ಫ್ಯಾಶನ್ ಲೋಕದಲ್ಲಿ ಹೊಸ ಅಲೆ- ಅಂತರಾಷ್ಟ್ರೀಯ ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ನವೀನ್ ಕುಮಾರ್‌ಗೆ ಬಹುಬೇಡಿಕೆ

Public TV
3 Min Read

ಬೆಂಗಳೂರು: 21ನೇ ಶತಮಾನದಲ್ಲಿ ಫ್ಯಾಶನ್ ಯುಗ ಬಹುದೊಡ್ಡ ಮಟ್ಟದಲ್ಲಿ ತನ್ನ ಮಜಲುಗಳನ್ನು ತೆರೆದುಕೊಂಡಿದೆ. ಪ್ರತಿನಿತ್ಯ ಹೊಸ ಹೊಸ ಕಾಸ್ಟೂಮ್ ಡಿಸೈನ್‍ಗಳು ಮಾರುಕಟ್ಟೆ ಪ್ರವೇಶಿಸುತ್ತಿರುತ್ತವೆ. ಅಂತರಾಷ್ಟ್ರೀಯ ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ನವೀನ್ ಕುಮಾರ್‌ಗೆ ಬಹುಬೇಡಿಕೆ.

ಬಗೆ ಬಗೆಯ ಡಿಸೈನ್‍ಗಳು ಕಣ್ಮನ ಕೋರೈಸೊ ಬಟ್ಟೆಗಳು ಆಕರ್ಷಿಸುತ್ತಿರುತ್ತವೆ. ಅದರಲ್ಲೂ ನಟ-ನಟಿಯರು ಧರಿಸುವ ಬಟ್ಟೆಗಳನ್ನು ನೋಡೋದೇ ಕಣ್ಣಿಗೆ ಒಂದು ಹಬ್ಬ. ಇದ್ರಿಂದ ಈ ನಡುವೆ ಫ್ಯಾಶನ್ ಡಿಸೈನರ್‍ಗಳಿಗೂ ಎಲ್ಲಿಲ್ಲದ ಬೇಡಿಕೆ. ಸಾಕಷ್ಟು ಫ್ಯಾಶನ್ ಡಿಸೈನರ್‍ಗಳು ಮಾರುಕಟ್ಟೆಯಲ್ಲಿ ತಮ್ಮ ಯೂನೀಕ್ ಕಾಸ್ಟ್ಯೂಮ್ ಡಿಸೈನ್ ನಿಂದ ನೇಮ್ ಫೇಮ್ ಗಳಿಸಿಕೊಂಡಿದ್ದಾರೆ.

ಫ್ಯಾಶನ್ ಡಿಸೈನರ್‍ಗಳು ಎಲ್ಲರೂ ಇಲ್ಲಿ ಕ್ಲಿಕ್ ಆಗುತ್ತಾರೆ ಎಂದು ಹೇಳೋಕೆ ಆಗೊಲ್ಲ. ಇದಕ್ಕೆ ಅಭಿರುಚಿ ಬಹಳನೇ ಮುಖ್ಯ. ಈ ರೀತಿಯ ಅಭಿರುಚಿಯುಳ್ಳ ಕನ್ನಡದ ಪ್ರತಿಭಾವಂತರೊಬ್ಬರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅವರೇ ಫಾರೆವರ್ ನವೀನ್ ಕುಮಾರ್ ಡಿಸೈನ್ ಖ್ಯಾತಿಯ ನವೀನ್ ಕುಮಾರ್. ಇದನ್ನೂ ಓದಿ: ದೇಶದಲ್ಲೇ ಮೊದಲ ಪ್ರಯತ್ನ- ಸಮುದ್ರದ ಉಪ್ಪು ನೀರಿನಿಂದ ಸಿಗಲಿದೆ ಶುದ್ಧವಾದ ಸಿಹಿ ನೀರು

 

ಕಳೆದ ನಾಲ್ಕೈದು ವರ್ಷಗಳಿಂದ ತಮ್ಮ ವಿಶಿಷ್ಟ ಫ್ಯಾಶನ್ ಡಿಸೈನ್ ನಿಂದ ಫ್ಯಾಶನ್ ಲೋಕದಲ್ಲಿ ಫಾರೆವರ್ ನವೀನ್ ಕುಮಾರ್ ಬೈ ಡಿಸೈನರ್ ನವೀನ್ ಕುಮಾರ್ ಹೊಸ ಅಲೆ ಸೃಷ್ಟಿಸಿದ್ದಾರೆ. ದೇಶ, ವಿದೇಶಗಳಲ್ಲೂ ಖ್ಯಾತಿ ಗಳಿಸಿದ್ದಾರೆ. ಎಂಬಿಎ ಹಾಗೂ ಜಿಇಎಂಎಂ ಕೋರ್ಸ್ ಮಾಡಿಕೊಂಡಿರುವ ಇವರು 2016ರಿಂದ ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಬಹು ಬೇಡಿಕೆಯ ಫ್ಯಾಶನ್ ಡಿಸೈನರ್ ಆಗಿರುವ ಇವರು ಬೆಂಗಳೂರಿನವರೇ ಎನ್ನುವುದು ಹೆಮ್ಮೆಯ ವಿಚಾರವಾಗಿದೆ.

ದೇಶಾದ್ಯಂತ14 ರಾಜ್ಯ ಸೇರಿದಂತೆ ಅಂತರಾಷ್ಟ್ರೀಯ ಫ್ಯಾಶನ್ ಶೋ ವೇದಿಕೆಯಲ್ಲೂ ಇವರ ಕಾಸ್ಸ್ಯೂಮ್ ಡಿಸೈನ್ ಪ್ರದರ್ಶನ ಕಂಡಿವೆ. ಅತಿ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಇವರು ಸುಮಾರು 83 ಫ್ಯಾಶನ್ ಶೋಗಳಲ್ಲಿ 1600ಕ್ಕೂ ಹೆಚ್ಚು ಭಿನ್ನ, ವಿಭಿನ್ನ ಕಾಸ್ಟ್ಯೂಮ್‍ಗಳನ್ನು ಶೋಕೇಸ್ ಮಾಡಿದ್ದಾರೆ.

 

ಶ್ರೀಯಾ ಶರಣ್, ಏಮಿ ಜಾಕ್ಸನ್, ಅಜಿತ್ ಸೇರಿದಂತೆ ಸೌತ್ ಸಿನಿದುನಿಯಾದ ಹಲವು ಸ್ಟಾರ್ ನಟ- ನಟಿಯರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. 2019ರಲ್ಲಿ ಮಲೇಷಿಯಾದಲ್ಲಿ ನಡೆದ ಸನ್ ಟಿವಿ ಕಾರ್ಯಕ್ರಮವೊಂದಕ್ಕೆ ಬರೋಬ್ಬರಿ 87 ಸೆಲೆಬ್ರಿಟಿಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಸೈಮಾ, ಐಫಾ ಅವಾರ್ಡ್ ಫಂಕ್ಷನ್ ಒಳಗೊಂಡಂತೆ ಕಿರುತೆರೆ ಕಾರ್ಯಕ್ರಮಗಳಿಗೂ ಸೆಲೆಬ್ರಿಟಿ ಕಾಸ್ಟ್ಯೂಮ್ ಡಿಸೈನರ್ ಆಗಿ ಛಾಪು ಮೂಡಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಹಾಗೂ ನಟಿ ಸಂಹಿತ ವಿನ್ಯಾ ಪರ್ಸನಲ್ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಗುರುತಿಸಿಕೊಂಡಿದ್ದಾರೆ.

ಕಾಲಕ್ಕೆ ತಕ್ಕಂತೆ, ಟ್ರೆಂಡ್‍ಗೆ ಅನುಗುಣವಾಗಿ ಹೊಸ ಪ್ರಯೋಗ ಮಾಡುವ ಇವರು ತಮ್ಮದೇ ಆದ ಯೂನೀಕ್ ಸ್ಟೈಲ್ ನಿಂದ ಎಲ್ಲರಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತಾರೆ. ಫಾರೆವರ್ ನವೀನ್ ಕುಮಾರ್ ಇವರ ಫ್ಯಾಶನ್ ಡಿಸೈನ್ ಬ್ರ್ಯಾಂಡ್ ಹೆಸರು. ಇದ್ರಿಂದಾಗಿ ಫಾರೆವರ್ ನವೀನ್ ಕುಮಾರ್ ಬೈ ಡಿಸೈನರ್ ನವೀನ್ ಕುಮಾರ್ ಎಂದೇ ಎಲ್ಲೆಡೆ ಗುರುತಿಸಿಕೊಂಡಿದ್ದಾರೆ. ಫೇದರ್ ವಿಂಗ್ಸ್ ಮತ್ತು ಹ್ಯಾಂಡ್ ವರ್ಕ್ ಸೀಕ್ವೆನ್ಸ್ ಕಾಸ್ಟೂಮ್ ಡಿಸೈನ್‍ನಲ್ಲಿ ಇವರು ವೈಶಿಷ್ಟ್ಯತೆಯನ್ನು ಹೊಂದಿದ್ದು, ಈ ಫ್ಯಾಶನ್ ಡಿಸೈನ್‍ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಇದೆ.

ಜಾಹೀರಾತು, ಮಾಡೆಲ್ ಫೋಟೋ ಶೂಟ್, ಮಿಸ್ ಇಂಡಿಯಾ, ಮಿಸ್ ಕರ್ನಾಟಕ ಸೇರಿದಂತೆ ಹಲವು ಫ್ಯಾಶನ್ ಇವೆಂಟ್ ಗಳಿಗೂ ಫ್ಯಾಶನ್ ಡಿಸೈನರ್ ಆಗಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಪ್ರೀಮಿಯರ್ ಪದ್ಮಿನಿ, ವಿಷ್ಣು ಸರ್ಕಲ್, ತೆಲುಗಿನ ಯು ಆರ್ ಮೈ ಹೀರೋ ಸಿನಿಮಾಗಳಿಗೂ ಕಾಸ್ಟೂಮ್ ಡಿಸೈನರ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಇವರ ಪರಿಶ್ರಮ ಹಾಗೂ ಫ್ಯಾಶನ್ ಗೆ ಹಲವು ಪ್ರಶಸ್ತಿಗಳು ಇವರನ್ನರಸಿ ಬಂದಿವೆ.

ತಮ್ಮದೇ ಆದ ಯೂನೀಕ್ ಸ್ಟೈಲ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹು ಬೇಡಿಕೆಯ ಫ್ಯಾಶನ್ ಡಿಸೈನರ್ ಆಗಿ ಖ್ಯಾತಿ ಹೊಂದುತ್ತಿರುವ ಡಿಸೈನರ್ ನವೀನ್ ಕುಮಾರ್ ನಮ್ಮ ಕನ್ನಡದವರೇ ಎನ್ನುವುದು ಹೆಮ್ಮೆಯ ಸಂಗತಿ.

Share This Article
Leave a Comment

Leave a Reply

Your email address will not be published. Required fields are marked *