕಂಡ ಫೈನಲ್ ಮ್ಯಾಚ್ – ಭಾರತಕ್ಕೆ T20 ಸರಣಿ

ನ್ಯೂಜಿಲೆಂಡ್ (New Zealand) ವಿರುದ್ಧ ಹಿರಿಯ ಆಟಗಾರರಿಗೆ ರೆಸ್ಟ್ ನೀಡಿದ ಪರಿಣಾಮ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್‍ಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ 3 ಪಂದ್ಯಗಳ ಟಿ20 (T20I) ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಸ್ಯಾಮ್ಸನ್‍ಗೆ ಅವಕಾಶ ನೀಡಲಿಲ್ಲ.

ಇತ್ತ ರಿಷಭ್ ಪಂತ್ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಆಗಿ ಮೂರು ಪಂದ್ಯದಲ್ಲೂ ಅವಕಾಶ ಪಡೆದರೂ ಬ್ಯಾಟಿಂಗ್‍ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆದರೂ ಪದೇ ಪದೇ ಸ್ಥಾನ ಕಲ್ಪಿಸಿಕೊಡಲಾಗಿದೆ. ಅವರ ಬದಲು ಒಂದು ಪಂದ್ಯದಲ್ಲಾದರೂ ಸ್ಯಾಮ್ಸನ್‍ಗೆ ಅವಕಾಶ ನೀಡಬೇಕಿತ್ತು ಎಂದು ಅಭಿಮಾನಿಗಳು ಬಿಸಿಸಿಐ (BCCI), ತಂಡದ ಕೋಚ್, ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್

2022ರಲ್ಲಿ ಸ್ಯಾಮ್ಸನ್ ಟೀಂ ಇಂಡಿಯಾ ಪರ 6 ಪಂದ್ಯಗಳನ್ನು ಆಡಿದ್ದು, 158.40 ಸ್ಟ್ರೈಕ್‍ರೇಟ್‍ನಲ್ಲಿ 1 ಅರ್ಧಶತಕ ಸಹಿತ 179 ರನ್ ಬಾರಿಸಿದ್ದಾರೆ. ಅಲ್ಲದೇ ಐಪಿಎಲ್‍ನಲ್ಲೂ (IPL) ಉತ್ತಮವಾಗಿ ಬ್ಯಾಟ್‍ಬೀಸಿದ್ದರು. ಆದರೆ ಟೀಂ ಇಂಡಿಯಾಗೆ ಆಯ್ಕೆ ಮಾಡಿದರೂ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುತ್ತಿಲ್ಲ. ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *