ವರ್ಷದ ಮೊದಲ ದಿನವೇ ಬಿಎಂಟಿಸಿಗೆ 4.37 ಕೋಟಿ ಆದಾಯ

Public TV
1 Min Read

ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಬಿಎಂಟಿಸಿಗೆ (BMTC) ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಜ.1 ರಂದು ಬಿಎಂಟಿಸಿಯಲ್ಲಿ 27,09, 659 ಮಂದಿ ಪ್ರಯಾಣಿಕರು ಸಂಚರಿಸಿದ್ದಾರೆ.

ಹೊಸ ವರ್ಷದ ಆಚರಣೆಯಲ್ಲಿ (New Year) ಭಾಗಿಯಾಗಿದ್ದವರಿಗೆ ಬಿಎಂಟಿಸಿ ಹೆಚ್ಚುವರಿ ಬಸ್‌ ಓಡಿಸಿತ್ತು. ಪರಿಣಾಮ ಸೋಮವಾರ ಒಂದೇ ದಿನ ಬಿಎಂಟಿಸಿಗೆ 4,37,70,000 ರೂ. ಆದಾಯ ಬಂದಿದೆ. ಇದನ್ನೂ ಓದಿ: ನಮ್ಮ ಮಸೀದಿಯನ್ನ ಕಳೆದುಕೊಂಡಿದ್ದೇವೆ.. ನಿಮ್ಮ ಹೃದಯದಲ್ಲಿ ನೋವಿಲ್ಲವೇ: ಬಾಬ್ರಿ ಮಸೀದಿ ಬಗ್ಗೆ ಮುಸ್ಲಿಂ ಯುವಕರಿಗೆ ಓವೈಸಿ ಪ್ರಶ್ನೆ

 

ನ್ಯೂ ಇಯರ್ ವೆಲ್‌ಕಮ್ ಗೆ ಬೆಂಗಳೂರಿನ ವಿವಿಧೆಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪ್ರಯಾಣಿಕರ ಅನುಕೂಲಕ್ಕೆ ಮಧ್ಯರಾತ್ರಿ 2 ಗಂಟೆವರೆಗೂ ಬಿಎಂಟಿಸಿ ಹೆಚ್ಚುವರಿ ಬಸ್‌ ಸೇವೆ ಇತ್ತು. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಶಾಂತಿನಗರ, ಯಲಹಂಕ ಸೇರಿ ಹಲವು ನಿಲ್ದಾಣದಿಂದ ಬಸ್‌ ಸೇವೆಯನ್ನು ಬಿಎಂಟಿಸಿ ಕಲ್ಪಿಸಿತ್ತು.

ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳ ಸೇವೆ ನಿಯೋಜಿಸಿದ ಪರಿಣಾಮ ಬಿಎಂಟಿಸಿ ಒಂದೇ ದಿನದಲ್ಲಿ4.37 ಕೋಟಿ ರೂ.ಆದಾಯಗಳಿಸಿದೆ.

 

Share This Article