ಜೆಎನ್‍ಯುನಲ್ಲಿ ಹೊಸ ರೂಲ್ಸ್ – ಹಿಂಸಾಚಾರ ನಡೆಸಿದ್ರೆ ವಿದ್ಯಾರ್ಥಿಗಳ ಪ್ರವೇಶ ರದ್ದು

Public TV
1 Min Read

ನವದೆಹಲಿ: ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಸಂಬಂಧಿಸಿ ಜೆಎನ್‍ಯುನಲ್ಲಿ (JNU) ನಡೆದ ತೀವ್ರ ಪ್ರತಿಭಟನೆ ಬೆನ್ನಲ್ಲೇ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಅಲ್ಲಿನ ಆಡಳಿತ ಮಂಡಳಿ ನೂತನ ನಿಯಮಗಳನ್ನು (Rules) ಜಾರಿಗೆ ತಂದಿವೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‍ಯು) ಹಿಂಸಾಚಾರವನ್ನು ತಡೆಯಲು ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ವಿದ್ಯಾರ್ಥಿಗಳು ಧರಣಿ ನಡೆಸಿದರೇ 20,000 ರೂ. ಗಳಿಂದ 30,000 ರೂ.ಗಳ ದಂಡ (Fine) ವಿಧಿಸಲಾಗುತ್ತದೆ. ಯಾವುದಾದರೂ ಹಿಂಸಾಚಾರ ಘಟನೆಯನ್ನು ನಡೆಸಿದರೇ ಅವರ ಪ್ರವೇಶವನ್ನು ರದ್ದುಗೊಳಿಸುವುದಾಗಿ ತಿಳಿಸಿದೆ.

ಜೆಎನ್‍ಯು ವಿದ್ಯಾರ್ಥಿಗಳ ಶಿಸ್ತಿನ ನಿಯಮಗಳು ಹಾಗೂ ಸರಿಯಾದ ನಡುವಳಿಕೆಗೆ ಸಂಬಂಧಿಸಿ 10 ಪುಟಗಳಿಗೆ ನೋಟಿಸ್ ಜಾರಿ ಮಾಡಿದೆ. ಪ್ರತಿಭಟನೆಗಳು ಹಾಗೂ ಫೋರ್ಜರಿಗಳಂತಹ ವಿವಿಧ ರೀತಿಯ ಕೃತ್ಯಗಳಿಗೆ ಅನೇಕ ಶಿಕ್ಷೆಯನ್ನು ಕಾಯ್ದಿರಿಸಿದೆ. ಈ ಎಲ್ಲ ನಿಯಮಗಳು ಫೆ. 3ರಂದು ಜಾರಿಗೆ ಬರುವುದಾಗಿ ತಿಳಿಸಿವೆ. ಇದನ್ನೂ ಓದಿ: ಮಂಡ್ಯಕ್ಕೆ ಮೋದಿ ಭೇಟಿಗೂ ಮುನ್ನವೇ ಶಾಕ್- ನಾರಾಯಣ ಗೌಡರಿಂದ ಪಕ್ಷಾಂತರದ ಸುಳಿವು!

ಈ ಹಿಂದೆ ತೀವ್ರ ವಿರೋಧದ ನಡುವೆಯೂ ದೆಹಲಿ ವಿಶ್ವ ವಿದ್ಯಾಲಯದಲ್ಲಿ ಬಿಬಿಸಿ ಸಿದ್ಧಪಡಿಸಿದ `ಮೋದಿ ಎ ಕ್ವಶನ್’ ಸಾಕ್ಷ್ಯಚಿತ್ರವನ್ನು (BBC Documentary) ವೀಕ್ಷಿಸಲಾಗಿತ್ತು. ವಿದ್ಯಾರ್ಥಿಗಳು ಲ್ಯಾಪ್‌ಟ್ಯಾಪ್, ಮೂಬೈಲ್‌ಗಳಲ್ಲಿ ಚಿತ್ರ ವೀಕ್ಷಿಸಿ ಆಜಾದಿ ಘೋಷಣೆ ಕೂಗಿದ್ದರು. ಇದನ್ನೂ ಓದಿ: ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ: ಸ್ಪಷ್ಟನೆ

Share This Article
Leave a Comment

Leave a Reply

Your email address will not be published. Required fields are marked *