ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಕಡಿವಾಣ – ಅರಣ್ಯ ಇಲಾಖೆಯ ಕಾಟೇಜ್‌ನಲ್ಲಿ ವಾಸ್ತವ್ಯಕ್ಕೂ ಬ್ರೇಕ್

2 Min Read

– ಖಾಸಗಿ ರೆಸಾರ್ಟ್‌ಗಳಿಗೂ ಕೂಡ ಗೈಡ್‌ಲೈನ್ಸ್

ಚಾಮರಾಜನಗರ: ಕರ್ನಾಟಕದ (Karnataka) ಪ್ರಸಿದ್ಧ ವನ್ಯಜೀವಿಧಾಮಗಳಲ್ಲಿ ಒಂದಾದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ (Bandipur Wildlife Sanctuary) ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿ ವಾಸ್ತವ್ಯದ ಜೊತೆಗೆ ಸಫಾರಿಗೂ ಕೂಡ ಬ್ರೇಕ್ ಬಿದ್ದಿದೆ. ವನ್ಯಜೀವಿ ಪ್ರಿಯರಿಗೆ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗೋದಿಲ್ಲ.

ಹೌದು, ಹೊಸ ವರ್ಷಾಚರಣೆ (New Year Celebration) ನೆಪದಲ್ಲಿ ಬಂಡೀಪುರದಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರು ಮೋಜು-ಮಸ್ತಿ ಮಾಡಿ ಕಾಡಿನಲ್ಲಿರುವ ಪ್ರಾಣಿಗಳ ಸಹಜ ಜೀವನಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಹೀಗಾಗಿ ಈ ಬಾರಿ ಬಂಡೀಪುರ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ವರ್ಷದ ಕೊನೆಯ ದಿನ ಹಾಗೂ ಹೊಸ ವರ್ಷದ ಮೊದಲ ದಿನ ಬಂಡೀಪುರದ ಅರಣ್ಯ ಇಲಾಖೆ ಕಾಟೇಜ್‌ಗಳಲ್ಲೂ ವಾಸ್ತವ್ಯಕ್ಕೆ ಬ್ರೇಕ್ ಹಾಕಲಾಗಿದೆ. ಇದರಿಂದಾಗಿ ಈ ಬಾರಿಯೂ ಕೂಡ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆ ಮೋಜು, ಮಸ್ತಿಗೆ ಪ್ಲಾನ್ ಮಾಡಿದ್ದ ಪ್ರವಾಸಿಗಳಿಗೆ ನಿರಾಶೆಯಾದಂತಾಗಿದೆ. ಇದನ್ನೂ ಓದಿ: ಪುಟಿನ್‌ ಮನೆ ಮೇಲೆ 91 ಡ್ರೋನ್‌ ದಾಳಿ ನಡೆಸಿತ್ತಾ ಉಕ್ರೇನ್‌ – ಯುದ್ಧ ನಿಲ್ಲಿಸುವ ಮಾತುಕತೆ ಹೊತ್ತಲ್ಲೇ ಟ್ವಿಸ್ಟ್‌

ವಸತಿ ಗೃಹಗಳಲ್ಲಿ ವಾಸ್ತವ್ಯಕ್ಕೆ ಬ್ರೇಕ್ ಹಾಕಿರುವುದರ ಜೊತೆ ಜೊತೆಗೆ ಬಂಡೀಪುರ ವ್ಯಾಪ್ತಿಯಲ್ಲಿ ಬರುವ ಖಾಸಗಿ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳಿಗೂ ಕೂಡ ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಸಹಜ ಜೀವನಕ್ಕೆ ಅಡಚಣೆಯಾಗಬಾರದೆಂಬ ಉದ್ದೇಶದಿಂದ ಖಾಸಗಿ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳಲ್ಲಿ ಈ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಅನುಸರಿಸಲೇಬೇಕಾಗಿದೆ. ಇದನ್ನೂ ಓದಿ: ಡೆಹ್ರಾಡೂನ್‌ನಲ್ಲಿ ತ್ರಿಪುರಾ ವಿದ್ಯಾರ್ಥಿಯ ಹತ್ಯೆ – ʻಭಯಾನಕ ದ್ವೇಷದ ಅಪರಾಧʼ ಅಂತ BJP ವಿರುದ್ಧ ರಾಗಾ ಕಿಡಿ

ಅರಣ್ಯ ಇಲಾಖೆ ಗೈಡ್‌ಲೈನ್ಸ್:
*ಖಾಸಗಿ ರೆಸಾರ್ಟ್‌ಗಳು, ಹೋಂ ಸ್ಟೇಗಳು ರಾತ್ರಿ 10 ಗಂಟೆಗೆ ಬಂದ್.
*ಫೈರ್ ಕ್ಯಾಂಪ್ ಹಾಕುವಂತಿಲ್ಲ.
*ಅಧಿಕ ಪ್ರಮಾಣದ ಶಬ್ದ ಮಾಡುವಂತಿಲ್ಲ.
*ಲೈಟಿಂಗ್ಸ್, ಡಿಜೆ ಬಳಸುವಂತಿಲ್ಲ.

ಇನ್ನೂ ಪ್ರತಿಯೊಬ್ಬರೂ ಕಡ್ಡಾಯವಾಗಿ ನಿಯಮಪಾಲನೆ ಮಾಡುವಂತೆ ಬಂಡೀಪುರದ ಸಿಎಫ್ ಪ್ರಭಾಕರನ್ ತಿಳಿಸಿದ್ದಾರೆ. ನಿಮಯ ಪಾಲನೆ ಮಾಡದವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅಪಮಾನ – ಇಬ್ಬರು ಅರೆಸ್ಟ್‌

Share This Article