– ಮೈತ್ರಿಕೂಟಕ್ಕೆ ಆಘಾತ; 234 ರಿಂದ 208ಕ್ಕೆ ಇಳಿಯುವ ನಿರೀಕ್ಷೆ
ನವದೆಹಲಿ: ಮೂರು ಪ್ರಮುಖ ವಿಧಾನಸಭಾ ಚುನಾವಣೆಗಳಲ್ಲಿ ಸತತ ಜಯಗಳಿಸಿದ ನಂತರ ಬಿಜೆಪಿ ಚೇತರಿಸಿಕೊಂಡಿದೆ. ಇಂದು ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ (NDA) ಪ್ರಬಲ ಪ್ರದರ್ಶನ ನೀಡುವ ಮೂಲಕ 324 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್, ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ.
ಮತ್ತೊಂದೆಡೆ 2024 ರಲ್ಲಿ 234 ಸ್ಥಾನಗಳನ್ನು ಗೆದ್ದು ಎನ್‌ಡಿಎಗೆ ಆಘಾತ ನೀಡಿದ್ದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ಇಂದು ಚುನಾವಣೆ ನಡೆದರೆ 208 ಸ್ಥಾನಗಳಿಗೆ ಇಳಿಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ. ಇದನ್ನೂ ಓದಿ: ಬಿಜೆಪಿ-ಆರ್‌ಎಸ್‌ಎಸ್ ನಡ್ವೆ ಕೆಲ ಭಿನ್ನಾಭಿಪ್ರಾಯ ಇರಬಹುದು, ಎಲ್ಲಿಯೂ ಸಂಘರ್ಷವಿಲ್ಲ: ಮೋಹನ್ ಭಾಗವತ್
ಈ ಸಮೀಕ್ಷೆಯನ್ನು 2025 ರ ಜುಲೈ 1 ರಿಂದ ಆಗಸ್ಟ್ 14ರ ನಡುವೆ ನಡೆಸಲಾಯಿತು. ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ 54,788 ವ್ಯಕ್ತಿಗಳನ್ನು ಸಮೀಕ್ಷೆ ಮಾಡಲಾಯಿತು. ಸಿ-ವೋಟರ್‌ನ ನಿಯಮಿತ ಟ್ರ್ಯಾಕರ್ ಡೇಟಾದಿಂದ ಹೆಚ್ಚುವರಿಯಾಗಿ 1,52,038 ಜನರ ಅಭಿಪ್ರಾಯಗಳನ್ನು ಸಹ ವಿಶ್ಲೇಷಿಸಲಾಗಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ 543 ಸ್ಥಾನಗಳಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ಸ್ವಂತವಾಗಿ ಸರ್ಕಾರ ರಚಿಸಲು ಸರಳ ಬಹುಮತಕ್ಕೆ ಅಗತ್ಯವಿರುವ 272 ಸ್ಥಾನಗಳಿಗೆ 32 ಸ್ಥಾನಗಳ ಕೊರತೆಯಾಗಿತ್ತು. ಎನ್‌ಡಿಎ ಪಾಲುದಾರರೊಂದಿಗೆ, ಒಟ್ಟಾರೆ 293 ಸ್ಥಾನಗಳೊಂದಿಗೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸರ್ಕಾರ ರಚಿಸಿದರು. ಇದನ್ನೂ ಓದಿ: ಸರ್ಕಾರಿ ಸೌಲಭ್ಯಗಳ ದುರ್ಬಳಕೆ ಆರೋಪ – ಕರ್ನಾಟಕ ಭವನದ ಹೆಚ್ಚುವರಿ ಆಯುಕ್ತೆ ವಿರುದ್ಧ ಸಿಎಸ್‌ಗೆ ದೂರು