ನುಗ್ಗೆಕಾಯಿ, ಅವರೆಕಾಳು ಸಾರು, ರೇಷ್ಮೆ ಬಟ್ಟೆ, ಪುನೀತ್‌ ಸಿನಿಮಾ ಅಂದ್ರೆ ಡಿಕೆಶಿಗೆ ಪ್ರಾಣ

By
1 Min Read

ರಾಜ್ಯದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್‌ ತಮ್ಮ ʻಮೈ ಆಟೋಗ್ರಾಫ್‌ʼನಲ್ಲಿ ಹಲವು ಇಂಟರೆಸ್ಟಿಂಗ್‌ ಸಂಗತಿಗಳ ಕುರಿತು ಹೇಳಿಕೊಂಡಿದ್ದಾರೆ.

ನುಗ್ಗೆಕಾಯಿ ಸಾರು ಅಂದ್ರೆ ಪ್ರಾಣ: ಹೆಚ್ಚಾಗಿ ನಾನ್‌ವೆಜ್‌ ಇಷ್ಟಪಡುವ ಡಿಕೆಶಿ ಶುದ್ಧ ಸಸ್ಯಹಾರಿಯಾಗಿದ್ದಾರಂತೆ. ನುಗ್ಗೆಕಾಯಿ ಸಾರು, ಅವರೆಕಾಳು, ಹಿತಿಕ್‌ ಬೇಳೆ ಸಾರು ಅಂದ್ರೆ ಪಂಚ ಪ್ರಾಣವಂತೆ. ಕೆಲವೊಮ್ಮ ಮುದ್ದೆ ಮಾಡಿದಾಗ ನುಗ್ಗೆಕಾಯಿ ಸಾರಿಗಾಗಿ ಗಲಾಟೆ ತೆಗೆದು ಮಾಡಿಸಿಕೊಂಡದ್ದೂ ಉಂಟು ಎಂದು ಹೇಳಿಕೊಂಡಿದ್ದಾರೆ.

ʻಸಿಲ್ಕ್‌ ಶಿವಾʼ ಅಂತಾರೆ: ರೇಷ್ಮೆ ಬಟ್ಟೆ ಅದರಲ್ಲೂ ಕುರ್ತಾ ಧರಿಸೋದು ಅಂದ್ರೆ ಡಿಕೆಶಿಗೆ ತುಂಬಾ ತುಂಬಾ ಇಷ್ಟವಂತೆ. ಅದ್ಕೆ ಫ್ರೆಂಡ್ಸೆಲ್ಲಾ ಇವರನ್ನ ʻಸಿಲ್ಕ್‌ ಶಿವಾʼ ಅಂತಾ ಕರೀತಾರಂತೆ. ಡಿಕೆಶಿ ಸೂಟ್‌ ಪ್ರಿಯ ಆದರೂ ಸಿಲ್ಕ್‌ ಪಂಚೆಯೇ ನನಗೆ ಸಲೀಸು ಅಂತಾರೆ. ಇದನ್ನೂ ಓದಿ: ಉದ್ಯಮಿ ಆಗುವ ಕನಸು ಕಂಡಿದ್ದ ಡಿಕೆಶಿ ಡಿಸಿಎಂ ಆಗಿದ್ದು ಹೇಗೆ..?

ಪುನೀತ್‌ ಸಿನಿಮಾ ಅಂದ್ರೆ ಪ್ರಾಣ: ಸದಾ ರಾಜಕೀಯ ಒತ್ತಡದಲ್ಲಿ ಕಾಲ ಕಳೆಯುವ ಡಿಕೆಶಿ ಮನರಂಜನೆಗಾಗಿ ಸಿನಿಮಾಗಳನ್ನೂ ನೋಡುತ್ತಾರೆ. ಅದಲ್ಲೂ ಡಿಕೆಶಿ ಅಣ್ಣಾವ್ರ ಅಪ್ಪಾ ಅಭಿಮಾನಿ ಎಂದು ʻಮೈ ಆಟೋಗ್ರಾಫ್‌ʼನಲ್ಲಿ ಬರೆದುಕೊಂಡಿದ್ದಾರೆ. ನಾನು ಅಣ್ಣಾವ್ರ ಅಪ್ಪಟ ಅಭಿಮಾನಿಯೇ ಆದರೂ, ಈಗ ನನ್ನನ್ನ ಹೆಚ್ಚು ಕಾಡುತ್ತಿರುವುದು ಪುನೀತ್‌ ರಾಜ್‌ಕುಮಾರ್‌ ಸಿನಿಮಾಗಳು. ʻಯುವರತ್ನʼ ನನ್ನ ಅಚ್ಚುಮೆಚ್ಚಿನ ಸಿನಿಮಾ. ಹಿಂದೆಲ್ಲಾ ಎಂ.ಜಿ ರಸ್ತೆಯಲ್ಲಿ ಇಂಗ್ಲಿಷ್‌ ಸಿನಿಮಾಗಳನ್ನ ನೋಡ್ತಿದ್ದೆ ಅನ್ನುತ್ತಾರೆ ಟ್ರಬಲ್‌ ಶೂಟರ್‌.

 

Share This Article