ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಉತ್ತರಾ ಬಾಕರ್ ವಿಧಿವಶ

Public TV
1 Min Read

ಹಿಂದಿ (Bollywood) ಮತ್ತು ಮರಾಠಿ ಭಾಷೆಯ ಹಿರಿಯ ನಟಿ (Actress)  ಮತ್ತು ರಂಗಭೂಮಿ ಕಲಾವಿದೆ ಉತ್ತರಾ ಬಾಕರ್ (79) ಅವರು ಮಂಗಳವಾರ ನಿಧನರಾಗಿದ್ದಾರೆ. ಸಾಕಷ್ಟು ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪುಣೆ ಆಸ್ಪತ್ರೆಯಲ್ಲಿ ನಟಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಚಿಕಿತ್ಸೆ ಫಲಕಾರಿಯಾಗದೇ ನಟಿ ಉತ್ತರಾ ನಿಧನರಾಗಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್‌ ಕೊಲ್ಲುವುದಾಗಿ ಹೇಳಿದ್ದ ರಾಕಿ ಭಾಯ್ ಬಂಧನ

ಗಿರೀಶ್ ಕಾರ್ನಾಡ್ ಅವರ ತುಘಲಕ್‌ನಲ್ಲಿ ತಾಯಿ ಪಾತ್ರ ಸೇರಿದಂತೆ ಹಲವು ನಾಟಕಗಳಲ್ಲಿ ಉತ್ತರಾ ಬಾಕರ್ (Uttara Baokar) ನಟಿಸಿದ್ದಾರೆ. ಸಾಕಷ್ಟು ಹಿಂದಿ – ಮರಾಠಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

‘ಏಕ್ ದಿನ್ ಅಚಾನಕ್’ ಚಿತ್ರದಲ್ಲಿನ ನಟನೆಗಾಗಿ 1988ರಲ್ಲಿ ರಾಷ್ಟ್ರ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು. ಹಿರಿಯ ನಟಿ ಉತ್ತಾರಾ ಬಾಕರ್ ನಿಧನದ ಸುದ್ದಿ ಕೇಳ್ತಿದ್ದಂತೆ ಚಿತ್ರರಂಗದ ನಟ-ನಟಿಯರು ಆಪ್ತರು ಸಂತಾಪ ಸೂಚಿಸಿದ್ದಾರೆ. ಅಂದಹಾಗೆ ಉತ್ತರಾ ಅವರ ಅಂತ್ಯಸಂಸ್ಕಾರವನ್ನು ಬುಧವಾರ ಬೆಳಿಗ್ಗೆ ಪುಣೆಯಲ್ಲಿ ನೆರವೇರಿಸಲಾಗಿದೆ.

Share This Article