ದೇಶಿಯ ತಳಿ ಹಾಲನ್ನು ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಶೇ.50ರಷ್ಟು ರಿಯಾಯಿತಿ

Public TV
1 Min Read

ನೆಲಮಂಗಲ: ದೇಶಿಯ ತಳಿ ಹಾಲನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶೇ.50 ರಷ್ಟು ರಿಯಾಯಿತಿ ದರದಲ್ಲಿ ದೇಶಿಯ ಗೋವುಗಳನ್ನು ರೈತರಿಗೆ ನೀಡುತ್ತಿದ್ದೇವೆ ಎಂದು ಬಮೂಲ್ ನಿರ್ದೇಶಕ ಜಿ.ಆರ್ ಭಾಸ್ಕರ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದಲ್ಲಿ, ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ಹಾಗೂ ಬಮೂಲ್ ಕಲ್ಯಾಣ ಟ್ರಸ್ಟ್ ಮತ್ತು ರಾಮಯ್ಯ ಹರ್ಷ ಆಸ್ಪತ್ರೆ, ಪದ್ಮಭೂಷಣ ಡಾ.ಎಂ.ಸಿ. ಮೋದಿ ಕಣ್ಣಿನ ಆಸ್ಪತ್ರೆ, ರಕ್ಷಾ ಎಜುಕೇಶನಲ್, ಅಗ್ರಿಕಲ್ಚರಲ್, ಮೆಡಿಕಲ್ ಚಾರಿಟಬಲ್ ಟ್ರಸ್ಟ್ ಮತ್ತು ನೆಲಮಂಗಲ ತಾಲೂಕು ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದರು.

ಇದೇ ವೇಳೆಯಲ್ಲಿ ಶಿಬಿರಕ್ಕೆ ಉದ್ಘಾಟನೆಯನ್ನು ಮೇಲಣಗವಿ ಮಠದ ಶ್ರೀ ಮಲಯಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮಿಜೀ ಹಾಗೂ ಹೊನ್ನಮ್ಮಗವಿ ಮಠದ ಶ್ರೀ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಜೀ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಚಾಲನೆ ನೀಡಿದರು.

ಇದೇ ವೇಳೆಯಲ್ಲಿ ನೆಲಮಂಗಲ ಬಮೂಲ್ ಶಿಬಿರದ ಉಪ ವ್ಯವಸ್ಥಾಪಕ ಎ.ಆರ್ ಗೋಪಾಲ್ ಗೌಡ ಮಾತನಾಡಿ, ಈ ಶಿಬಿರದಲ್ಲಿ ಸಾವಿರ ಜನಕ್ಕೂ ಅಧಿಕ ಸಂಖ್ಯೆಯಲ್ಲಿ 16ಕ್ಕೂ ಅಧಿಕ ರೋಗಗಳಿಗೆ ಚಿಕಿತ್ಸೆ ನೀಡಲಾಯಿತು, ಗ್ರಾಮೀಣ ಪ್ರದೇಶದ ರೈತಾಪಿ ಜನರಿಗೆ ಅನುಕೂಲವಾಗಿದೆ ಎಂದರು.

ಈ ಶಿಬಿರದಲ್ಲಿ ವಿಸ್ತರಣಾಧಿಕಾರಿ ನಾಗರಾಜ್, ರಾಮಯ್ಯ ಹರ್ಷ ಆಸ್ಪತ್ರೆಯ ನರೇಶ್ ಕುಮಾರ್, ಬಮೂಲ್ ಕಲ್ಯಾಣ ಟ್ರಸ್ಟ್‍ನ ರಮೇಶ್, ತಾಲೂಕು ವೈದ್ಯಾಧಿಕಾರಿ ಡಾ. ಪ್ರಸನ್ನ, ಡಾ. ಲೋಕೇಶ್, ವಿರೂಪಾಕ್ಷ, ಶಿವಗಂಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತರಾಜು, ಗ್ರಾಮಸ್ಥರಾದ ಮುಪ್ಪಿನಸ್ವಾಮಿ, ಬಸಪ್ಪ ಮತ್ತಿರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *