ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನುಷ್ಠಾನವನ್ನು ರದ್ದು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಿಸಿದ್ದಾರೆ.
ಇಂದು ನಡೆದ ಕೆಪಿಸಿಸಿ (KPCC) ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಹಿರಿಯ ನಾಯಕ ರೆಹಮಾನ್ ಖಾನ್, ಆರ್‌ಎಸ್‍ಎಸ್ ಕಾರ್ಯಸೂಚಿಯ ಭಾಗವಾಗಿರುವ ಎನ್‍ಇಪಿಯನ್ನು ರಾಜ್ಯದಲ್ಲಿ ಕೈಬಿಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ತಮಿಳುನಾಡು ಇಷ್ಟು ತುರ್ತಾಗಿ ಸುಪ್ರೀಂ ಮೊರೆ ಹೋಗುವ ಅಗತ್ಯ ಇರಲಿಲ್ಲ: ಡಿಕೆಶಿ
ಇದಕ್ಕೆ ತಮ್ಮ ಭಾಷಣದಲ್ಲಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ಮುಂದಿನ ವರ್ಷದಿಂದ ಎನ್‍ಇಪಿ ರದ್ದು ಮಾಡುತ್ತೇವೆ. ಸಂವಿಧಾನಕ್ಕೆ ಪೂರಕವಾದ ಶಿಕ್ಷಣ ನೀತಿಯನ್ನು ಜಾರಿ ಮಾಡ್ತೇವೆ ಎಂದರು.
ಎನ್‍ಇಪಿಗೆ ಶಿಕ್ಷಕರು, ಪೋಷಕರು ಸೇರಿ ಎಲ್ಲರಿಂದ ವಿರೋಧವಿದೆ. ಬಿಜೆಪಿ (BJP) ಅಧಿಕಾರದಲ್ಲಿರುವ ಇತರೆ ರಾಜ್ಯಗಳಲ್ಲೇ ಇದು ಅನುಷ್ಠಾನಕ್ಕೆ ಬಂದಿಲ್ಲ. ಕರ್ನಾಟಕದಲ್ಲಿ ಮಾತ್ರ ತರಾತುರಿಯಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗಿತ್ತು ಎಂದು ಸಿಎಂ ಹೇಳಿದರು.
Web Stories
		

 
			 
		 
		 
				 
				 
				 
				 
				 
				 
				 
				 
				 
				 
                                
                              
		