ಡ್ರಾಮಾ ಕ್ವೀನ್ ಭಾರತಿ ಸಿಂಗ್ ಗಂಡನಿಗೆ 6 ಮಕ್ಕಳು ಬೇಕಂತೆ : ಹೆರಿಗೆ ನೋವಿನ ಕ್ಷಣಗಳನ್ನು ಹಂಚಿಕೊಂಡ ಹಾಸ್ಯ ಕಲಾವಿದೆ

Public TV
2 Min Read

ಬಾಲಿವುಡ್ ಡ್ರಾಮಾ ಕ್ವೀನ್, ಹಾಸ್ಯ ಕಲಾವಿದೆ ಭಾರತಿ ಸಿಂಗ್ ಗಂಡು ಮಗುವಿನ ಜನ್ಮ ನೀಡಿದ್ದಾರೆ. ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ದಂಪತಿ ಈ ಖುಷಿ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈಗ ಮತ್ತೆ ಅಭಿಮಾನಿಗಳಿಗೆ ತಮ್ಮ ಹೆರಿಗೆ ಸಮಯದಲ್ಲಿ ಆದ ಅನುಭವಗಳನ್ನು ಅವರು ಶೇರ್ ಮಾಡಿದ್ದಾರೆ.


ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ದಂಪತಿ ಏಪ್ರಿಲ್ 3 ರಂದು ಗಂಡು ಮಗುವಿನ ಪೋಷಕರಾಗಿದ್ದಾರೆ. ದಂಪತಿ ಎಲ್ಒಎಲ್(ಲೈಫ್ ಆಫ್ ಲಿಂಬಾಚಿಯಾಸ್) ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಈ ಚಾನೆಲ್ನಲ್ಲೇ ತಮ್ಮ ಎಲ್ಲ ಅಪ್ಡೇಟ್ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಈ ಚಾನಲ್‌ನಲ್ಲಿಯೇ ಭಾರತಿ ತಾಯ್ತನದ ಪ್ರಯಾಣವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

ವೀಡಿಯೋದಲ್ಲಿ ನನ್ನ ಮಗ ಕೊನೆಗೂ ನನ್ನ ಕೈಗೆ ಬಂದಿದ್ದಾನೆ. ಅವನು ಆರೋಗ್ಯವಾಗಿದ್ದಾನೆ. ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದೆಲ್ಲ ಕನಸಿನಂತಿದೆ. ಈ ಅನುಭವವು ತುಂಬಾ ಭಾವನಾತ್ಮಕವಾದ್ದು. ಇದು ನನಗೆ ತುಂಬಾ ಸಂತೋಷದ ಸಂಗತಿಯಾಗಿದೆ ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.

ನನ್ನ ಮಗುವನ್ನು ಮೊದಲ ಬಾರಿಗೆ ಹಿಡಿದುಕೊಂಡಾಗ ನನಗೆ ಏನೋ ಒಂದು ರೀತಿ ಖುಷಿಯ ಅನುಭವವಾಯಿತು. ದಯವಿಟ್ಟು ನಿಮ್ಮ ಪ್ರೀತಿಯನ್ನು ನಮ್ಮ ಮಗುವಿನ ಮೇಲೂ ತೋರಿಸಿ ಎಂದು ಕೇಳಿದ್ದಾರೆ.

ಭಾರತಿ ಅವರು ಮೊದಲು ತಮ್ಮ ಬೆನ್ನುನೋವಿನ ಬಗ್ಗೆ ಮಾತನಾಡುವುದರೊಂದಿಗೆ ವೀಡಿಯೊ ಆರಂಭಿಸುತ್ತಾರೆ. ಈ ವೇಳೆ ಅವರು, ನಾನು ಕಾರಿನಲ್ಲಿ ಕುಳಿತಾಗ ಹೆರಿಗೆ ನೋವು ಆಗಿದೆಯೋ ಇಲ್ಲವೋ ಎಂದು ಖಚಿತವಾಗಿರಲಿಲ್ಲ. ನನಗೆ ಭಯವಾಗಿತ್ತು. ಆದರೂ ಉತ್ಸಾಹದಲ್ಲೇ ಇದ್ದೆ. ಇದಕ್ಕೂ ಮೊದಲು ನಾನು ಈ ಭಯವನ್ನು ಅನುಭವಿಸಿರಲಿಲ್ಲ ಎಂದು ವಿವರಿಸಿದ್ದಾರೆ.

ಇದೇ ವೇಳೆ ಹರ್ಷ್, ಇದು ನಿಮ್ಮ ಮೊದಲ ಗರ್ಭಧಾರಣೆ. ಅದಕ್ಕಾಗಿಯೇ ನೀವು ಭಯಪಡುತ್ತೀರಿ. ಮುಂದಿನ ಬಾರಿ ನಿಮಗೆ ಏನು ಆಗುವುದಿಲ್ಲ. ನನಗೆ ಇನ್ನೂ 6 ಮಕ್ಕಳು ಬೇಕು ಎಂದಿದ್ದಾರೆ. ಇದನ್ನೂ ಓದಿ: ಕಳುವಾದ ನವಜಾತ ಶಿಶು 21 ದಿನಗಳ ಬಳಿಕ ಪತ್ತೆ – ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ

ವಿಡಿಯೋ ಕೊನೆಯಲ್ಲಿ ಭಾರತಿ ಅವರು 4:30ಕ್ಕೆ ನನಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆ ಸಮಯದಲ್ಲಿ ನಾನು ನನ್ನ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ. ಈ ವೇಳೆಯೂ ನಾನು ನನ್ನ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವನಾತ್ಮಕವಾಗಿ ನುಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *