ನೆಲಮಂಗಲ: ಮಮತೆ, ಪ್ರೀತಿ ತಾಯಿ, ವಾತ್ಸಲ್ಯ ಅನ್ನೋದು ಕೇವಲ ಮನುಷ್ಯರಿಗಷ್ಟೆ ಅಲ್ಲ ಪ್ರಾಣಿಗಳಿಗೂ ಇದೆ ಅನ್ನೋದಕ್ಕೆ ಕರುಳು ಹಿಂಡುವ ದೃಶ್ಯ ಒಂದು ಸಾಕ್ಷಿಯಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಅಗ್ನಿಶಾಮಕ ಠಾಣೆ ಎದುರು ತಾಯಿ ಶ್ವಾನದ ಎದುರು ಭೀಕರ ಘಟನೆ ನಡೆದಿದೆ. ತಾಯಿ ಶ್ವಾನದ ಮುಂದೆ ಮರಿ ಶ್ವಾನ ಅಪಘಾತದಲ್ಲಿ ಸಾವನ್ನಪ್ಪಿದೆ. ಇದನ್ನ ತಿಳಿಯದ ತಾಯಿ ಮಗುವನ್ನು ರಕ್ಷಿಸುವಂತೆ ತನ್ನದೇ ಭಾಷೆಯಲ್ಲಿ ಅಂಗಲಾಚುವ ದೃಶ್ಯ ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿದೆ, ಇದಕ್ಕೆ ಹೇಳೊದು ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಂತಾ.ಇದನ್ನೂ ಓದಿ: ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್ ಬುಲೆರೋ ವಾಹನ ಅಪಘಾತ
ಅಪಘಾತದ ನಂತರ ಎದುರಿಗೆ ಬರುವ ವಾಹನಗಳ ಮೇಲೆ ಶ್ವಾನ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ರಸ್ತೆಗಳಲ್ಲಿ ಓಡಾಡುವ ವಾಹನಗಳಿಗೆ ಅಡ್ಡ ಬಂದು ತನ್ನ ಮಗುವನ್ನು ರಕ್ಷಿಸಿ ಎನ್ನುವ ಮೂಕ ರೋದನೆ ತಾಯಿಯ ವಾತ್ಸಲ್ಯಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: ನರೇಂದ್ರ ಮೋದಿ ಹುಟ್ಟುಹಬ್ಬ- ಶುಭ ಕೋರಿದ ಎಚ್‍ಡಿಡಿ, ಎಚ್‍ಡಿಕೆ
ಇನ್ನೂ ರಸ್ತೆ ಅಪಘಾತದ ವೇಳೆ ಗಾಯಾಳುಗಳನ್ನ ರಕ್ಷಣೆ ಮಾಡದೆ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುವಂತವರೇ ಹೆಚ್ಚು, ಈ ಶ್ವಾನದ ದೃಶ್ಯ ನೋಡಿದ ಮೇಲಾದರೂ ಜನರು ಸಹಾಯಕ್ಕೆ ಧಾವಿಸಿ ಬರುವಂತಾಗಲಿ ಎಂಬುದು ಪಬ್ಲಿಕ್ ಟಿವಿ ಆಶಯ.

 
			

 
		 
		 
                                
                              
		