ಇಂಗ್ಲೆಂಡ್ ವಿರುದ್ಧ ಮಿಂಚಿದ ಡೇರಿಲ್ ಮಿಚೆಲ್ – ಕಿವೀಸ್ ಫೈನಲ್‍ಗೆ

By
1 Min Read

ದುಬೈ: ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಡೇರಿಲ್ ಮಿಚೆಲ್ ಶತಾಯಗತಾಯ ಹೋರಾಟದ ಫಲವಾಗಿ ಇಂಗ್ಲೆಂಡ್ ವಿರುದ್ಧ ಮೊದಲ ಸೆಮಿಫೈನಲ್‍ನಲ್ಲಿ 5 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ನ್ಯೂಜಿಲೆಂಡ್ ತಂಡ T20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

DARIL MICHEL

ಗೆಲುವಿಗೆ 167 ರನ್‍ಗಳ ಗುರಿ ಪಡೆದ ನ್ಯೂಜಿಲೆಂಡ್ ತಂಡ ಇನ್ನೂ 1 ಓವರ್ ಬಾಕಿ ಉಳಿದಿರುವಂತೆ 5 ವಿಕೆಟ್‍ಗಳ ಜಯ ದಾಖಲಿಸಿ ಫೈನಲ್‍ಗೆ ಲಗ್ಗೆ ಇಟ್ಟಿತು.

NEWZELAND

ನ್ಯೂಜಿಲೆಂಡ್ ಗೆಲುವಿಗಾಗಿ ಆರಂಭಿಕನಾಗಿ ಬಂದು ಕಡೆಯವರೆಗೆ ಹೋರಾಡಿದ ಡೇರಿಲ್ ಮಿಚೆಲ್ 73 ರನ್ (48 ಎಸೆತ, 4 ಬೌಂಡರಿ, 4 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದು ನ್ಯೂಜಿಲೆಂಡ್ ತಂಡವನ್ನು ಫೈನಲ್‍ಗೆ ಏರಿಸಿದರು.

ವ್ಯರ್ಥವಾಯಿತು ಮೋಯಿನ್ ಅಲಿ ಅಬ್ಬರ

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಸಾಧಾರಣ ಮೊತ್ತ ಪೇರಿಸುವ ಹಂತದಲ್ಲಿತ್ತು. 15 ಓವರ್‍ ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 116ರನ್ ಗಳಿಸಿದ್ದ ಇಂಗ್ಲೆಂಡ್ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮೂಲಕ ಮೋಯಿನ್ ಅಲಿ ಮಿಂಚಿದರು. ಅಲಿ 51 ರನ್ (37 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗದೆ ತಂಡದ ಮೊತ್ತ 160ರ ಗಡಿದಾಟಿಸಿದರು.

ಈ ಮೊದಲು ಡೇವಿಡ್ ಮಲನ್ 41 ರನ್ (30 ಎಸೆತ, 4 ಬೌಂಡರಿ, 1 ಸಿಕ್ಸ್) ತಂಡಕ್ಕೆ ಆಸರೆಯಾದರು. ಅಂತಿಮವಾಗಿ 20 ಓವರ್‍ ಗಳ ಅಂತ್ಯಕ್ಕೆ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು 166 ರನ್ ಪೇರಿಸಿತು.

ನ್ಯೂಜಿಲೆಂಡ್ ಪರ ಟಿಮ್ ಸೌಥಿ, ಆಡಮ್ ಮಿಲ್ನೆ, ಇಶ್ ಸೋಧಿ, ಜೇಮ್ಸ್ ನೀಶಮ್ ತಲಾ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *