ನ್ಯೂ ಇಯರ್‌ಗೆ ಯಾವ ಡ್ರೆಸ್ ಬೆಸ್ಟ್?- ಇಲ್ಲಿದೆ ಟಿಪ್ಸ್

Public TV
2 Min Read

Jಹೊಸ ವರ್ಷಕ್ಕೆ (New Year 2025) ಮಾರುಕಟ್ಟೆಗೆ ಬಂದೇ ಬಿಡ್ತು. ನ್ಯೂ ಲುಕ್‌ನಲ್ಲಿ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಳ್ಳುವ ಆಸೆ ಯಾರಿಗಿಲ್ಲ ಹೇಳಿ ನೋಡೋಣ. ಇದಕ್ಕೆ ಪೂರಕ ಎಂಬಂತೆ, ಹೊಸ ವರ್ಷದ ಇವ್ ಪಾರ್ಟಿಯಲ್ಲಿ ಗ್ಲಾಮ್ ಡಾಲ್‌ನಂತೆ ಕಾಣಲು ನಾನಾ ಬಗೆಯ ವೈವಿಧ್ಯಮಯ ಫ್ಯಾಷನ್‌ವೇರ್‌ಗಳು ಫ್ಯಾಷನ್‌ಲೋಕಕ್ಕೆ ಲಗ್ಗೆ ಇಟ್ಟಿವೆ.

ಈ ಸೀಸನ್‌ನಲ್ಲಿ ನ್ಯೂ ಇಯರ್‌ನಲ್ಲಿ ವೆಸ್ಟರ್ನ್ ಶೈಲಿಯ ಅತಿ ಹೆಚ್ಚು ಡಿಸೈನವೇರ್‌ಗಳು ಕಾಲಿಟ್ಟಿವೆ. ಜಗಮಗಿಸುವ ಶಿಮ್ಮರ್, ಶೈನಿಂಗ್ ಫ್ಯಾಬ್ರಿಕ್‌ನಿಂದಿಡಿದು, ಸಿಕ್ವೀನ್ಸ್ , ಮರ್ಸಲಾ ಹಾಗೂ ಮೆಟಾಲಿಕ್ ಶೇಡ್‌ಗಳ ಡಿಸೈನವೇರ್‌ಗಳು ಈಗಾಗಲೇ ಪಾಪ್ಯುಲರ್ ಆಗಿವೆ. ಇನ್ನು, ಎಂದಿನಂತೆ ರೆಡ್ ಶೇಡ್‌ನ ನಾನಾ ವರ್ಣಗಳು, ಮಿಕ್ಸ್ ಕಾಂಬಿನೇಷನ್ ಇರುವ ಡಿಸೈನವೇರ್‌ಗಳು ಕೂಡ ಪ್ರತಿ ವರ್ಷದಂತೆ ಈ ಬಾರಿಯೂ ಆಗಮಿಸಿವೆ.

ಹೊಸ ವರ್ಷದ ಪಾರ್ಟಿಗೆ ಧರಿಸಬಹುದಾದ ವೈಬ್ರೆಂಟ್ ಶೇಡ್‌ನ ಬಗೆಬಗೆಯ ಡಿಸೈನ್ ಬಾಡಿಕಾನ್ ಶಾರ್ಟ್ ಡ್ರೆಸ್‌ಗಳು ಈ ಸೀಸನ್‌ನ ಹಾಟ್ ಟ್ರೆಂಡ್‌ನಲ್ಲಿ ಸೇರಿವೆ. ಇನ್ನು ಅವುಗಳಲ್ಲಿ ಕಾರ್ಸೆಟ್ ಬಾಡಿ ಫಿಟ್ ಡಿಸೈನ್‌ನವು, ನೆಟ್ಟೆಡ್ ಶೀರ್ ಫ್ಯಾಬ್ರಿಕ್‌ನವು, ಸಿಕ್ವಿನ್ಸ್, ಟೈಟ್ ಫಿಟ್ಟಿಂಗ್ ನೀಡುವ ಗ್ಲಾಮರಸ್ ಡಿಸೈನವೇರ್‌ಗಳು ಸೆಲೆಬ್ರೆಟಿ ಲುಕ್ ಬಯಸುವವರಿಗೆ ಬಂದಿವೆ.

ಗೌನ್ ಪ್ರಿಯರಿಗಾಗಿ ಲೆಕ್ಕವಿಲ್ಲದಷ್ಟು ಬಗೆಯ ಗೌನ್‌ಗಳು ಕೂಡ ಎಂಟ್ರಿ ನೀಡಿವೆ. ಪಾಸ್ಟೆಲ್ ಶೇಡ್‌ನವು ಟೀನೇಜ್ ಹುಡುಗಿಯರಿಗೆ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ಕಾಲಿಟ್ಟಿವೆ. ಬ್ಲ್ಯೂ, ನಿಯಾನ್, ಹೀಗೆ ನಾನಾ ಹೊಸ ಇಂಗ್ಲೀಷ್ ಶೇಡ್‌ಗಳ ಕೋಲ್ಡ್ ಶೋಲ್ಡರ್, ನೆಟ್ಟೆಡ್, ಕೇಪ್, ಸ್ಲಿವ್ಲೆಸ್ ಗೌನ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಕೆಲವಂತೂ ಹೆವ್ವಿ ವೈಟ್‌ನವು ಹಾಗೂ ಲೇಯರ್ ಡಿಸೈನ್‌ನವು ಕೂಡ ಬೇಡಿಕೆ ಪಡೆದುಕೊಂಡಿವೆ. ಅವುಗಳಲ್ಲಿ, ಅತಿ ಹೆಚ್ಚಾಗಿ ಬಾಲ್ ಗೌನ್, ಕೇಪ್ ಗೌನ್, ಜಿಮ್ಮಿ ಚೂ ಫ್ಯಾಬ್ರಿಕ್‌ನ ಗೌನ್, ಬೀಡ್ಸ್, ಕ್ರಿಸ್ಟಲ್, ಪರ್ಲ್ ಹೀಗೆ ನಾನಾ ಹ್ಯಾಂಡ್‌ವರ್ಕ್ ಗೌನ್‌ಗಳು ಎಲ್ಲಾ ವಯಸ್ಸಿನ ನಾರಿ ಮಣಿಯರನ್ನು ಆಕರ್ಷಿಸುತ್ತಿವೆ.

Satin Dress

ಇನ್ನು, ನ್ಯೂ ಇಯರ್‌ನ ಫಾಲ್ ವಿಂಟರ್ ಇವನಿಂಗ್ ಪಾರ್ಟಿ ಡ್ರೆಸ್ ಕೆಟಗರಿಯಲ್ಲಿ ಶಾರ್ಟ್ ಫ್ರಾಕ್‌ಗಳು, ಸಿಂಡ್ರೆಲ್ಲಾ-ಅಂಬ್ರೆಲ್ಲಾ ಫ್ಲೇರ್ ಫ್ರಾಕ್‌ಗಳು ಹೆಚ್ಚು ಯುವತಿಯರನ್ನು ಸೆಳೆದಿವೆ. ಡಿಸ್ಕೋ, ಪಬ್ ಹಾಗೂ ಡಾನ್ಸ್ ಸ್ಟೇಜ್‌ಗಳಲ್ಲಿ ಕುಣಿದು ಕುಪ್ಪಳಿಸಲು ಬಯಸುವ ಡಾನ್ಸ್ ಪ್ರಿಯ ಹುಡುಗಿಯರಿಗೆಂದೇ ಜಗಮಗಿಸುವ ಲೈಟ್‌ವೇಟ್ ಗೌನ್ಸ್, ಫ್ರಾಕ್ಸ್ ಹಾಗೂ ಬಾಡಿಕಾನ್ ಔಟ್‌ಫಿಟ್‌ಗಳು ಲಗ್ಗೆ ಇಟ್ಟು ಹಂಗಾಮ ಎಬ್ಬಿಸಿವೆ. ಇದನ್ನೂ ಓದಿ:3 ತಿಂಗಳ ಬಳಿಕ ತಂಗಿ ಮದುವೆಯ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

Satin Dress

ಫ್ಯಾಷನ್ ಟಿಪ್ಸ್:

ಆದಷ್ಟೂ ಫ್ರೆಶ್ ಲುಕ್ ನೀಡುವಂತಹ ಡಿಸೈನವೇರ್‌ಗೆ ಮಾನ್ಯತೆ ನೀಡಿ.
ವೈಬ್ರೆಂಟ್ ಶೇಡ್ಸ್ ಪಾರ್ಟಿಯ ರಂಗು ಹೆಚ್ಚಿಸುತ್ತವೆ.
ಮೊದಲೇ ಟ್ರಯಲ್ ನೋಡಿ ಪಾರ್ಟಿ ಡ್ರೆಸ್ ಧರಿಸಿ.
ಡಾನ್ಸ್ ಪ್ರಿಯರು, ತೀರಾ ಬಿಗಿಯಾದ ಔಟ್‌ಫಿಟ್ ಆಯ್ಕೆ ಮಾಡಬೇಡಿ.
ಶಿಮ್ಮರಿಂಗ್ ಇರುವಂತಹ ಡ್ರೆಸ್‌ಗಳು ಆಕರ್ಷಕವಾಗಿ ಕಾಣಿಸುತ್ತವೆ.

Share This Article