ಆಪರೇಷನ್ ಕಮಲಕ್ಕೆ ಹೊಸ ಲೀಡರ್

Public TV
1 Min Read

ಬೆಂಗಳೂರು: ಇಷ್ಟು ದಿನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತಿದ್ದ ಆಪರೇಷನ್ ಕಮಲಕ್ಕೆ ಇದೀಗ ಬಿಜೆಪಿಯವರು ಹೊಸ ಲೀಡರ್ ಹುಡುಕಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ನಂಬಿಕೊಂಡರೆ ಕೆಲಸ ಆಗಲ್ಲ ಎಂದು ಹೊಸ ಲೀಡರ್‍ಗಾಗಿ ಬಿಜೆಪಿ ಹುಡುಕಾಟ ನಡೆಸಿದೆ. ಪಕ್ಷೇತರರಿಗೆ ಸಚಿವ ಸ್ಥಾನ ಸಿಕ್ಕ ಬಳಿಕವೂ ಜಾರಕಿಹೊಳಿ ಸೈಲೆಂಟ್ ಆಗಿದ್ದಾರೆ. ಈ ಹಿಂದೆ ಜಾರಕಿಹೊಳಿ ನೇತೃತ್ವದಲ್ಲಿ ನಡೆದಿದ್ದ ಆಪರೇಷನ್ ಕಮಲ ಯತ್ನಗಳೆಲ್ಲ ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ಈಗ ಶಾಸಕ ಬಿ.ಸಿ. ಪಾಟೀಲ್ ಅವರನ್ನು ಆಪರೇಷನ್ ಕಮಲದ ಸಾರಥ್ಯ ವಹಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸರ್ಕಾರ ಉಳಿಯಲ್ಲ, ಕಾಂಗ್ರೆಸ್ ಉಳಿಯಲ್ಲ, ನಾನು ಕಾಂಗ್ರೆಸ್‍ನಲ್ಲಿ ಇರುತ್ತೀನೋ ಇರಲ್ವೋ ಗೊತ್ತಿಲ್ಲ ಎಂದು ಸಂಪುಟ ವಿಸ್ತರಣೆ ಮಾರನೇ ದಿನವೇ ಶಾಸಕ ಬಿ.ಸಿ ಪಾಟೀಲ್ ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಜಾರಕಿಹೊಳಿ ಬದಲು ಬಿ.ಸಿ ಪಾಟೀಲ್ ನೇತೃತ್ವದಲ್ಲಿ ಅಪರೇಷನ್ ಕಮಲಕ್ಕೆ ಮತ್ತೆ ಚಾಲನೆ ಸಿಗಲಿದೆ ಎನ್ನಲಾಗಿದೆ.

ಈ ಆಪರೇಷನ್ ಕಮಲದ ಸಾರಥ್ಯವನ್ನು ಬಿ.ಸಿ. ಪಾಟೀಲ್ ಅವರು ಒಪ್ಪಿಕೊಳ್ಳುತ್ತಾರಾ ಅಥವಾ ಅತೃಪ್ತ ಶಾಸಕರನ್ನು ಕರೆದುಕೊಂಡು ಬರುತ್ತಾರಾ ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *