ನವರಾತ್ರಿ ವಿಶೇಷ – 3 | ಕುಮಾರಿ ಪೂಜಾ, ಭವ್ಯಸುಂದರ ದೀಪಾಲಂಕಾರ – ಕಾಲೇಜು ಚೌಕ್‌ ದುರ್ಗಾ ಪೆಂಡಾಲ್‌

Public TV
1 Min Read

ಕೊಲ್ಕೋತ್ತಾದ ಕಾಲೇಜು ಚೌಕದ (College Chowk Durga Pandal) ದುರ್ಗಾಪೂಜೆ ನವರಾತ್ರಿ ಪ್ರಸಿದ್ಧ ಪೆಂಡಾಲ್ ಗಳಲ್ಲಿ ಒಂದು. ಈ ದುರ್ಗಾಪೂಜೆ 1948ರಲ್ಲಿ ಸ್ವಾತಂತ್ರ್ಯದ ಮರುವರ್ಷ ಆರಂಭವಾಗಿತ್ತು.

ಒಂದು ಸುಂದರ ಕೆರೆಯ ತಡಿಯಲ್ಲಿರುವ ಕಾಲೇಜ್ ಚೌಕ್ ಪೆಂಡಾಲ್ ಪ್ರಸಿದ್ಧವಾಗಿರುವುದು ಇಲ್ಲಿನ ಭವ್ಯಸುಂದರ ದೀಪಾಲಂಕಾರಕ್ಕಾಗಿ. ಪ್ರತಿವರ್ಷ ಇಲ್ಲಿನ ದೀಪಾಲಂಕಾರದ ವಿನ್ಯಾಸ ಬದಲಾಗುತ್ತದೆ. ಈ ದೀಪಗಳ ವೈಭವ ಕೆರೆಯ ನೀರಿನಲ್ಲಿ ಪ್ರತಿಫಲಿಸುವ ದೃಶ್ಯ ಹೃದಯಂಗಮವಾಗಿರುತ್ತದೆ. ಇಲ್ಲಿ ಪ್ರತಿವರ್ಷ ಬಾಲಕಿಯರನ್ನು ದೇವಿಯ ರೂಪದಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ. ಇದಕ್ಕೆ ʻಕುಮಾರಿ ಪೂಜಾ’ ಎಂದು ಕರೆಯಲಾಗುತ್ತದೆ.

ಕಾಲೇಜ್ ಚೌಕ್ ಪೆಂಡಾಲ್ ಇರುವುದು ಮಧ್ಯ ಕೋಲ್ಕತ್ತಾದ ಕಾಲೇಜ್ ರಸ್ತೆಯಲ್ಲಿ, ಇದು ಕೋಲ್ಕತ್ತಾದ ವಿಶ್ವವಿದ್ಯಾಲಯಕ್ಕೆ ಸಮೀಪದಲ್ಲಿದೆ. ಸೆಂಟ್ರಲ್ ಮೆಟ್ರೋ ಮತ್ತು ಮಹಾತ್ಮಾಗಾಂಧಿ ರಸ್ತೆ ಇಲ್ಲಿಗೆ ಸಮೀಪದಲ್ಲಿದೆ.

Share This Article