ಟೈಮ್ಸ್‌ ನೌ ಸಮೀಕ್ಷೆ – NDA 366, INDIA 104 ಸೀಟ್‌: ಕರ್ನಾಟಕದಲ್ಲಿ ಬಿಜೆಪಿ ದಳ ಮೈತ್ರಿಗೆ 23 ಸ್ಥಾನ

Public TV
1 Min Read

ನವದೆಹಲಿ: ಈಗ ಲೋಕಸಭಾ ಚುನಾವಣೆ (Lok Sabha Election) ನಡೆದರೆ ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) 366 ಸ್ಥಾನ ಗಳಿಸಿದರೆ ಕರ್ನಾಟಕದಲ್ಲಿ (Karnataka) ಬಿಜೆಪಿ-ಜೆಡಿಎಸ್‌ (BJP-JDS) ಮೈತ್ರಿಕೂಟ 23 ಸ್ಥಾನ ಗೆಲ್ಲಲಿದೆ ಎಂದು ಟೈಮ್ಸ್‌ ನೌ ಸಮೀಕ್ಷೆ ತಿಳಿಸಿದೆ.

ಸಮೀಕ್ಷೆ ಏನು ಹೇಳಿದೆ?
ಗುಜರಾತ್‌, ಛತ್ತೀಸ್‌ಗಢ, ದೆಹಲಿಯ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು ಒಟ್ಟು 366 ಸ್ಥಾನಗಳನ್ನು ಎನ್‌ಡಿಎ ಒಕ್ಕೂಟ ಗಳಿಸಲಿದೆ. INDIA ಒಕ್ಕೂಟ 104, ಇತರರು 73 ಸ್ಥಾನ ಗಳಿಸಲಿದೆ.  ಇದನ್ನೂ ಓದಿ: ಉದ್ಘಾಟನೆ ದಿನವೇ ಬಾಗಿಲು ಮುಚ್ಚಿದ ತುಮಕೂರು KSRTC ಹೈಟೆಕ್‌ ಬಸ್ ನಿಲ್ದಾಣ!

ಶೇಕಡಾವಾರುಮತ ಪ್ರಮಾಣದಲ್ಲಿ ಎನ್‌ಡಿಎ 41.8% ಮತ ಪಡೆದರೆ INDIA ಒಕ್ಕೂಟ 28.6% ಮತ ಪಡೆಯಲಿದ್ದಾರೆ. ಇತರರು 29.6% ಮತ ಗಳಿಸಲಿದ್ದಾರೆ ಎಂದು ಹೇಳಿದೆ. ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಬಿಜೆಪಿ 77 ಸ್ಥಾನಗಳನ್ನು ಗೆಲ್ಲಲಿದೆ. ನಿತೀಶ್‌ಕುಮಾರ್‌ ಸೇರ್ಪಡೆಯಿಂದ ಬಿಹಾರದಲ್ಲಿ ಎನ್‌ಡಿಎ 35 ಸೀಟುಗಳನ್ನು ಗೆಲ್ಲಲಿದ್ದು, ಇತರ ಪಕ್ಷಗಳು 5 ಸ್ಥಾನಗಳಿಗೆ ತೃಪ್ತಿಪಡಬೇಕಾಗುತ್ತದೆ.

ಪಶ್ಚಿಮ ಬಂಗಾಳದ ಒಟ್ಟು 42 ಸ್ಥಾನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ (TMC) 26 ಕ್ಷೇತ್ರಗಳನ್ನು ಗೆಲ್ಲಲಿದೆ. ತಮಿಳುನಾಡಿನಲ್ಲಿ ಎನ್‌ಡಿಎ ಒಂದು ಹಾಗೂ ಇಂಡಿಯಾ ಮೈತ್ರಿಕೂಟ 36 ಸ್ಥಾನವನ್ನು ಪಡೆಯಲಿದೆ. ಇದನ್ನೂ ಓದಿ: ಶ್ರೀಕೃಷ್ಣ ಪಾಂಡವರಿಗಾಗಿ 5 ಗ್ರಾಮಗಳನ್ನ ಕೇಳಿದ, ನಾವು 3 ಸ್ಥಳ ಕೇಳುತ್ತಿದ್ದೇವೆ – ʻಮಹಾಭಾರತʼದ ಪಾಠ ಹೇಳಿದ ಯೋಗಿ

ಕರ್ನಾಟಕದಲ್ಲಿ ಎಷ್ಟು?
ರಾಜ್ಯದಲ್ಲಿ ಬಿಜೆಪಿ 21, ದಳ 2 ಸ್ಥಾನ ಗೆದ್ದುಕೊಂಡರೆ ಕಾಂಗ್ರೆಸ್‌ 5 ಸ್ಥಾನಗಳನ್ನು ಗಳಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ. ಮತಗಳ ಶೇಕಡಾವಾರು ಪ್ರಮಾಣದಲ್ಲಿ ಬಿಜೆಪಿ 46.2% ಕಾಂಗ್ರೆಸ್‌ 42.3% ಜೆಡಿಎಸ್‌ 8.4% ಹಾಗೂ ಇತರ ಪಕ್ಷಗಳು 3.1%ರಷ್ಟು ಮತ ಗಳಿಸಿಕೊಳ್ಳಲಿವೆ.

ಸಿದ್ದರಾಮಯ್ಯ ಸಾಧನೆ ಕುರಿತು 18% ರಷ್ಟು ತೃಪ್ತಿ ವ್ಯಕ್ತಪಡಿಸಿದ್ದು, 27%ರಷ್ಟು ಮಂದಿ ಪರವಾಗಿಲ್ಲ ಎಂದಿದ್ದಾರೆ. 34%ರಷ್ಟು ಮಂದಿ ಅತೃಪ್ತಿ ವ್ಯಕ್ತಪಡಿಸಿದ್ದು, 21%ರಷ್ಟು ಮಂದಿ ಪ್ರತಿಕ್ರಿಯಿಸಿಲ್ಲ.

 

Share This Article