ಜೂ.20ಕ್ಕೆ ನೀನಾಸಂ ಸತೀಶ್ ಹುಟ್ಟು ಹಬ್ಬ : ಪೆಟ್ರೋಮ್ಯಾಕ್ಸ್ ಟೀಮ್ ನಿಂದ ಸಿಹಿ ಸುದ್ದಿ

Public TV
1 Min Read

ದೇ ಜೂನ್ 20ರಂದು ನೀನಾಸಂ ಸತೀಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಹತ್ತು ಹಲವು ಉಡುಗೊರೆಗಳನ್ನು ನೀಡಲು ಚಿತ್ರತಂಡಗಳು ಸಿದ್ಧವಾಗಿವೆ. ಈಗಾಗಲೇ ಶೂಟಿಂಗ್ ಮುಗಿಸಿ, ನೇರವಾಗಿ ಓಟಿಟಿಯಲ್ಲಿ ‘ಡಿಯರ್ ವಿಕ್ರಮ್’ ಸಿನಿಮಾ ರಿಲೀಸ್ಗೆ ರೆಡಿಯಿದೆ. ಈ ಸಿನಿಮಾದ ಜೊತೆಗೆ ಪೆಟ್ರೋಮ್ಯಾಕ್ಸ್ ಕೂಡ ಸಂಪೂರ್ಣ ಶೂಟಿಂಗ್ ಮುಗಿಸಿದ್ದು, ಈ ಸಿನಿಮಾದ ರಿಲೀಸ್ ಡೇಟ್ ಅಥವಾ ಇನ್ನೇನಾದರೂ ಸಿಹಿ ಸುದ್ದಿ ಕೊಡಬಹುದಾ ಎಂದು ನಿರೀಕ್ಷಿಸಲಾಗಿದೆ.

ಇಂದು ಸತೀಶ್ ಫೋಟೋವೊಂದನ್ನು ಶೇರ್ ಮಾಡಿದ್ದು, ಆ ಫೋಟೋದಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾದ ನಿರ್ದೇಶಕ ವಿಜಯ್ ಪ್ರಸಾದ್, ನಿರ್ಮಾಪಕರಲ್ಲಿ ಒಬ್ಬರಾದ ಸುಧೀರ್ ಇದ್ದಾರೆ. ಹೀಗಾಗಿ ಬಹುಶಃ ಸಿನಿಮಾ ಡೇಟ್ ಬಹಿರಂಗ ಪಡಿಸಬಹುದು ಎನ್ನಲಾಗುತ್ತಿದೆ. ಈಗಾಗಲೇ ಟೀಸರ್ ನಿಂದಾಗಿ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು, ಇದೇ ಮೊದಲ ಬಾರಿಗೆ ವಿಜಯ್ ಪ್ರಸಾದ್ ಮತ್ತು ಸತೀಶ್ ಅವರ ಕಾಂಬಿನೇಷನ್ ಈ ಚಿತ್ರದಲ್ಲಿ ಇರುವುದರಿಂದ ಮನರಂಜನೆ ಪಕ್ಕಾ ಸಿಗಲಿದೆ. ಇದನ್ನೂ ಓದಿ: ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ

ಈ ಸಿನಿಮಾಗಳ ಜೊತೆಗೆ ಸತೀಶ್ ಅಶೋಕ ಬ್ಲೇಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ನಡೆದಿದೆ. ದಸರಾ ಕೂಡ ಬಹುತೇಕ ಚಿತ್ರೀಕರಣ ಮುಗಿಸಿದೆ. ಮ್ಯಾಟ್ನಿ ಕೂಡ ಚಿತ್ರೀಕರಣ ಆಗಬೇಕಿದೆ. ಹೀಗಾಗಿ ಈ ಸಿನಿಮಾಗಳ ಫಸ್ಟ್ ಲುಕ್, ಪೋಸ್ಟರ್ ಅಥವಾ ಟ್ರೈಲರ್ ಹುಟ್ಟು ಹಬ್ಬದಂದು ರಿಲೀಸ್ ಆಗಲಿವೆ ಎನ್ನಲಾಗುತ್ತಿದೆ.

ಸಾಲು ಸಾಲು ಚಿತ್ರಗಳ ಜೊತೆಗೆ ಇನ್ನೂ ಹಲವಾರು ನಿರ್ದೇಶಕರು ಸತೀಶ್ ಅವರು ಕತೆ ಹೇಳಿದ್ದಾರೆ. ಕೆಲ ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಒಟ್ಟಿನಲ್ಲಿ ಸಖತ್ ಬ್ಯುಸಿಯಾಗಿರುವ ಸತೀಶ್ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಏನೆಲ್ಲ ಸರ್ ಪ್ರೈಸ್ ಇರಲಿವೆ ಎನ್ನುವುದನ್ನು ಕಾದು ನೋಡಬೇಕು.

Live Tv

Share This Article
Leave a Comment

Leave a Reply

Your email address will not be published. Required fields are marked *