ಭಾರತ ಮೂಲದ ವ್ಯಕ್ತಿಗೆ ಗುಂಡಿಕ್ಕಿ ಕೊಂದ ಅಮೆರಿಕ ಪೊಲೀಸರು

By
1 Min Read

ವಾಷಿಂಗ್ಟನ್‌: 42 ವಯಸ್ಸಿನ ಭಾರತೀಯ ಮೂಲದ (Indian Origin) ವ್ಯಕ್ತಿಯನ್ನು ಸ್ಯಾನ್ ಆಂಟೋನಿಯೊದಲ್ಲಿ ಪೊಲೀಸರು (US Police) ಗುಂಡಿಕ್ಕಿ ಕೊಂದಿದ್ದಾರೆ.

ಏಪ್ರಿಲ್ 21 ರಂದು ಪೊಲೀಸ್ ಅಧಿಕಾರಿ ಟೈಲರ್ ಟರ್ನರ್ ಹಾರಿಸಿದ ಗುಂಡು ತಗುಲಿ ಸಚಿನ್ ಸಾಹೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಾಹೂ ಮೂಲತಃ ಉತ್ತರ ಪ್ರದೇಶದವರು. ಇದನ್ನೂ ಓದಿ: ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ – 155 ಮಂದಿ ಸಾವು

ಮಹಿಳೆಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಸಾಹೂನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಈ ವೇಳೆ ತನ್ನ ವಾಹನದಿಂದ ಪೊಲೀಸರಿಗೆ ಡಿಕ್ಕಿ ಹೊಡೆಸಿದ್ದ ಎನ್ನಲಾಗಿದೆ.

51 ವಯಸ್ಸಿನ ಮಹಿಳೆ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆ ನಡೆಸಿದ್ದ ಸಾಹೂ ಸ್ಥಳದಿಂದ ಪರಾರಿಯಾಗಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಯಾನ್‌ ಆಂಟೋನಿಯೊ ಪೊಲೀಸರು ಸಾಹೂ ವಿರುದ್ಧ ಅರೆಸ್ಟ್‌ ವಾರೆಂಟ್‌ ಹೊರಡಿಸಿದರು. ಇದನ್ನೂ ಓದಿ: ಇಸ್ರೇಲ್‌ ವಿರುದ್ಧ ಪ್ರತಿಭಟನೆ – ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿನಿ ಬಂಧನ

ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ, ಸಾಹೂ ತನ್ನ ಮೂಲ ಸ್ಥಾನಕ್ಕೆ ಮರಳಿದ್ದಾರೆ ಎಂದು ತಿಳಿಸಿದರು. ಆರೋಪಿ ಬಂಧನಕ್ಕೆ ಮುಂದಾದ ಪೊಲೀಸರಿಗೂ ವಾಹನದಿಂದ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಪೊಲೀಸ್‌ ಒಬ್ಬರು ಸಾಹೂ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡೇಟಿಗೆ ವ್ಯಕ್ತಿ ಬಲಿಯಾಗಿದ್ದಾನೆ.

Share This Article