ಎದೆಯ ಸೀಳು ಕಾಣುವಂತೆ ತುಂಡು ಬಟ್ಟೆ ತೊಟ್ಟ ‘ಹೆಬ್ಬುಲಿ’ ನಟಿ ವಿರುದ್ಧ ನೆಟ್ಟಿಗರು ಗರಂ

Public TV
1 Min Read

ನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ (Amala Paul) ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಮತ್ತೆ ಸಿನಿಮಾ ಕೆಲಸದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕಾಲೇಜು ಕಾರ್ಯಕ್ರಮವೊಂದರಲ್ಲಿ ಎದೆಯ ಸೀಳು ಕಾಣುವಂತೆ ತುಂಡು ಬಟ್ಟೆ ಧರಿಸಿ ಬಂದ ಅಮಲಾ ವಿರುದ್ಧ ನೆಟ್ಟಿಗರು ರಾಂಗ್ ಆಗಿದ್ದಾರೆ. ಇದನ್ನೂ ಓದಿ:‘ಲೈಫ್ ಆಫ್ ಮೃದುಲ’ ಚಿತ್ರದ ಸಾಂಗ್ ರಿಲೀಸ್

ತಾಯ್ತನದ ಖುಷಿಯಲ್ಲಿರುವ ಅಮಲಾ ಪೌಲ್ ಮತ್ತೆ ಸಿನಿಮಾ ಕೆಲಸದತ್ತ ಮುಖ ಮಾಡಿದ್ದಾರೆ. ಅಮಲಾ ನಟಿಸಿರುವ ‘ಲೆವೆಲ್ ಕ್ರಾಸ್’ ಎಂಬ ಮಲಯಾಳಂ ಸಿನಿಮಾ ಈಗ ರಿಲೀಸ್‌ಗೆ ಸಿದ್ಧವಾಗಿದೆ. ಇದರ ಪ್ರಚಾರ ಕಾರ್ಯ ಕೂಡ ಭರದಿಂದ ನಡೆಯುತ್ತಿದೆ. ಸಿನಿಮಾ ಪ್ರಮೋಷನ್ ಸಾಥ್ ಕೊಟ್ಟಿರುವ ಅಮಲಾ, ಕಾಲೇಜು ಫಂಕ್ಷನ್‌ವೊಂದಕ್ಕೆ ಹಾಟ್ ಆಗಿ ಕಾಣಿಸಿಕೊಂಡಿದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.

 

View this post on Instagram

 

A post shared by Amala Paul (@amalapaul)


ಎದೆಯ ಸೀಳು ಕಾಣುವಂತೆ ಶಾರ್ಟ್ ಡ್ರೆಸ್ ಧರಿಸಿ ಯಾರಾದರೂ ಕಾಲೇಜು ಕಾರ್ಯಕ್ರಮಕ್ಕೆ ಹೀಗೆ ಬರುತ್ತಾರಾ. ನಟಿಯಾಗಿ ಗೌರವಯುತವಾಗಿ ನಡೆದುಕೊಳ್ಳಬೇಕು ಅಲ್ವಾ? ಅಂತ ಅಮಲಾಗೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.


ಮಾಲಿವುಡ್‌ನಲ್ಲಿ ಸ್ಟಾರ್‌ ನಟರಿಗೆ ಜೋಡಿಯಾಗಿ ನಟಿಸಿ ಸೈ ಎನಿಸಿಕೊಂಡಿರುವ ಅಮಲಾ ಪೌಲ್‌ ಅವರು ಕನ್ನಡದ ‘ಹೆಬ್ಬುಲಿ’ (Hebbuli Film) ಸಿನಿಮಾದಲ್ಲಿ ಸುದೀಪ್‌ಗೆ (Sudeep) ನಾಯಕಿಯಾಗಿದ್ದರು.

Share This Article