ತುಟಿಗೆ ತುಟಿ ಬೆರೆಸಿ ಬೆರಗು ಮೂಡಿಸಿದ ನ್ಯಾಷನಲ್ ಕ್ರಶ್ ರಶ್ಮಿಕಾ

By
1 Min Read

ಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್ ನ ನಟನೆಯ ಅನಿಮಲ್ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ. ‘ಹುವಾ ಮೈನ್‍’ ಹೆಸರಿನ ಈ ಹಾಡಿನಲ್ಲಿ ರಶ್ಮಿಕಾ ಮತ್ತು ರಣಬೀರ್ ತುಟಿಗೆ ತುಟಿಗೆ ಬೆರೆಸಿದ್ದಾರೆ. ಈ ದೃಶ್ಯವನ್ನು ಕಂಡ ಫ್ಯಾಮಿಲಿ ಶಾಕ್ ಆಗಿದ್ದಾರೆ. ತನ್ನ ಗೆಳೆಯನನ್ನು ಕುಟುಂಬಕ್ಕೆ ಪರಿಚಯಿಸುವಂತಹ ಗೀತೆ ಇದಾಗಿದೆ. ಮನೆಯಲ್ಲಿ ಮತ್ತು ವಿಮಾನದಲ್ಲಿ ಎರಡರಲ್ಲೂ ಈ ಜೋಡಿ ಲಿಪ್ ಲಾಕ್ ಮಾಡಿಕೊಂಡಿದೆ.

ನಿನ್ನೆಯಷ್ಟೇ ರಶ್ಮಿಕಾ ಮಂದಣ್ಣ (Rashmika Mandanna) ಈಗ ಲಿಪ್ ಲಾಕ್ ವಿಚಾರವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಆಲಿಯಾ ಪತಿ, ರಣ್‌ಬೀರ್ ಕಪೂರ್ ಜೊತೆ ‘ಪುಷ್ಪ’ (Pushpa) ನಟಿ ಲಿಪ್ ಲಾಕ್ ಮಾಡಿದ್ದ ಫೋಟೋಗಳು ವೈರಲ್ ಆಗಿದ್ದವು. ಇಬ್ಬರ ರೊಮ್ಯಾಂಟಿಕ್ ಫೋಟೋ ಸಖತ್ ವೈರಲ್ ಆಗುತ್ತಿವೆ.

‘ಅನಿಮಲ್’ (Animal) ಸಿನಿಮಾದಲ್ಲಿ ರಣ್‌ಬೀರ್‌ಗೆ ರಶ್ಮಿಕಾ ಜೊತೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಟ್ರೈಲರ್ ಮೂಲಕ ‘ಅನಿಮಲ್’ ಚಿತ್ರದ ತುಣುಕು ಗಮನ ಸೆಳೆದಿತ್ತು. ಈಗ ಚಿತ್ರದ ಪೋಸ್ಟರ್‌ನಲ್ಲಿ ಹಸಿ ಬಿಸಿ ದೃಶ್ಯದ ಫೋಟೋ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ.

ರಶ್ಮಿಕಾಗೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸೋದು ಹೊಸದೇನಲ್ಲ. ಈ ಹಿಂದೆ ‘ಗೀತಾ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ (Vijay Devarakonda) ಜೊತೆ ನಟಿ ಬೋಲ್ಡ್ ಆಗಿಯೇ ಲಿಪ್ ಲಾಕ್ ಮಾಡಿದ್ದರು. ಈಗ ರಣ್‌ಬೀರ್ ಜೊತೆ ಚುಂಬನದ ದೃಶ್ಯದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

 

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ರಶ್ಮಿಕಾ ಅವರ ಬಾಲಿವುಡ್‌ನ(Bollywood) ಭವಿಷ್ಯ ತಿಳಿಯಲಿದೆ. ಈ ಹಿಂದೆ, ರಶ್ಮಿಕಾ ನಟಿಸಿದ ಗುಡ್ ಬೈ, ಮಿಷನ್ ಮಜ್ನು ಚಿತ್ರಗಳು ಮಕಾಡೆ ಮಲಗಿವೆ. ರಣ್‌ಬೀರ್ (Ranbir Kapoor) ಜೊತೆ ‘ಕಿರಿಕ್ ಪಾರ್ಟಿ’ (Kirik Paty) ನಟಿ ಗೆದ್ದು ಬೀಗುತ್ತಾರಾ ಕಾಯಬೇಕಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್