ಕಾರ್ ನಂ.1 ಸಿಎಂ ಸಿದ್ದರಾಮಯ್ಯ ಕಾರಿಗೇ ಎಂಟ್ರಿ ಕೊಡಲಿಲ್ಲ ಪೊಲೀಸ್!

Public TV
1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಗುಪ್ತಚರ ಇಲಾಖೆ ಡಿಜಿ ಎಂಎನ್ ರೆಡ್ಡಿಗೆ ಪೊಲೀಸರಿಂದಲೇ ಅಪಮಾನವಾಗಿದೆ.

ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಇಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ರೀಲಾಂಚ್ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಕಾರನ್ನು ಒಳಗೆ ಬಿಡದೇ ಸುಮಾರು 20 ನಿಮಿಷ ಸತಾಯಿಸಿದ ಪೊಲೀಸರ ಕ್ರಮದಿಂದ ಬೇಸತ್ತು, ಕೊನೆಗೆ ಸಿಎಂ ತಾವೇ ಇಳಿದು ನಡೆದು ಕೊಂಡು ಅಂಬೇಡ್ಕರ್ ಭವನದ ಒಳಗೆ ಹೋಗಿದ್ದಾರೆ.

ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಮಾಹಿತಿ ತಿಳಿಸಿದ ಬಳಿಕ ಸಿಎಂ ಕಾರಿಗೆ ಪೊಲೀಸರು ಅಂಬೇಡ್ಕರ್ ಭವನದ ಗೇಟ್ ತೆರೆದು ಕಾರು ಒಳಗೆ ಹೋಗಲು ಅನುಮತಿ ಕೊಟ್ಟಿದ್ದಾರೆ. ಇನ್ನೂ ವಿಶೇಷ ಎಂದರೆ ಸಿಎಂ ಬಂದ ಕಾರಿನಲ್ಲಿ ‘ಕಾರ್ ನಂಬರ್ 1 – ಗೌರವಾನ್ವಿತ ಮುಖ್ಯಮಂತ್ರಿ’ ಎಂದು ಬರೆಯಲಾಗಿತ್ತು. ಆದರೂ ಪೊಲೀಸರು ಇವರ ಕಾರಿಗೆ ಅನುಮತಿ ನಿರಾಕರಿಸಿದ್ದು ವಿಶೇಷ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ರಾಜ್ಯಪಾಲ ವಜುಭಾಯಿ ವಾಲಾ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಎಐಸಿಸಿ ಖಚಾಂಚಿ ಮೋತಿಲಾಲ್ ವೋರಾ ಸೇರಿದಂತೆ ಕಾಂಗ್ರೆಸ್ ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದರು

https://www.youtube.com/watch?v=u5vadvMnXpQ

Share This Article
Leave a Comment

Leave a Reply

Your email address will not be published. Required fields are marked *