ಇದು ದೇಶದ ಮನಸ್ಥಿತಿ, ಕ್ವಿಟ್ ಇಂಡಿಯಾ ಕಾಂಗ್ರೆಸ್ – ಎಕ್ಸಿಟ್ ಪೋಲ್ ಬಣ್ಣಿಸಿದ್ದ ನಾಯ್ಡು ಕಾಲೆಳೆದ ನೆಟ್ಟಿಗರು

Public TV
1 Min Read

ಬೆಂಗಳೂರು: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎಕ್ಸಿಟ್ ಪೋಲ್ ಅನ್ನು 2014ರಲ್ಲಿ ಒಪ್ಪಿಕೊಂಡಿದ್ದರು. ಆದರೆ ಈಗ ಏಕ್ಸಿಟ್ ಪೋಲ್ ಸತ್ಯವಲ್ಲ ಎಂದು ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

2014ರಲ್ಲಿ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ಹೊರ ಬೀಳುತ್ತಿದ್ದಂತೆ ಚಂದ್ರಬಾಬು ನಾಯ್ಡು ಅವರು, “ಎಕ್ಸಿಟ್ ಪೋಲ್ ದೇಶದ ಮನಸ್ಥಿತಿಯನ್ನು ತೋರಿಸುತ್ತಿದೆ. ಕ್ವಿಟ್ ಇಂಡಿಯಾ ಕಾಂಗ್ರೆಸ್” ಎಂದು ಟ್ವೀಟ್ ಮಾಡಿದ್ದರು.

ಚಂದ್ರಬಾಬು ನಾಯ್ಡು ಅವರು ಈ ಬಾರಿ ಎಕ್ಸಿಟ್ ಪೋಲ್ ಸುಳ್ಳು ಎಂದು ದೂರಿದ್ದಾರೆ. ಹೀಗಾಗಿ ನಾಯ್ಡು ಅವರ 2014ರ ಟ್ವೀಟ್ ಅನ್ನು ರೀ ಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.

ಎಂತಹ ಭವಿಷ್ಯ ನುಡಿದ್ದೀರಿ ಚಂದ್ರಬಾಬು ನಾಯ್ಡು ಸರ್. ಇದನ್ನು 2024ರಲ್ಲಿ ನೀವು ರೀ ಟ್ವೀಟ್ ಮಾಡುತ್ತಿರಾ ಎಂಬ ಬಲವಾದ ನಂಬಿಕೆ ನಮಗಿದೆ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.

ಆಂಧ್ರಪ್ರದೇಶದಿಂದ ತೊಲಗಿ ಎಂದು ಅಲ್ಲಿ ಮತದಾರರು ತೆಲಗು ದೇಶಂ ಪಕ್ಷ (ಟಿಡಿಪಿ)ಗೆ ಹೇಳಿದ್ದಾರೆ ಎಂದು ಪಿಂಕು ಎಂಬವರು ಚಂದ್ರಬಾಬು ನಾಯ್ಡು ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಿ ಸರ್ಕಾರ ರಚಿಸಲು ಚಂದ್ರಬಾಬು ನಾಯ್ಡು ಸಿದ್ಧತೆ ನಡೆಸಿದ್ದಾರೆ. ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಎಸ್‍ಪಿ ನಾಯಕಿ ಮಾಯಾವತಿ, ಎಸ್‍ಪಿ ನಾಯಕ ಅಖಿಲೇಶ್ ಯಾದವ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಸೇರಿದಂತೆ ಅನೇಕ ನಾಯಕರನ್ನು ಭೇಟಿಯಾಗಿದ್ದಾರೆ.

2018ರ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಆಗ ಬಿಜೆಪಿಗೆ ಒಂದು ಕ್ಷಣವೂ ಅವಕಾಶ ಕೊಡದಂತೆ ಕಾರ್ಯಾಚರಣೆಗಿಳಿದ ಕಾಂಗ್ರೆಸ್ ನಾಯಕರು, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಈಗ ಕೇಂದ್ರದಲ್ಲಿ ಇದೇ ಮಾದರಿಯನ್ನು ಅನುಸರಿಸುವ ತಯಾರಿ ನಡೆದಿದೆ.

https://twitter.com/imPk_Lucknowi/status/1130415735707058176

Share This Article
Leave a Comment

Leave a Reply

Your email address will not be published. Required fields are marked *