NDRF ಟ್ವಿಟ್ಟರ್ ಖಾತೆ ಹ್ಯಾಕ್

Public TV
2 Min Read

ನವದೆಹಲಿ:  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ(ಎನ್‍ಡಿಆರ್‌ಎಫ್) ಟ್ವಿಟರ್ ಖಾತೆ ಕೆಲವು ಸಮಯದವರೆಗೆ ಹ್ಯಾಕ್ ಆಗಿತ್ತು. ಹ್ಯಾಕ್ ಆದ ಅಕೌಂಟ್‍ನ್ನು ಕೆಲವೇ ಹೊತ್ತಲ್ಲಿ ಟೆಕ್ನಿಕಲ್ ತಜ್ಞರು ಸರಿಪಡಿಸಿದ್ದಾರೆ.  ಎನ್‍ಡಿಆರ್‌ಎಫ್ ಟ್ವಿಟ್ಟರ್ ಖಾತೆ  ಸುರಕ್ಷಿತವಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ ಎಂದು  ವರದಿಯಾಗಿದೆ.

ಎನ್‍ಡಿಆರ್‌ಎಫ್ಎಂದರೆ ದೇಶದ ಯಾವುದೇ ಪ್ರದೇಶದಲ್ಲಿಯೂ ಪ್ರಾಕೃತಿಕ ವಿಪತ್ತು, ಮತ್ತಿತರ ಅವಘಡಗಳಾದಾಗ ರಕ್ಷಣೆಗೆ ಧಾವಿಸುವ ರಕ್ಷಣಾ ಪಡೆಯಾಗಿದೆ. ಸದ್ಯ ಅದರ ಟ್ವಿಟ್ಟರ್ ಖಾತೆ ಸುರಕ್ಷಿತಗೊಂಡಿದೆ. ಆದರೆ ಹ್ಯಾಕ್ ಮಾಡಿದವರು ಯಾರಿರಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

ಟ್ವಿಟ್ಟರ್ ಅಕೌಂಟ್ ಹ್ಯಾಕ್ ಮಾಡಿದ್ದ ಹ್ಯಾಕರ್‌ಗಳು, ಖಾತೆಯ ಹೆಸರನ್ನು ಎಲೋನ್ ಮಸ್ಕ್ ಎಂದು ಬದಲಿಸಿದ್ದರು. ಹಾಗೇ, ಗ್ರೇಟ್ ಜಾಬ್ (ಅದ್ಭುತ ಕೆಲಸ) ಎಂದೂ ಟ್ವೀಟ್ ಮಾಡಿದ್ದರು. ಇನ್ನು ಒಂದಿಷ್ಟು ಲಿಂಕ್‍ಗಳನ್ನೆಲ್ಲ ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ  ತಾಂತ್ರೀಕ ಪರಿಣೀತರು ಟ್ವಿಟ್ಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿತ್ತು. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ

ಎನ್‍ಡಿಆರ್‌ಎಫ್ ಟ್ವಿಟ್ಟರ್ ಖಾತೆಯನ್ನು ಶನಿವಾರ ತಡರಾತ್ರಿ  ಹ್ಯಾಕ್ ಮಾಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‍ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್, ಶನಿವಾರ ರಾತ್ರಿ  NDRF ಖಾತೆ ಹ್ಯಾಕ್ ಆಗಿದೆ. ಟ್ವಿಟ್ಟರ್ ಖಾತೆಯಲ್ಲಿ ಈಗಾಗಲೇ ಪ್ರಕಟಿಸಿದ ಕೆಲವು ಸಂದೇಶಗಳು ಕಾಣಿಸುತ್ತಿಲ್ಲ. ತಾಂತ್ರಿಕ  ಪರಿಣೀತರು ಈ ಕುರಿತು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

2006 ರಲ್ಲಿ ಸ್ಥಾಪನೆಯಾದ ಎನ್‍ಡಿಆರ್‌ಎಫ್, ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪಡೆ, ಅತ್ಯಂತ ಕಡಿಮೆ ಅವಧಿಯಲ್ಲಿ 1.44 ಲಕ್ಷಕ್ಕೂ ಹೆಚ್ಚು ಅಮೂಲ್ಯ ಮಾನವ ಜೀವಗಳನ್ನು ರಕ್ಷಿಸಿದೆ.  ದೇಶ ಮತ್ತು ವಿದೇಶಗಳಲ್ಲಿನ ವಿಪತ್ತು ಸನ್ನಿವೇಶಗಳಿಂದ ಏಳು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ ಹೆಮ್ಮೆಗೆ ಎನ್‍ಡಿಆರ್‌ಎಫ್ ಪಾತ್ರವಾಗಿದೆ. ಜಪಾನ್‍ನಲ್ಲಿ ಸಂಭವಿಸಿದ ಟ್ರಿಪಲ್ ಡಿಸಾಸ್ಟರ್-2011 ಮತ್ತು ನೇಪಾಳ ಭೂಕಂಪ 2015ರ ಸಮಯದಲ್ಲಿ ತ್ವರಿತ ಮತ್ತು ಪರಿಣಾಮಕಾರಿ  ಕಾರ್ಯಾಚರಣೆ ನಡೆಸಿ  ಪ್ರಶಂಸೆಗೆ ಒಳಪಟ್ಟಿತ್ತು.

Share This Article
Leave a Comment

Leave a Reply

Your email address will not be published. Required fields are marked *