ದಾವಣಗೆರೆ ಕೇಕ್ ಶೋನಲ್ಲಿ ಅರಳಿದೆ ‘ಲಂಡನ್ ಬ್ರಿಡ್ಜ್’

Public TV
1 Min Read

ದಾವಣಗೆರೆ: ಹೊಸ ವರ್ಷವನ್ನು ಕೇಕ್ ನಿಂದ ವೆಲ್ ಕಮ್ ಮಾಡಲು ಮಧ್ಯ ಕರ್ನಾಟಕ ದಾವಣಗೆರೆಯ ಆಹಾರ ಟು ಥೌಸೆಂಡ್(2000) ಹೋಟೆಲ್ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕಳೆದ 17 ವರ್ಷದಿಂದ ಈ ಹೋಟೆಲ್ ನಲ್ಲಿ ಹೊಸ ವರ್ಷದ ಮುನ್ನ ದಿನ ಕೇಕ್ ನಲ್ಲೇ ವಿವಿಧ ಕಲಾಕೃತಿಗಳನ್ನ ಮಾಡಿಕೊಂಡು ಬರುತ್ತಿದ್ದು, ಈ ಹಿಂದೆ ತಾಜ್ ಮಹಲ್, ವಿಧಾನ ಸೌಧ, ಬೇಲೂರು ಶಿಲ್ಪ ಕಲಾಕೃತಿಗಳು, ಹೈಕೋರ್ಟ್, ಐಪೆಲ್ ಟವರ್ ಸೇರಿದಂತೆ ಹಲವು ಕಲಾ ಪ್ರಕಾರಗಳನ್ನು ಕೇಕಿನಲ್ಲಿ ತಯಾರಿಸಿ ಇಡೀ ರಾಜ್ಯದ ಜನರ ಗಮನವನ್ನು ಸೆಳೆದಿದ್ದರು.

ಈ ಬಾರೀ ಹೊಸ ವರ್ಷ ಸಂಭ್ರಮದಲ್ಲಿರುವ ಜನರಿಗೆ ಹೊಸತನವನ್ನು ಕೇಕಿನಲ್ಲಿ ನೀಡಬೇಕು ಎಂಬ ಉದ್ದೇಶದಿಂದ ಹೋಟೆಲ್ ಮಾಲೀಕ ರಮೇಶ್ ಲಂಡನ್ ಟವರ್ ಬ್ರೀಡ್ಜ್ ನಿರ್ಮಾಣ ಮಾಡಿದ್ದಾರೆ. ಈ ಲಂಡನ್ ಬ್ರೀಡ್ಜ್ ಅನ್ನು 400 ಕೆಜಿ ಕೇಕ್ ನಿಂದ ನಿರ್ಮಾಣ ಮಾಡಲಾಗಿದ್ದು. ಸುಮಾರು 12 ಜನ ಕಲಾವಿದರು ಸತತ 20 ದಿನಗಳಿಂದ ಹಗಲಿರುಳು ಶ್ರಮ ವಹಿಸಿ ತಯಾರಿಸಿದ್ದಾರೆ.

ಲಂಡನ್ ಬ್ರೀಡ್ಜ್ ಮಾದರಿಯ ಕೇಕ್ ನಿರ್ಮಾಣ ಮಾಡಲು 350 ಕೆಜಿ ಸಕ್ಕರೆ, 100 ಕೆಜಿ ಡಾಲ್ಡಾ ಹಾಗೂ ಜಿಲೆಟಿಯನ್ ಬಳಸಲಾಗಿದೆ. ನಾಲ್ಕು ದಿನಗಳ ಕಾಲ ಕೇಕ್ ಪ್ರದರ್ಶನಕ್ಕೆ ಇಡಲಾಗಿದ್ದು, ಇದನ್ನು ನೋಡಲು ಮಹಿಳೆಯರು, ಮಕ್ಕಳು ಎನ್ನದೆ ಎಲ್ಲಾ ವರ್ಗದ ಜನರು ಆಗಮಿಸಿ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಬ್ರಿಡ್ಜ್ ಜೊತೆಗೆ ಹಡಗು, ರೈಲು, ಬೇಬಿ ಡಾಲ್, ಹಲಸಿನಹಣ್ಣು ಸೇರಿದಂತೆ ವಿವಿಧ ಮಾದರಿಯ ಕೇಕ್ ಕಲಾ ಕೃತಿಗಳನ್ನು ಜನರನ್ನು ಆಕರ್ಷಿಸುತ್ತಿವೆ. ಅಲ್ಲದೆ ಕೇಕ್ ಕಲಾಕೃತಿ ಸುಮಾರು 5 ಅಡಿ ಎತ್ತರ 12 ಅಡಿ ಅಗಲದ ಹೊಂದಿದ್ದು, ಈ ಕೇಕ್ ಕಲಾಕೃತಿಯನ್ನ ನೋಡಲು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜನರು ಇಲ್ಲಿಗೆ ಆಗಮಿಸಿ ಕೇಕ್ ಎದುರು ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *