ದೆಹಲಿ ಚುನಾವಣೆ ದಿನದಂದೇ ಮಹಾ ಕುಂಭಮೇಳದಲ್ಲಿ ಮೋದಿ ಪುಣ್ಯಸ್ನಾನ

Public TV
0 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ದೆಹಲಿ ವಿಧಾನಸಭಾ ಚುನಾವಣೆ ದಿನದಂದೇ (ಫೆ.5) ಪ್ರಯಾಗ್ ರಾಜ್‌ನ (Prayagraj) ಮಹಾ ಕುಂಭಮೇಳಕ್ಕೆ (Kumbhmela) ಭೇಟಿ ನೀಡಿ ಪುಣ್ಯಸ್ನಾನ ಮಾಡಲಿದ್ದಾರೆ.

ಮೋದಿ ಮಾತ್ರವಲ್ಲದೆ, ರಾಷ್ಟ್ರಪತಿ ದೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ವರ್, ಗೃಹ ಸಚಿವ ಅಮಿತ್ ಶಾ ಕೂಡಾ ಪುಣ್ಯ ಸ್ನಾನ ಮಾಡುವ ದಿನಾಂಕ ನಿಗದಿಯಾಗಿದೆ. ಗೃಹಸಚಿವ ಅಮಿತ್ ಶಾ ಜ.27 ರಂದು, ಉಪರಾಷ್ಟ್ರಪತಿ ಜಗದೀಪ್ ಧನ್ವರ್ ಫೆ.1 ರಂದು, ರಾಷ್ಟ್ರಪತಿ ದೌಪದಿ ಮುರ್ಮು ಫೆ.10 ರಂದು ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ.

ಕುಂಭಮೇಳಕ್ಕೆ ಗಣ್ಯಾತಿಗಣ್ಯರ ಆಗಮನ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

Share This Article