ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಟಿ.ಬೇಗೂರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆಸಲಾಯಿತು.
ಅಧ್ಯಕ್ಷ ಸ್ಥಾನಕ್ಕೆ ಬಿ. ಬೈರೇಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆಂಪಣ್ಣ ನಾಮಪತ್ರವನ್ನ ಸಲ್ಲಿಸಿದ್ದರು. ಆದರೆ ಇದಕ್ಕೆ ಯಾರೂ ನಾಮಪತ್ರಗಳನ್ನ ಸಲ್ಲಿಸದ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರ ಒಮ್ಮತದಿಂದ ಅವಿರೋಧವಾಗಿ ಆಯ್ಕೆಯಾದರು.
ಎರಡನೇ ಬಾರಿಗೆ ಅಧ್ಯಕ್ಷರಾಗಿ ಬಿ.ಬೈರೇಗೌಡ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೆಂಪಣ್ಣ ಆಯ್ಕೆಯಾದರು. ಈ ವೇಳೆ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ನಿರ್ದೇಶಕರು ಸನ್ಮಾನಿಸಿ ಸಿಹಿಹಂಚಿ ಸಂಭ್ರಮಿಸಿ ಗೌರವಿಸಿದರು.
ನಿರ್ದೇಶಕರು ಬಿಎನ್. ಗಂಗರಾಜು, ಜಿ. ಕಾಂತರಾಜು ಮಿಣ್ಣಾಪುರ, ಆರ್ ಭಾಸ್ಕರ್, ಸುನಂದಮ್ಮ, ಕೆಂಪಮ್ಮ, ನಿಂಗಯ್ಯ, ಹನುಮಂತರಾಯಪ್ಪ, ಕೆ.ಕೃಷ್ಣೇಗೌಡ ಸೇರಿದಂತೆ ಸ್ಥಳೀಯ ಮುಖಂಡರಾದ ಕೆ. ನಾಗರಾಜು, ಅರ್ಜುನ್, ಬಿಕೆ.ಮುನಿರಾಜು, ಸಿದ್ದಪ್ಪ, ಎಲ್. ಬೈರೇಗೌಡ, ಮುನಿಯಪ್ಪ, ಕುಮಾರ್, ವೆಂಕಟಾರಸಪ್ಪ, ಲಕ್ಷ್ಮಿಕಾತ್, ಮುಖ್ಯ ಕಾರ್ಯ ನಿರ್ವಾಹಕ ಬಿಎಲ್ ಅನಂತರಾಮು, ಗುಮಾಸ್ತ ಸಿ ನಾರಾಯಣ ಮತ್ತಿತರರು ಹಾಜರಿದ್ದರು.