ಕೊಡಗಿಗೆ ಈಗ ಈ ವಸ್ತುಗಳ ಅಗತ್ಯವಿದೆ: ಜಿಲ್ಲಾಡಳಿತದಿಂದ ಮನವಿ

Public TV
1 Min Read

ಕೊಡಗು: ಪ್ರವಾಹದಿಂದ ಸಂಪೂರ್ಣವಾಗಿ ನಾಶವಾಗಿಹೋಗಿರುವ ಜಿಲ್ಲೆಯ ಸಾವಿರಾರು ನಿರಾಶ್ರಿತರಿಗೆ ಪೂರೈಸಲು ಅಗತ್ಯ ವಸ್ತುಗಳನ್ನು ನೀಡುವಂತೆ ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಬಟ್ಟೆ ಹಾಗೂ ಇತರೆ ಸಾಮಗ್ರಿಗಳು:
* ಬೆಚ್ಚನೆಯ ಉಡುಪುಗಳು ಹಾಗೂ ದೈನಂದಿನ ಬಳಕೆಗೆ ಬಳಸುವ ಉಡುಪುಗಳು, ರೈನ್ ಕೋಟುಗಳು, ಟವೆಲ್, ಬೆಡ್‍ಶೀಟ್, ತಲೆದಿಂಬುಗಳು, ಒಳಉಡುಪು, ಪಂಚೆ, ನೈಟ್ ಡ್ರೆಸ್‍ಗಳು, ನೈಟಿ, ಸೀರೆ ಹಾಗೂ ಮಕ್ಕಳ ಬಟ್ಟೆಗಳು.

ದಿನನಿತ್ಯ ಬಳಸುವ ಸಾಮಗ್ರಿಗಳು:
* ಚಪ್ಪಲಿ, ಬೂಟು, ಹ್ಯಾಂಡ್ ಗ್ಲೌಸ್, ಮಾಸ್ಕ್, ಸೋಪು, ಶ್ಯಾಂಪು, ಟೂತ್ ಬ್ರಷ್, ಟೂತ್ ಪೇಸ್ಟ್, ಪ್ಲಾಸ್ಟಿಕ್ ಮ್ಯಾಟ್‍, ಛತ್ರಿ, ಟಾರ್ಚ್ ಲೈಟ್, ಡೆಟಾಲ್, ಪಿನಾಯಿಲ್, ಇತರೆ ಸ್ವಚ್ಛತಾ ಸಾಮಗ್ರಿ, ಮೇಣದ ಬತ್ತಿ, ಕಡ್ಡಿಪೊಟ್ಟಣ, ಸೊಳ್ಳೆಬತ್ತಿ, ಚಾಪೆ ಹಾಗೂ ಲಗೇಜ್ ಬ್ಯಾಗ್‍ಗಳು.

ಇತರೆ ವಸ್ತುಗಳು:
* ಸ್ಯಾನಿಟರ್ ಪ್ಯಾಡ್, ಡೈಪರ್ ಗಳು, ಆ್ಯಂಟಿಸೆಪ್ಟಿಕ್ ಲೋಷನ್, ಆ್ಯಂಟಿ ಫಂಗಲ್ ಪೌಡರ್, ಇತರೆ ಲೋಷನ್‍ಗಳು.

ಅಡುಗೆ ಉಪಕರಣ:
* ಅಡುಗೆ ಎಣ್ಣೆ, ಸಣ್ಣಪುಟ್ಟ ಸಾಮಗ್ರಿಗಳು ಹಾಗೂ ದವಸ-ಧಾನ್ಯಗಳು.

ಅಗತ್ಯ ವಸ್ತುಗಳನ್ನು ನೇರವಾಗಿ ಕೊಡಗು ಜಿಲ್ಲಾಡಳಿತ ಕಚೇರಿಗೆ ತಲುಪಿಸುವಂತೆ ಕೋರಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *