ಲವ್ಲಿ ಸ್ಟಾರ್ ಪ್ರೇಮ್ ಗೆ ಇಂದು 42ನೇ ಹುಟ್ಟುಹಬ್ಬದ ಸಂಭ್ರಮ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಲವ್ಲಿ ಸ್ಟಾರ್, ನೆನಪಿರಲಿ ಪ್ರೇಮ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

42ನೇ ವರ್ಷಕ್ಕೆ ಕಾಲಿಟ್ಟಿರೋ ನಟ ಪ್ರೇಮ್ ನಾಗರಭಾವಿಯ ನಿವಾಸದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಪ್ರೇಮ್ ಅಭಿಮಾನಿಗಳು ಹಾಗೂ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಇದ್ದರು. ಹುಟ್ಟುಹಬ್ಬದ ವಿಶೇಷವಾಗಿ ಪ್ರೇಮ್ `ದಳಪತಿ’ ಸಿನಿಮಾದ ಪ್ರಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

ಲವ್ ಗುರು, ಜೂಮ್ ಸೇರಿದಂತೆ ಅನೇಕ ಸಿನಿಮಾಗಳನ್ನು ನಿದೇರ್ಶನ ಮಾಡಿರುವ ಪ್ರಶಾಂತ್ ರಾಜ್ ಅವರೇ ದಳಪತಿ ಚಿತ್ರವನ್ನೂ ಕೂಡ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರೇಮ್ ದಳಪತಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕೃತಿ ಕರಬಂಧ ಪ್ರೇಮ್ ಜೊತೆ ನಟಿಸಿದ್ದಾರೆ. ಇದೊಂದು ಚಾಲೇಂಜ್ ನೀಡಬಲ್ಲ ಪಾತ್ರ ಅಂತಾನೂ ಕೃತಿ ಹೇಳಿದ್ದಾರೆ. ಸಿನಿಮಾದ ಶೀರ್ಷಿಕೆಯೇ ಹೇಳುವಂತೆ ಇದು ಕ್ಲಾಸ್ ಮತ್ತು ಮಾಸ್ ಎರಡೂ ಬಗೆಯ ಪ್ರೇಕ್ಷರಿಗೆ ಈ ಸಿನಿಮಾ ಇಷ್ಟವಾಗುತ್ತೆ ಅಂತಾ ಪ್ರಶಾಂತ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *