ಸೆಲೆಬ್ರಿಟಿಗಳಿಗೆ, ಹೊಸದಾಗಿ ಸಿನಿಮಾಗೆ ಸೇರೋ ಮಂದಿಗೆ ಕಾಜೋಲ್ ನೀಡಿದ್ರು ಅತ್ಯುತ್ತಮ ಸಲಹೆ

Public TV
1 Min Read

ಮುಂಬೈ: ಸಿನಿಮಾ ರಂಗದಲ್ಲಿ ಹಲವಾರು ಮಂದಿ ಇಲ್ಲ ಸಲ್ಲದ ಕಾರಣ ಹೇಳಿ ಶೂಟಿಂಗ್ ತಪ್ಪಿಸಿಕೊಂಡು ಕಿರಿಕ್ ಮಾಡುತ್ತಾರೆ. ಆರಂಭದಲ್ಲಿ ಒಪ್ಪಿ ಕೊನೆಗೆ ಕೈ ಕೊಡುತ್ತಾರೆ. ಆದರೆ ಅಂತಹವರಿಗೆಲ್ಲ ಬಿಟೌನ್ ನಟಿ ಕಾಜೋಲ್ ಮಾದರಿಯಾಗಿದ್ದಾರೆ.

`ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’, `ಕುಚ್ ಕುಚ್ ಹೋತಾ ಹೈ’ ಮತ್ತು `ಕಭಿ ಖುಷಿ ಕಭಿಯೇ ಗಮ್’ ನಟಿಸಿ ಅಭಿಮಾನಿಗಳ ಮನಗೆದ್ದ ಕಾಜೋಲ್ ತಾವು ಮಾಡುತ್ತಿರುವ ಕೆಲಸವನ್ನು ಗೌರವಿಸುತ್ತಾರೆ. ಹೀಗಾಗಿ ಇವರ 25 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ ಒಂದು ದಿನವು ಶೂಟಿಂಗ್ ಕ್ಯಾನ್ಸಲ್ ಮಾಡಿಲ್ಲವಂತೆ.

ಕಾಜೋಲ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಬರೋಬ್ಬರಿ 25 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾವು ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಒಂದು ದಿನ ಚಿತ್ರೀಕರಣವನ್ನು ಕ್ಯಾನ್ಸಲ್ ಮಾಡಿದರೂ ಲಕ್ಷಗಟ್ಟಲೆ ಹಣ ನಷ್ಟವಾಗುತ್ತದೆ. ಆದ್ದರಿಂದ ನಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿ ಇರುತ್ತದೆ ಎಂದು ಹೇಳಿದರು.

ನನ್ನ 25 ವರ್ಷದ ವೃತ್ತಿಜೀವನದಲ್ಲಿ ಒಂದು ದಿನವೂ ನಾನು ಶೂಟಿಂಗ್ ಕ್ಯಾನ್ಸಲ್ ಮಾಡಬೇಕೆಂದು ಯೋಚನೆ ಮಾಡಿಲ್ಲ. ಅಷ್ಟೇ ಅಲ್ಲದೇ ವಿಮಾನವನ್ನು ಮಿಸ್ ಮಾಡಿಕೊಂಡಿಲ್ಲ. ನಾನು ಪ್ರಮಾಣಿಕತೆಯಿಂದ ಇದ್ದೇನೆ ಎಂದು ಹೇಳಿದರು.

ಒತ್ತಡದ ಕೆಲಸ, ಆಹಾರ, ಮಲಗುವ ಸಮಯದಲ್ಲಿ ಹೆಚ್ಚು ಕಡಿಮೆಯಾದಾಗ ನಮ್ಮ ಜೀವನದಲ್ಲೂ ಆರೋಗ್ಯ ಸಮಸ್ಯೆ ಇರುತ್ತದೆ. ನನ್ನ 43 ವಯಸ್ಸಿನಲ್ಲಿ ನನ್ನ ಮಗಳು ನೈಸಾ ಅಸ್ವಸ್ಥಳಾಗಿದ್ದಾಗ ಮಾತ್ರ ಶೂಟಿಂಗ್ ಒಮ್ಮೆ ಕ್ಯಾನ್ಸಲ್ ಮಾಡಿದ್ದೆ ಎಂದು ಪ್ರಮಾಣಿಕತೆಯಿಂದ ಹೇಳಿಕೊಂಡಿದ್ದಾರೆ.

ನನ್ನ ಮಗಳಿಗೆ ಒಂದು ದಿನ 104 ಡಿಗ್ರಿ ಜ್ವರ ಬಂದಿತ್ತು. ಅಂದು ಮಾತ್ರ ನಾನು ನಿರ್ಮಾಪಕರಿಗೆ ಈ ದಿನ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಆದರೆ ನನಗೆ ಆನಾರೋಗ್ಯ ಇದ್ದಾಗ ಶೂಟಿಂಗ್ ಕ್ಯಾನ್ಸಲ್ ಮಾಡಿಲ್ಲ. ತುಂಬಾ ಜ್ವರ ಇದ್ದಾಗಲೂ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದೆ ಎಂದು ತಮ್ಮ ಸಿನಿ ಜೀವನದ ಕಥೆಯನ್ನು ಮೆಲುಕು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *