‘ರಾಮಾಯಣ’ ಸಿನಿಮಾ ಬಗ್ಗೆ ಯಶ್‌ ಹೇಳಿದ್ದೇನು?

Public TV
1 Min Read

ನ್ಯಾಷನಲ್ ಸ್ಟಾರ್ ಯಶ್ (Yash) ಇಂದು (ಏ.26) ಹೊಸಕೆರೆಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ. ದೇಶಕ್ಕಾಗಿ ಮತದಾನ ಮಾಡಬೇಕು ಎಂದು ಯಂಗ್‌ಸ್ಟರ್‌ಗೆ ಯಶ್ ಕಿವಿಹಿಂಡಿದ್ದಾರೆ. ಈ ವೇಳೆ, ಮಾಧ್ಯಮ ಎದುರು ಬಂದ ಯಶ್‌ಗೆ ‘ರಾಮಾಯಣ’ ಸಿನಿಮಾ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ರಾಮಾಯಣ’ (Ramayana) ಸಿನಿಮಾ ಬಗ್ಗೆ ಯಶ್ ಮಾತನಾಡಿ, ಈಗ ವೋಟಿಂಗ್ ನಡೆಯುತ್ತಿದೆ. ವಿಷಯವನ್ನು ಡೈವರ್ಟ್ ಮಾಡಬೇಡಿ. ಈ ವಿಚಾರದ ಬಗ್ಗೆ ಮುಂದೆ ಮಾತಾಡೋಣ. ನಾನು ಎಲ್ಲೂ ಹೋಗಲ್ಲ ಇಲ್ಲೇ ಇರುತ್ತೇನೆ ಮಾತಾಡೋಣ ಎಂದು ಯಶ್ ರಿಯಾಕ್ಟ್‌ ಮಾಡಿದ್ದರು. ಬಳಿಕ ‘ರಾಮಾಯಣ’ ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ನೀಡಲಿಲ್ಲ.‌ ಇದನ್ನೂ ಓದಿ:ನನ್ನ ಕೆಣಕಿದರೆ ನೆಟ್ಟಗೆ ಇರಲ್ಲ: ಸಚಿವನಿಗೆ ವಾರ್ನ್ ಮಾಡಿದ ನಟ ವಿಶಾಲ್

‘ರಾಮಾಯಣ’ ಸಿನಿಮಾ ಬಹುಕೋಟಿ ವೆಚ್ಚದಲ್ಲಿ ಮೂಡಿ ಬರುತ್ತಿದೆ. ನಿತೇಶ್ ತಿವಾರಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರಣ್‌ಬೀರ್ ಕಪೂರ್ ರಾಮನಾದ್ರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಯಶ್ ಕೂಡ ಸಹ ನಿರ್ಮಾಪಕರಾಗಿದ್ದಾರೆ.

ಕೆಜಿಎಫ್‌ 2 (KGF 2) ಸಕ್ಸಸ್‌ ನಂತರ ಯಶ್ ‘ಟಾಕ್ಸಿಕ್‌’ (Toxic Film) ಸಿನಿಮಾಗಾಗಿ ನಟನೆಯ ಜೊತೆ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ.

Share This Article