ರಾಹುಲ್ ಗಾಂಧಿ ಆಧುನಿಕ ಕಾಲದ ರಾವಣ – ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ

Public TV
2 Min Read

ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ರಾವಣನಂತೆ (Ravan) ಬಿಂಬಿಸಿ, ನವಯುಗದ ರಾವಣ ಎಂದು ಬಿಜೆಪಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಈ ವಿವಾದಾತ್ಮಕ ಪೋಸ್ಟರ್‌ನ್ನು ಬಿಜೆಪಿ (BJP) ತನ್ನ ಎಕ್ಸ್ ಖಾತೆಯಲ್ಲಿ (ಟ್ವಿಟ್ಟರ್) ಹಂಚಿಕೊಂಡಿದೆ. ಈ ಟ್ವೀಟ್ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಪೋಸ್ಟರ್‌ನಲ್ಲಿ ಬಿಜೆಪಿ, ರಾವಣ, ಕಾಂಗ್ರೆಸ್ ಪಕ್ಷದ ನಿರ್ಮಾಣ, ಜಾರ್ಜ್ ಸೊರೊಸ್ ನಿರ್ದೇಶನ ಎಂದು ಬರೆದಿದೆ. ಅಲ್ಲದೇ ಚಿತ್ರದಲ್ಲಿ ರಾವಣನಂತೆಯೇ ರಾಹುಲ್ ಗಾಂಧಿಯವರಿಗೆ ಬಹು ತಲೆಗಳನ್ನು ಬಿಡಿಸಲಾಗಿದೆ. ಅಲ್ಲದೇ ರಾವಣನಂತೆ ರಕ್ಷಾಕವಚವನ್ನು ಧರಿಸಿರುವುದನ್ನು ತೋರಿಸಲಾಗಿದೆ. ಇದರ ಜೊತೆ ಹೊಸ ಯುಗದ ರಾವಣ ಬಂದಿದ್ದಾನೆ. ಅವನು ದುಷ್ಟ, ಧರ್ಮ ವಿರೋಧಿ, ರಾಮನ ವಿರೋಧಿ ಮತ್ತು ಅವನ ಗುರಿ ಭಾರತವನ್ನು ನಾಶಮಾಡುವುದು ಎಂದು ಬಿಜೆಪಿ ಬರೆದುಕೊಂಡಿದೆ. ಇದನ್ನೂ ಓದಿ: ಸಿರಿಯಾದಲ್ಲಿ ಉಗ್ರರ ಅಟ್ಟಹಾಸ – 100 ಕ್ಕೂ ಹೆಚ್ಚು ಮಂದಿ ಬಲಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ಎಕ್ಸ್ ಪೋಸ್ಟ್‌ನಲ್ಲಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಬಿಜೆಪಿ ಈ ರೀತಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ಮತ್ತೋರ್ವ ನಾಯಕ ಕೆ.ಸಿ ವೇಣುಗೋಪಾಲ್ ಅವರು ಸಹ ಬಿಜೆಪಿಯ ಈ ನಡೆಯನ್ನು ಖಂಡಿಸಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಇದನ್ನು ಖಂಡಿಸಲು ಯಾವುದೇ ಪದಗಳಿಲ್ಲ. ಅವರ ದುಷ್ಟ ಉದ್ದೇಶಗಳು ಸ್ಪಷ್ಟವಾಗಿವೆ. ಆ ಪೋಸ್ಟರ್‌ನ ಉದ್ದೇಶ ರಾಹುಲ್ ಅವರ ಅಜ್ಜಿ ಹಾಗೂ ತಂದೆಯಂತೆ ಅವರನ್ನು ಕೊಲ್ಲುವುದಾಗಿದೆ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟರ್ ಮೂಲಕ ಹಂಗೇರಿಯನ್-ಅಮೆರಿಕನ್ ಉದ್ಯಮಿ ಸೊರೊಸ್ ಅವರನ್ನು ಬಿಜೆಪಿ ಮತ್ತೆ ಎಳೆದು ತಂದಿದೆ. ಪ್ರಪಂಚದಾದ್ಯಂತದ ಅನೇಕ ಗುಂಪುಗಳಿಗೆ ದೇಣಿಗೆಗಳನ್ನು ನೀಡಿ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಮಾತುಗಳು ಅವರ ವಿರುದ್ಧ ಕೇಳಿ ಬಂದಿವೆ. ಇದನ್ನೂ ಓದಿ: ದೇಶ ಬಿಟ್ಟು ತೊಲಗುವಂತೆ ಅಫ್ಘಾನ್‌ ನಿರಾಶ್ರಿತರಿಗೆ ಪಾಕ್ ಸರ್ಕಾರ ವಾರ್ನಿಂಗ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್