ನೇಪಾಳ ರಾಯಭಾರಿಯಾದ ಬಾಲಿವುಡ್ ನಟಿ ಜಯಪ್ರದಾ

Public TV
1 Min Read

ನವದೆಹಲಿ: ಮಾಜಿ ಸಂಸತ್ ಸದಸ್ಯೆ ಹಾಗೂ ಬಾಲಿವುಡ್‍ನ ಖ್ಯಾತ ನಟಿ ಜಯಪ್ರದಾ ಅವರನ್ನು ನೇಪಾಳ ಸರ್ಕಾರ ಸೌಹಾರ್ದ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ.

ಸೌಹಾರ್ದ ರಾಯಭಾರಿಯನ್ನಾಗಿ ನಟಿ ಜಯಪ್ರದಾರವರನ್ನು ಆಯ್ಕೆಮಾಡುವ ಬಗ್ಗೆ ನೇಪಾಳ ಸರ್ಕಾರ ಸಂಸತ್ತಿನಲ್ಲಿ ವಿಚಾರ ಪ್ರಸ್ತಾಪಿಸಿತ್ತು. ಇದಕ್ಕೆ ಎಲ್ಲಾ ಸದಸ್ಯರು ಸರ್ವಾನುಮತದಿಂದ ಆಯ್ಕೆಮಾಡಿ ನೇಪಾಳ ಸರ್ಕಾರದ ಸೌಹಾರ್ದ ರಾಯಭಾರಿಯನ್ನಾಗಿ ನಟಿ ಜಯಪ್ರದಾರವರನ್ನು ಅಂಗೀಕರಸಿದೆ.

ಜಯಪ್ರದಾ ಅವರು ರಾಯಭಾರಿ ಹುದ್ದೆಗೆ ನಾಮನಿರ್ದೇಶನದಿಂದಾಗಿ ನೆರೆಹೊರೆ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಬಲಗೊಳಿಸುವ ಹಾಗೂ ನೇಪಾಳದ ಪ್ರವಾಸೋದ್ಯಮ ಇಲಾಖೆಯನ್ನು ಭಾರತದಲ್ಲಿ ಉತ್ತೇಜಿಸಲು ನೆರವಾಗಲಿದೆ. ಒಟ್ಟು ನಾಲ್ಕು ವರ್ಷಗಳ ಕಾಲ ಜಯಪ್ರದಾ ಅವರು ನೇಪಾಳದ ರಾಯಭಾರಿಗಳಾಗಲಿದ್ದಾರೆ ಎನ್ನಲಾಗಿದೆ.

ಆದಾಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನೇಪಾಳಕ್ಕೆ ಪ್ರವಾಸೋದ್ಯಮವೇ ಮೂಲ ಆಧಾರವಾಗಿದೆ. ಅಲ್ಲದೇ ಭಾರತದ ಪ್ರವಾಸಿಗರು ನೇಪಾಳದ ಪ್ರಮುಖ ಗ್ರಾಹಕರಾಗಿದ್ದಾರೆ. ಹೀಗಾಗಿ ಪ್ರವಾಸೋದ್ಯಮವನ್ನು ಸೆಳೆಯುವ ಹಾಗೂ ಪ್ರೋತ್ಸಾಹಿಸುವ ದೃಷ್ಟಿಯಿಂದ ನೇಪಾಳ ಸರ್ಕಾರವು 2020ರ ವರ್ಷವನ್ನು ವಿಸಿಟ್ ನೇಪಾಳ ಇಯರ್ ಎಂಬ ಅಡಿಬರಹದ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಮೂಲಕ ನೇಪಾಳಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದೆ. ಈ ಯೋಜನೆ ಮೂಲಕ ಸುಮಾರು 20 ಲಕ್ಷ ಪ್ರವಾಸಿಗರನ್ನು ಸೆಳೆಯುವ ಉದ್ದೇಶವನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *