ಶೀಘ್ರವೇ ಬಿಡುಗಡೆಯಾಗಲಿದೆ ಹಂಪಿಯ ರಥದ ಚಿತ್ರ ಇರೋ 50 ರೂ. ನೋಟುಗಳು!

Public TV
1 Min Read

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಶೀಘ್ರದಲ್ಲೇ ಹಂಪಿಯ ರಥ ಇರುವ 50 ರೂ. ನೋಟುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

50 ರೂ.ಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗುವುದೆಂದು ಗವರ್ನರ್ ಉರ್ಜಿತ್ ಪಟೇಲ್ ಕಳೆದ ವರ್ಷವೇ ಪ್ರಕಟಿಸಿದ್ದರು. ಆದರೆ ಇಲ್ಲಿಯವರೆಗೂ ಬಿಡುಗಡೆಯಾಗಿರಲಿಲ್ಲ. ಆದರೆ ಈ ಹೊಸ ನೋಟುಗಳು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿತ್ತು.

ಹೊಸ ನೋಟುಗಳು ಈಗ ಚಾಲ್ತಿಯಲ್ಲಿರುವ 50 ರೂ. ನೋಟುಗಳಿಗಿಂತ ಉದ್ದ – ಅಗಲದಲ್ಲಿ ಕಿರಿದಾಗಿರುವಂತೆ ಕಂಡು ಬರುತ್ತಿದೆ.

ನವೆಂಬರ್ 8 ರಂದು 500 ರೂ. ಮತ್ತು 1 ಸಾವಿರ ರೂ. ನೋಟುಗಳು ಬ್ಯಾನ್ ಆದ ಬಳಿಕ ಹೊಸದಾಗಿ 500 ರೂ. ಮತ್ತು 2 ಸಾವಿರ ರೂ. ನೋಟುಗಳನ್ನು ಆರ್‍ಬಿಐ ಮುದ್ರಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *