120 ದಿನದೊಳಗೆ ನ್ಯಾಯ ಕೊಡಿಸ್ತೀವಿ- ನೇಹಾ ತಂದೆಗೆ ಸಿಎಂ ಭರವಸೆ

Public TV
1 Min Read

ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ಸಂಬಂಧ 120 ದಿನದೊಳಗೆ ನ್ಯಾಯ ಕೊಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನಿರಂಜನ್‌ ಹಿರೇಮಠಗೆ ಭರವಸೆ ಕೊಟ್ಟಿದ್ದಾರೆ.

ನೇಹಾ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲು ಸೂಚಿಸಿದ್ದೇನೆ. ಇದೊಂದು ದುರದೃಷ್ಟ ಘಟನೆಯಾಗಿದ್ದು, ಸಿಐಡಿಗೆ ಕೋಟ್ಟಿದ್ದೇವೆ. ಆರೋಪಿಯನ್ನು ಬಂಧಿಸಿದ್ದೇವೆ ಎಂದರು.

ಘಟನೆಯನ್ನು ತ್ರೀವಾಗಿ ಖಂಡನೆ ಮಾಡುತ್ತೇನೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದು ಅತ್ಯಂತ ಕಠಿಣ ಶಿಕ್ಷೆ ಇದೆ ಅದನ್ನು ಕೊಡಿಸುವ ಪ್ರಯತ್ನ ಮಾಡುತ್ತೇವೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಾನು ಸಾಂತ್ವನ ಹೇಳಲು ಬಂದಿದ್ದೇನೆ. ರಾಜಕೀಯ ಮಾತನಾಡಲ್ಲ. ಅವರ ಕುಟುಂಬಕ್ಕೆ ರಕ್ಷಣೆ ನೀಡಲು ಸಿದ್ಧ. ಆರೋಪಿಗೆ ಕುಮ್ಮಕ್ಕು ನೀಡಿರುವ ಆ್ಯಂಗಲ್ ನಲ್ಲಿ ತನಿಖೆ ಮಾಡಲು ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

ನೇಹಾ ಕುಟುಂಬದವರಿಗೆ ರಕ್ಷಣೆ ಬೇಕಿದ್ದರೆ ಕೊಡುತ್ತೇವೆ. ಸಿಐಡಿ ಅಧಿಕಾರಿಗಳು ತನಿಖೆ ಮಾಡ್ತಾರೆ. ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ನಂತರ ಕೋರ್ಟ್ ನಲ್ಲಿ ಟ್ರಯಲ್ ನಡೆಯುತ್ತೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಗರಿಷ್ಠ ಶಿಕ್ಷೆ ಆಗುತ್ತೆ. ಧೈರ್ಯವಾಗಿ ಇರಿ. 120 ದಿನದ ಒಳಗೆ ನ್ಯಾಯ ಕೊಡಿಸೋಣ ಎಂದು ಸಿಎಂ ಅವರು ನಿರಂಜನ್ ಹಿರೇಮಠ್ ಬೆನ್ನು ತಟ್ಟಿದರು.

ಇದೇ ವೇಳೆ ಸಿಬಿಐ ಕೊಡಬೇಕು ಅನ್ನೋ ಬಿಜೆಪಿ ಬೇಡಿಕೆ ವಿಚಾರದ ಕುರಿತು ಮಾತನಾಡಿ, ಬಿಜೆಪಿ ರಾಜಕೀಯ ಮಾಡ್ತಿದೆ. ಒಂದು ಪ್ರಕಣವನ್ನಾದ್ರೂ ಅವರು ಸಿಬಿಐಗೆ ಕೊಟ್ಟಿದ್ದಾರಾ..?. ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೆವು ಎಂದು ವಾಗ್ದಾಳಿ ನಡೆಸಿದರು.

Share This Article