ದೀಪಿಕಾ ನಂತರ ಕತ್ರಿನಾ ಕೈಫ್ ಕೂಡ ಪ್ರೆಗ್ನೆಂಟ್?

Public TV
1 Min Read

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇತ್ತೀಚೆಗೆ ತಾಯಿಯಾಗುತ್ತಿರುವ ಗುಡ್ ನ್ಯೂಸ್ ತಿಳಿಸಿದ್ದರು. ಅನುಷ್ಕಾ ಶರ್ಮಾ ಹೊಸ ಅತಿಥಿಯ ಆಗಮನವಾಯ್ತು. ಈಗ ಕತ್ರಿನಾ ಕೈಫ್ (Katrina Kaif) ಕೂಡ ಪ್ರೆಗ್ನೆಂಟ್ (Pregnant) ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

ಕತ್ರಿನಾ ಕೈಪ್ ಅವರು ಇತ್ತೀಚಿನ ಫೋಟೋಶೂಟ್‌ಗಳಲ್ಲಿ ಹೊಟ್ಟೆಯನ್ನು ದುಪ್ಪಟ್ಟಾದಿಂದ ಮರೆಮಚಿದ್ದಾರೆ. ಈ ಲುಕ್ ಎಲ್ಲರ ಗಮನ ಸೆಳೆಯುತ್ತಿದ್ದಂತೆ ಕತ್ರಿನಾ ದಂಪತಿ ಪೋಷಕರಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಸುದ್ದಿ ನಿಜನಾ ಎಂಬುದನ್ನು ಕತ್ರಿನಾ- ವಿಕ್ಕಿ ತಿಳಿಸುವವರೆಗೂ ಕಾಯಬೇಕಿದೆ. ಇದನ್ನೂ ಓದಿ:ರಣ್‌ವೀರ್ ಜೊತೆ ರೊಮ್ಯಾನ್ಸ್ ಮಾಡಲು ದುಬಾರಿ ಸಂಭಾವನೆ ಬೇಡಿಕೆಯಿಟ್ಟ ಕಿಯಾರಾ

ಕತ್ರಿನಾ ಜೋಡಿ ಇತ್ತೀಚೆಗೆ ಅಂಬಾನಿ ಮನೆ ಮಗನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ವಿಕ್ಕಿ, ಪತ್ನಿಯನ್ನು ಜೋಪಾನ ಮಾಡ್ತಿರೋದನ್ನು ನೋಡಿ ಗುಡ್ ನ್ಯೂಸ್ ಇದೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಅದಷ್ಟೇ ಅಲ್ಲ, ಪ್ರೆಗ್ನೆಂಟ್ ಕಳೆ ಕತ್ರಿನಾ ಮುಖದಲ್ಲಿ ಕಾಣ್ತಿದೆ. ಗ್ಲೋ ಆಗಿದ್ದಾರೆ ಅಂತ ಫ್ಯಾನ್ಸ್ ಬಗೆ ಬಗೆಯ ಕಾಮೆಂಟ್ ಮಾಡ್ತಿದ್ದಾರೆ. ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ.

2021ರಲ್ಲಿ ವಿಕ್ಕಿ ಕೌಶಲ್- ಕತ್ರಿನಾ ಕೈಫ್ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಈಗ ಅವರು ಮದುವೆಯಾಗಿ 3 ವರ್ಷಗಳು ಆಗಿದೆ.

Share This Article